Airstrike Satellite Photos: ಅಪರೇಷನ್ ಸಿಂದೂರ! ಹಾನಿಯ ಮೊದಲು-ನಂತರದ ಫೋಟೋಗಳು ಬಿಡುಗಡೆ
Operation Sindoor updates: ಭಾರತ ಸೇನೆಯು ಕಳೆದ 24 ಗಂಟೆಗಳ ಹಿಂದೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಉಗ್ರರ ಶಿಬಿರಗಳು ಧ್ವಂಸಗೊಂಡಿವೆ. ಇದಕ್ಕೆ ಸಂಬಂಧಿಸಿದ ದಾಳಿಯ ಮೊದಲು ಮತ್ತು ನಂತರ ಹಾನಿಯ ಸ್ಯಾಟ್‌ಲೈಟ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಮಸೀದಿ, ಅಡಗು ತಾಣಗಳು ಮಿಸೈಲ್ ದಾಳಿಗೆ ಹಾನಿಗೊಳಲಾಗಿವೆ. ಈ ಮೂಲಕ ಭಾರತದ ತಂಟೆಗೆ ಬಂದರೆ ಏನೆಲ್ಲ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಭಾರತೀಯ ಸೇನೆ ರವಾನಿಸಿದೆ.
ಮ್ಯಾಕ್ಸರ್ ಟೆಕ್ನಾಲಜೀಸ್‌ನ ಉಪಗ್ರಹ ಚಿತ್ರಗಳು ಇವಾಗಿವೆ. ದಾಳಿಗೆ ಮೊದಲು ಮತ್ತು ನಂತರ, ಬಹಾವಲ್ಪುರದ ಜಾಮಿಯಾ ಮಸೀದಿ ಮತ್ತು ಪಾಕಿಸ್ತಾನದ ಮುರಿಡ್ಕೆ ನಗರದ ಮೇಲೆ ಭಾರತೀಯ ಕ್ಷಿಪಣಿ ದಾಳಿಯಿಂದ ಉಂಟಾದ ಹಾನಿಯನ್ನು ತೋರಿಸುತ್ತವೆ. ಹಾನಿಯ ಮೊದಲು ಹೇಗಿತ್ತು. ನಂತರ ಯಾವ ರೀತಿಯಲ್ಲಿ ಮಸೀದಿ ಚಿತ್ರಣ ಬದಲಾಗಿದೆ ಎಂಬುದನ್ನು ನೀವು ನೋಡಬಹುದು.

ಇಂತಹ ಹಾನಿ ಕೇವಲ ಎರಡು ಕಡೆಗಳಲ್ಲಿ ಅಲ್ಲ ಒಂಬಂತ್ತು ಪ್ರದೇಶಗಳ ಅನೇಕ ಕಡೆಗಳಲ್ಲಿ ಇಂತದ್ದೆ ಹಾನಿಯನ್ನು ಭಾರತೀಯ ಸೇನೆ ಮಾಡಿದೆ. ಏರ್ ಸ್ಟ್ರೈಕ್ ಮೂಲಕ ಗಡಿಯಲ್ಲಿನ ಪಾಕ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಮೊದಲೇ ಗುಪ್ತಚರ ಮಾಹಿಡಿ ಪಡೆದು ದಾಳಿ ನಡೆಸಿದ್ದರಿಂದ ಉಗ್ರರಿಗೆ ತಕ್ಕ ಉತ್ತರ ನೀಡಲು ಸಾಧ್ಯವಾಗಿದೆ. ಯಾವುದೇ ನಾಗರಿಕರಿಗೆ ತೊಂದರೆ ಆಗಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
{embed-poll}
ಪಾಕಿಸ್ತಾನಿ ಉಗ್ರರ ಅಡಗು ತಾಣಗಳ ಬೆನ್ನಲ್ಲೆ ಪಂಜಾಬ್‌ನ ಲಾಹೋರ್ ಭಾಗದಲ್ಲಿ ಮೂರು ನಾಲ್ಕು ಕಡೆಗಳಲ್ಲಿ ಮಿಸೈಲ್ ಹಾಕಿದ ಶಬ್ದ ಕೇಳಿ ಬಂದಿದೆ. ಭಾರೀ ಸ್ಪೋಟಕ ಶಬ್ದವಾಗುತ್ತಿದ್ದಂತೆ ಮನೆಯಿಂದ ಎಲ್ಲರು ಹೊರ ಬಂದಿದ್ದಾರೆ. ಭಾರತ ಪಾಕ್ ವ್ಯಾಪ್ತಿಯ ಪಂಜಾಬ್ ಭಾಗಗಳಲ್ಲೂ ದಾಳಿ ನಡೆಸಿತೇ ಎಂಬ ಆತಂಕ ಅಲ್ಲಿನ ಜನರಲ್ಲಿ ಕಾಡುತ್ತಿದೆ. ಸ್ಪೋಟಿಸಿ ಶಬ್ದ ಕಡೆಗೆ ಕಪ್ಪು ಹೊಗೆ ಕಂಡು ಬಂತೆ ವಿನಃ ಬೇರಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪಾಕಿಸ್ತಾನಿಗಳು ಭಯದಲ್ಲೇ ಬದುಕುವಂತಾಗಿದೆ.
ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂದೂರ ನಂತರ ಮಾತನಾಡಿದ್ದಾರೆ. ನಮ್ಮ ಸೇನೆ ಏರ್ ಸ್ಟ್ರೈಕ್ ಮಾಡಿ ಪಾಪಿ ಪಾಕಿಸ್ತಾನಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನ ಜೊತೆಗಿನ ಜಲ ಒಪ್ಪಂದ ಯಾವ ಕಾರಣಕ್ಕೂ ಮುಂದುವರಿಸುವ ಸಾಧ್ಯತೆಯೇ ಇಲ್ಲ. ಈಗಾಗಲೇ ಸಿಂದೂ ಜಲ ಒಪ್ಪಂದ ಕೈ ಬಿಡಲಾಗಿದೆ. ಅದನ್ನು ಮುಂದುವರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುಡುಗಿದ್ದಾರೆ.












Click it and Unblock the Notifications