ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷದ್ವೀಪ ಉಳಿಸಿ ಅಭಿಯಾನ: ಪ್ರಧಾನಿಗೆ 93 ನಿವೃತ್ತ ಅಧಿಕಾರಿಗಳ ಸಹಿಯುಳ್ಳ ಪತ್ರ

|
Google Oneindia Kannada News

ಕೊಚ್ಚಿ, ಜೂನ್ 06: ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ದೇಶದ ಹಿರಿಯ ನಿವೃತ್ತ ಅಧಿಕಾರಿಗಳ ಸಹಿಯನ್ನು ಕ್ರೂಢೀಕರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವನ್ನು ಬರೆಯಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಲಕ್ಷದ್ವೀಪ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ.

ಆಡಳಿತಾಧಿಕಾರಿ ಲಕ್ಷದ್ವೀಪ ಸಂಸ್ಕೃತಿ ಅರಿಯುವ ಕೆಲಸ ಎಂದಿಗೂ ಮಾಡಿಲ್ಲ: ಸಂಸದಆಡಳಿತಾಧಿಕಾರಿ ಲಕ್ಷದ್ವೀಪ ಸಂಸ್ಕೃತಿ ಅರಿಯುವ ಕೆಲಸ ಎಂದಿಗೂ ಮಾಡಿಲ್ಲ: ಸಂಸದ

ಪ್ರಪುಲ್ ಪಟೇಲ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ದೂಷಿಸಿದ್ದಾರೆ.
ಲಕ್ಷದ್ವೀಪದ ಪರಿಸರ ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿ ಇರುವ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ. ಆಡಳಿತಾಧಿಕಾರಿ ರೂಪಿಸಿರುವ ಪ್ರತಿ ನಿರ್ಣಯಗಳು ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಿಗೆ ನಿರಂಕುಶ ಪ್ರಭುತ್ವದ ಸಂಕೇತದಂತೆ ಗೋಚರಿಸುತ್ತಿವೆ.

Save lakshadweep campaigns: Amid Disturbing Developments Ex-Bureaucrats Writes A Letter To Modi

ಸಾಮಾಜಿಕ ಜಾಲತಾಣದಲ್ಲಿ ಲಕ್ಷದ್ವೀಪ ಉಳಿಸಿ ಅಭಿಯಾನ:
ಲಕ್ಷದ್ವೀಪದಲ್ಲಿ ವಿವಾದಕ್ಕೆ ಕಾರಣವಾಗಿರುವ ನಿರ್ಧಾರಗಳನ್ನು ವಾಪಸ್ ಪಡೆಯುವಂತೆ 93 ಹಿರಿಯ ಅಧಿಕಾರಿಗಳ ಸಹಿ ಸಂಗ್ರಹಿಸಿದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿ ಕೊಡಲಾಗಿದೆ. ಪ್ರಜೆಗಳಿಗೆ ಸ್ಪಂದಿಸುವ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಇದರ ಮಧ್ಯೆ ಇನ್ನೊಂದು ದಿಕ್ಕಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಿರುದ್ಧ ಅಭಿಯಾನ ಆರಂಭವಾಗಿದೆ. ಲಕ್ಷದ್ವೀಪ ಉಳಿಸಿ ಅಭಿಯಾನವನ್ನು ನಡೆಸಲಾಗುತ್ತಿದೆ.

English summary
Save lakshadweep campaigns: Amid Disturbing Developments Ex-Bureaucrats Writes A Letter To Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X