ಗಲ್ಲು ಶಿಕ್ಷೆ ತಪ್ಪಿಸಿಕೊಂಡ ರಾಜೀವ್ ಹಂತಕರು
ನವದೆಹಲಿ, ಜ.21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು, ನರಹಂತಕ ವೀರಪ್ಪನ್ ನ ಸಹಚರರೂ ಸೇರಿದಂತೆ 15 ಮಂದಿ ಆರೋಪಿಗಳ ಗಲ್ಲು ಶಿಕ್ಷೆ ಕುರಿತಂತೆ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ
ಮರಣದಂಡನೆ ರದ್ದು ಕೋರಿ ಸಲ್ಲಿಸಿದ ಕ್ಷಮಾದಾನ ಅರ್ಜಿ ರದ್ದಾದ 14 ದಿನಗಳ ಒಳಗೆ ಗಲ್ಲು ಶಿಕ್ಷೆ ಜಾರಿಗೊಳಿಸದಿದ್ದರೆ ಅಂಥ ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್ ನ ಪೀಠ ತೀರ್ಪು ನೀಡಿದೆ.
ಯಾವುದೇ ಅಪರಾಧಿಯ ಮರಣದಂಡನೆ ಶಿಕ್ಷೆಯನ್ನು ರಾಷ್ಟ್ರಪತಿಗಳು ಇಲ್ಲವೇ ರಾಜ್ಯಪಾಲರು ತಿರಸ್ಕರಿಸಿದರೆ ಆ ಮಾಹಿತಿಯನ್ನು ಕುಟುಂಬ ಸದಸ್ಯರಿಗೆ ಕಡ್ಡಾಯವಾಗಿ ಮಾಹಿತಿ ತಲುಪಿಸಬೇಕು. ಜತೆಗೆ ಕೈದಿಗಳಿಗೆ ಕಾನೂನಿನ ನೆರವು ನೀಡಬೇಕೆಂದು ಸೂಚನೆ ನೀಡಲಾಗಿದೆ.
ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗೆ ನೇಣುಹಾಕದಿದ್ದರೆ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. 14 ದಿನಗಳೊಳಗೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಾಗದಿದ್ದರೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ತಾಕೀತು ಮಾಡಿದೆ. ಸುಪ್ರೀಂಕೋರ್ಟ್ ನೀಡಿರುವ ಇಂದಿನ ಮಹತ್ವದ ತೀರ್ಪೂ ಸಾವಿರಾರು ಅಪರಾಧಿಗಳಿಗೆ ಮರು ಜನ್ಮ ನೀಡಿದೆ ಎನ್ನಬಹುದು.

ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರನ್ನು 1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ರಾಜೀವ್ ಗಾಂಧಿ ಅವರು ಎಲ್ ಟಿಟಿಇ ನಡೆಸಿದ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. ಎಲ್ ಟಿಟಿಐ ಪರ ನಿಲುವು ಹೊಂದಿದ್ದ ಬುಲ್ಲೂರ್, ದಾಸ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಗಲ್ಲು ಶಿಕ್ಷೆ ಪಡೆದಿದ್ದ ಇಬ್ಬರು ಶ್ರೀಲಂಕನ್ನರು ಮತ್ತು ಒಬ್ಬ ಭಾರತೀಯ ಪ್ರಜೆಯನ್ನು ಸೆ.9, 2011ರಂದು ನೇಣುಗಂಬಕ್ಕೇರಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿರುವ ಮುರುಗನ್, ಸಾಂತನ್ ಹಾಗೂ ಪೆರರಿವಳನ್ ಅವರ ಕ್ಷಮಾದಾನ ಮನವಿಯನ್ನು ಈ ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿರಸ್ಕರಿಸಿದ್ದರು. ಆದರೆ, ಗಲ್ಲುಶಿಕ್ಷೆ ವಿಧಿಸಬಾರದು ಎಂದು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. [ವೀರಪ್ಪನ್ ಬಂಟರು ನಿರಾಳ]
* ವೀರಪ್ಪನ್ ಪ್ರಕರಣದಲ್ಲಿ ಗಲ್ಲು ಶಿಕ್ಷೆ ತಪ್ಪಿಸಿಕೊಂಡವರು ಸೈಮನ್, ಜ್ಞಾನ ಪ್ರಕಾಶ್, ಮೀಸೆಕಾರ ಮಾದಯ್ಯ, ಬಿಲವೇಂದ್ರ
* ಚಾಮರಾಜನಗರ ಯುವತಿ ಅತ್ಯಾಚಾರ ಜೋಡಿ ಕೊಲೆ ಪ್ರಕರಣದ ಶಿವು, ಜಡೇಸ್ವಾಮಿ
* ರಾಜೀವ್ ಗಾಂಧಿ ಹತ್ಯೆ ಪ್ರಕರಣ ಮುರುಗನ್, ಸಂತಾನ್, ಪೆರಾರಿವಲನ್
* ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ ದೇವೇಂದ್ರ ಪಾಲ್ ಸಿಂಗ್ ಭುಲ್ಲರ್
* ಉತ್ತರಾ ಖಂಡ್ ಕೊಲೆ ಪ್ರಕರಣದ ಸುಂದರ್ ಸಿಂಗ್ ಭಂಡಾರಿ, ಜಾಫರ್ ಆಲಿ, ಮಂಗಳ್ ನಾಥ್
* ಜತೆಗೆ ಮಂಗಳೂರಿನ ಪ್ರವೀಣ್ ಕುಮಾರ್, ಸಾಯಿಬಣ್ಣ ಪ್ರಕರಣಕ್ಕೆ ಈ ಆದೇಶ ಅನ್ವಯವಾಗಲಿದೆ.












Click it and Unblock the Notifications