ನ್ಯಾಯಮೂರ್ತಿ ಕರ್ಣನ್ ಗೆ ನಾಲ್ಕು ವಾರಗಳ ಗಡುವು ನೀಡಿದ ಸುಪ್ರೀಂ
ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆಯ ವಿಚಾರಣೆ ಶುಕ್ರವಾರದಿಂದ ಆರಂಭವಾಯಿತು.
ನವದೆಹಲಿ, ಮಾರ್ಚ್ 31: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಕಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಸಿ.ಎಸ್. ಕರ್ಣನ್ ಅವರಿಗೆ ಅವರ ವಿರುದ್ಧದ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ನಾಲ್ಕು ವಾರಗಳ ಕಾಲ ಗಡುವು ನೀಡಿದೆ.
ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆಯ ವಿಚಾರಣೆ ಶುರುವಾಗಿದೆ.
ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದ ಕರ್ಣನ್ ಅವರು, '' ನನ್ನ ಹೋರಾಟ ನ್ಯಾಯಾಂಗದ ವಿರುದ್ಧವಲ್ಲ. ನನ್ನ ಹೋರಾಟ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ನ್ಯಾಯಧೀಶರನ್ನು ನಡೆಸಿಕೊಳ್ಳುತ್ತಿರುವ ದುರವಸ್ಥೆಯ ವಿರುದ್ಧ. ಇದು ನಿಮಗೆ ಸರಿಯಲ್ಲ ಎಂದು ಎನಿಸಿದರೆ ನನ್ನನ್ನು ಜೈಲಿಗೆ ಕಳುಹಿಸಿ'' ಎಂದು ಏಳು ಸದಸ್ಯರಿರುವ ನ್ಯಾಯಪೀಠಕ್ಕೆ ಸವಾಲು ಎಸೆದರು.
ದಿನದ ಕಲಾಪದಲ್ಲಿ ಸುಪ್ರೀಂ ಕೋರ್ಟ್, ಕರ್ಣನ್ ನಡುವೆ ನಡೆದ ಮಾತಿನ ಚಕಮಕಿಯ ತುಣುಕುಗಳು ಇಲ್ಲಿವೆ.












Click it and Unblock the Notifications