Sankranti Festival Special Train: ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ರೈಲು ಸಂಚಾರ, ದಿನಾಂಕ, ಸಮಯದ ವಿವರ
ಬೆಂಗಳೂರು, ಜನವರಿ 11: ಕರ್ನಾಟಕದ ಪಾಲಿಗೆ ಸಂಕ್ರಾಂತಿ ಹಬ್ಬ ಹಾಗೂ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಇದೇ ಜನವರಿ 15ರಂದು ಆಚರಿಸಲಾಗುತ್ತದೆ. ಈ ಸಂಬಂಧ ನೈರುತ್ಯ ರೈಲ್ವೆಯು ಬೆಂಗಳೂರು-ತಮಿಳುನಾಡಿಗೆ ವಿಶೇಷ ರೈಲು (Sankranti fesival special train) ಬಿಡುಗಡೆ ಮಾಡಿದೆ. ಅದು ಯಾವಾಗ ಹೊರಡಲಿದೆ, ಸಮಯ, ದಿನಾಂಕ ಇನ್ನಿತರ ಮಾಹಿತಿ ಇಲ್ಲಿ ತಿಳಿಯಿರಿ.
ಹಬ್ಬದ ಅಂಗವಾಡಿ ಕರ್ನಾಟಕಕ್ಕೆ ಬರುವ ಮತ್ತು ಕರ್ನಾಟಕದಿಂದ ತಮಿಳುನಾಡು ತೆರಳುವವರನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ವಿಭಾಗವು ಈ ವಿಶೇಷ ರೈಲು ಸೇವೆಯನ್ನು ಒದಗಿಸುತ್ತಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಲುಪಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ತಿರುಚ್ಚಿರಾಪಳ್ಳಿ ನಿಲ್ದಾಣಗಳ ನಡುವೆ ಈ ವಿಶೇಷ ರೈಲು ಒಂದು ಬಾರಿ ಸಂಚಾರ ನಡೆಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಸಕ್ರಾಂತಿ ಹಬ್ಬದ ಈ ವಿಶೇಷ ರೈಲು (ಸಂಖ್ಯೆ 06577/06578) ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ತಮಿಳುನಾಟಿನ ತಿರುಚಿರಾಪಳ್ಳಿಗೆ ತೆರಳಿ ಮತ್ತದೇ ವಾಪಾಸ್ ಬೆಂಗಳೂರಿಗೆ ಮರಳಲಿದೆ. ಈ ಮೂಲಕ ಒಂದು ಬಾರಿ ಸಂಚಾರ ಮಾಡಲಿದೆ.
ಹಬ್ಬದ ವಿಶೇಷ ರೈಲಿನ ಸಂಚಾರ ಸಮಯ, ಪಟ್ಟಿ
ಬೆಂಗಳೂರು-ತಿರುಚಿರಾಪಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 06577) ಬೆಂಗಳೂರಿನ SMVTಯಿಂದ ಜನವರಿ 12ರಂದು ಮಧ್ಯಾಹ್ನ 02:30 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ರಾಜಧಾನಿಯಿಂದ ಹೊರಟ ರೈಲು ಅದೇ ದಿನ ರಾತ್ರಿ 11.30ಕ್ಕೆ ತಮಿಳುನಾಡಿನ ತಿರುಚಿರಾಪಳ್ಳಿ ನಿಲ್ದಾಣ ತಲುಪುತ್ತದೆ.
ಈ ವಿಶೇಷ ರೈಲಿನ ನಿಲುಗಡೆ ನೋಡುವುದಾದರೆ, ಬಂಗಾರಪೇಟೆ, ಸೇಲಂ, ನಮಕ್ಕಲ್, ಕರೂರ್ ಮತ್ತು ತಿರುಚಿರಾಪಳ್ಳಿ ಕೋಟೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಸುದೀರ್ಘ ಒಂಬತ್ತು ಗಂಟೆಗಳ ದೂರ ಮಾರ್ಗವನ್ನು ಕ್ರಮಿಸಲಿದೆ.

ತಿರುಚಿರಾಪಳ್ಳಿ-ಬೆಂಗಳೂರಿಗೆ ವಾಪಾಸ್ ವಿವರ
ಇಲ್ಲಿ ತೆರಳಿದ ಇದೇ ವಿಶೇಷ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ 06578) ಮರುದಿನ ಅಂದ್ರೆ ಜನವರಿ 13 ರಂದು ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಬೆಳ್ಳಂಬೆಳ್ಳಗ್ಗೆ 04.45 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12.00 ಗಂಟೆಗೆ ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಂದು ತಲುಪುತ್ತದೆ.
ಬರುವಾಗ ಈ ರೈಲು ಕರೂರ್, ನಮಕ್ಕಲ್, ಸೇಲಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಒಟ್ಟು ಎರಡು ಎಸಿ ಬೋಗಿ (ಟೈರ್), ಆರು ಎಸಿ ತ್ರಿ ಟೈರ್, ಎಂಟು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ ಬೋಗಿ, ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಫ್ರೆಂಡ್ ಕಂಪಾರ್ಟ್‌ಮೆಂಟ್ (2) ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ. (ವಿಶೇಷ ಸೂಚನೆ: ಬೆಡ್ ಶೀಟು ಮತ್ತು ಹೊದಿಕೆ ಇರುವುದಿಲ್ಲ)
ನೀವು ಹಬ್ಬಕ್ಕೆ ತಮಿಳುನಾಡಿಗೆ ಹೋಗಬೇಕಿದ್ದರೆ, ಅಲ್ಲಿಂದ ಬೆಂಗಳೂರು/ಕರ್ನಾಟಕಕ್ಕೆ ಬರುವವರು ಇದ್ದರೆ ಟಿಕೆಟ್ ಬುಕ್ ಮಾಡಲು IRCTC ಜಾಲತಾಣಕ್ಕೆ ಭೇಟಿ ಕೊಡಿ. ಹೆಚ್ಚಿನ ಮಾಹಿತೆ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ ನ ಈ ಲಿಂಕ್ (https://enquiry.indianrail.gov.in) ಮೇಲೆ ಕ್ಲಿಕ್ ಮಾಡಿ, ಇಲ್ಲವೇ 139 ಸಂಖ್ಯೆಗೂ ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.












Click it and Unblock the Notifications