ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದ ಘಟನೆ ತುರ್ತು ಪರಿಸ್ಥಿತಿ ದಿನ ನೆನಪಿಸುತ್ತೆ: ದೇವೇಗೌಡ

|
Google Oneindia Kannada News

ಬೆಂಗಳೂರು, ಫೆಬ್ರವರಿ 04: ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿದ್ದು ತಿರುಗುಬಾಣವಾಗಿದೆ. ಸಿಬಿಐ ಅಧಿಕಾರಿಗಳನ್ನೆ ಅಲ್ಲಿನ ಪೊಲೀಸರು ಘೇರಾವ್ ಮಾಡಿ ಕಟ್ಟಿ ಹಾಕಿದ್ದಾರೆ. ಕೋಲ್ಕತಾದಲ್ಲಿನ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಇದು ಆಘಾತ ಬೆಳವಣಿಗೆ ಎಂದಿದ್ದಾರೆ.

ಪಟ್ಟು ಬಿಡದ ದೀದಿ: ಸುಪ್ರೀ ಕೋರ್ಟ್ ಮೊರೆಹೋದ ಸಿಬಿಐಪಟ್ಟು ಬಿಡದ ದೀದಿ: ಸುಪ್ರೀ ಕೋರ್ಟ್ ಮೊರೆಹೋದ ಸಿಬಿಐ

'ಕೋಲ್ಕತಾ ಪೊಲೀಸ್ ಆಯುಕ್ತರನ್ನು ಬಂಧಿಸಲು ಸಿಬಿಐ ತಂಡ ಅಷ್ಟು ಆತುರವಾಗಿ ತೆರಳಿದ್ದು ನೋಡಿದರೆ ಆಘಾತವಾಗುತ್ತದೆ. ಅಸಂವಿಧಾನತ್ಮಕ ವಿಧಾನಗಳನ್ನು ಈ ದೇಶ ಈ ಹಿಂದೆ ಕೂಡಾ ಇಂಥ ಪರಿಸ್ಥಿತಿಯನ್ನು ಎದುರಿಸಿದೆ. ಪಶ್ಚಿಮ ಬಂಗಾಳದ ಬೆಳವಣಿಗೆಗಳನ್ನು ನೋಡಿದರೆ ತುರ್ತು ಪರಿಸ್ಥಿತಿಯ ದಿನಗಳು ನೆನಪಿಗೆ ಬರುತ್ತಿದೆ' ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.

ದೇವೇಗೌಡರ ಬಲಗಾಲಿನ ಮಂಡಿ ಟ್ವಿಸ್ಟ್: ಅಪಾಯವಿಲ್ಲ ಎಂದ ವೈದ್ಯರುದೇವೇಗೌಡರ ಬಲಗಾಲಿನ ಮಂಡಿ ಟ್ವಿಸ್ಟ್: ಅಪಾಯವಿಲ್ಲ ಎಂದ ವೈದ್ಯರು

ಕೋಲ್ಕತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿರುವ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ನಿವಾಸದ ಬಳಿ ಭಾನುವಾರ ರಾತ್ರಿ ಹೈಡ್ರಾಮಾ ನಡೆದಿದೆ. ಪ್ರಕರಣದ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅಷ್ಟರಲ್ಲೀ ಈ ಘಟನೆ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸ್ಥಳಕ್ಕೆ ಧಾವಿಸಿ ಬಂದರು.

Sarada Scam : HD Deve Gowda reacts on Shocking Developments in Kolkata

ಸಿಬಿಐ ಅಧಿಕಾರಿಗಳಿದ್ದ ವಾಹನವನ್ನು ಪೊಲೀಸರು ಘೇರಾವ್ ಮಾಡಿದರು. ನಂತರ ಸಿಬಿಐ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು. ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಧರಣಿ ಕುಳಿತುಕೊಂಡರು.

ಸುಮಾರು 2,500 ಕೋಟಿ ರು ಮೊತ್ತದ ಶಾರದಾ ಹಗರಣದ ತನಿಖೆಯನ್ನು ಈ ಹಿಂದೆ ಪೊಲೀಸ್ ನಗರ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿತ್ತು. ಆದರೆ, 2014ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.

English summary
JDS supremo, former PM HD Deve Gowda has reacted about the developments in West Bengal. Deve Gowda tweeted saying he was shocked to learn abouot CBI rushing to arrest Police Commissioner and called it is similar to emergency days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X