ಜಯಾ ಸಾವಿನ ಸಿಬಿಐ ತನಿಖೆಗೆ ಒಪ್ಪದ ಸುಪ್ರೀಂ ಕೋರ್ಟ್

Posted By: Chethan
Subscribe to Oneindia Kannada

ನವದೆಹಲಿ, ಜ. 5: ಕಳೆದ ತಿಂಗಳು ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಜಯಲಲಿತಾ ಅವರ ಸಾವಿನ ಕುರಿತಂತೆ ಸಿಬಿಐ ತನಿಖೆಗೊಳಪಡಿಸಲು ಅನುಮತಿ ನೀಡಬೇಕೆಂದು ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಜಯಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಎಐಡಿಎಂಕೆ ಪಕ್ಷದಿಂದ ವಜಾಗೊಂಡಿರುವ ಸಂಸದೆ ಶಶಿಕಲಾ ಪುಷ್ಪ, ಈ ಅರ್ಜಿ ಸಲ್ಲಿಸಿದ್ದರು.
ದೀರ್ಘಾವಧಿಯವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ಜಯಲಲಿತಾ ಅವರು ಚೇತರಿಸಿಕೊಳ್ಳದೇ ನಿಧನರಾಗಿದ್ದಕ್ಕೆ ಪುಷ್ಪಾ ಅರ್ಜಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

sasikala's petition seeking CBI probe into Jayalalithaa’s death is rejected by Supreme court.

ಆಸ್ಪತ್ರೆಯಲ್ಲಿ ಜಯಲಲಿತಾ ಸುಮಾರು ಎರಡು ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೂ ಅವರ ಯೋಗ ಕ್ಷೇಮ ವಿಚಾರಿಸಲು ಬಂದ ಯಾರಿಗೂ ಜಯಲಲಿತಾ ಅವರನ್ನು ಭೇಟಿ ಮಾಡುವ ಅವಕಾಶ ಮಾಡಿಕೊಡಲಾಗಿಲ್ಲ. ಅದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಶಶಿಕಲಾ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು, ಸೆಪ್ಟಂಬರ್ ತಿಂಗಳಲ್ಲಿ ನಿರ್ಜಲೀಕರಣದಿಂದಾಗಿ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 75 ದಿನಗಳವರೆಗೂ ಚಿಕಿತ್ಸೆ ಮುಂದುವರಿದು ಡಿ. 5ರಂದು ಅವರು ಕೊನೆಯುಸಿರೆಳೆದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
petition seeking CBI probe into Jayalalithaa’s death is rejected by Supreme court. This petition was filed by by AIDMK expelled MP Sasikala Pushpa.
Please Wait while comments are loading...