ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಘಟನಾವಳಿಗಳು
ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜಸ್ಥಾನದ ಜೋದ್‌ಪುರ ಸಿಜೆಎಂ ಕೋರ್ಟ್ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿದೆ.
20 ವರ್ಷಗಳ ಹಿಂದೆ ನಡೆದಿದ್ದ ಘಟನೆಗೆ ಇಂದು ಶಿಕ್ಷೆ ಪ್ರಕಟವಾಗಿದೆ. ಸಲ್ಮಾನ್ ಹೊರತು ಪಡಿಸಿ ಉಳಿದ ನಟರಾದ ಸೈಫ್ ಅಲಿ ಖಾನ್, ಟಬು, ಸೊನಾಲಿ ಬೇಂದ್ರೆ, ನೀಲಂ ಅವರುಗಳು ಆರೋಪದಿಂದ ಖುಲಾಸೆಗೊಂಡಿದ್ದಾರೆ.
ಏನಿದು ಕೃಷ್ಣಮೃಗ ಪ್ರಕರಣ ಈ 20 ವರ್ಷಗಳಲ್ಲಿ ಆದದ್ದು ಏನು, ಪ್ರಕರಣ ಹೇಗೆಲ್ಲಾ ತಿರುವು ಪಡೆಯಿತು. ತಿಳಿಯಲು ಮುಂದೆ ಓದಿ...
ಸೆಪ್ಟೆಂಬರ್ 1998: 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಭೇಟೆ. ಸಲ್ಮಾನ್ ಜೊತೆಯಲ್ಲಿ ಸಹ ನಟರಾದ ಸೈಫ್ ಅಲಿ ಖಾನ್, ಟಬು, ನೀಲಂ,ಸೊನಾಲಿ ಬೇಂದ್ರೆ ಅವರು ಇದ್ದರು ಎಂಬ ಗುಮಾನಿ.

ಅಕ್ಟೋಬರ್ 2, 1998: ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿ ಪ್ರ ಅಡಿ ಪ್ರಕರಣ ದಾಖಲು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಅಕ್ಟೋಬರ್ 12, 1998: ಕೃಷ್ಣಮೃಗ ಮತ್ತು ಇತರ ಒಂದು ಮೃಗದ ಭೇಟೆ ಆರೋಪದಡಿ ಪೊಲೀಸರಿಂದ ಸಲ್ಮಾನ್ ಖಾನ್ ಬಂಧನ ಮತ್ತು ಅಂದೇ ಜಾಮೀನಿನ ಮೇಲೆ ಬಿಡುಗಡೆ.
ಏಪ್ರಿಲ್ 10, 2006: ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ 25,000 ದಂಡ ಮತ್ತು 5 ವರ್ಷಗಳ ಜೈಲುವಾಸದ ಶಿಕ್ಷೆ ತೀರ್ಪು, ಆದರೆ ಒಂದು ವಾರದ ಸೆರೆವಾಸದ ಬಳಿಕ ಜಾಮೀನು ಪಡೆದ ಸಲ್ಮಾನ್ ಖಾನ್.
ಆಗಸ್ಟ್ 31, 2006: ಸಲ್ಮಾನ್ ಖಾನ್‌ಗೆ ವಿಧಿಸಿದ್ದ ಶಿಕ್ಷೆ ರದ್ದು ಪಡಿಸಿದ ರಾಜಸ್ಥಾನ ಕೋರ್ಟ್, ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳದಂತೆ ತಾಕೀತು.
ಜುಲೈ 25, 2016: ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಲ್ಮಾನ್ ಖಾನ್ ಮೇಲೆ ಹೊರಿಸಿದ್ದ ಆರೋಪಗಳಿಂದ ಖುಲಾಸೆ, ಸಲ್ಮಾನ್ ಖಾನ್ ಮೇಲಿನ ಆರೋಪವನ್ನು ರುಜುವಾತು ಮಾಡಲು ಸರಿಯಾದ ಸಾಕ್ಷ್ಯಗಳಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್. ಸತ್ತ ಮೃಗಗಳು ಸಲ್ಮಾನ್ ಖಾನ್ ಅವರ ಪರವಾನಗಿ ಹೊಂದಿದ ಗನ್‌ನಿಂದ ಕೊಂದದ್ದು ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದ ಹೈಕೋರ್ಟ್.
ನವೆಂಬರ್ 11, 2016: ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜಸ್ಥಾನ ಸರ್ಕಾರದಿಂದ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ. ಸುಪ್ರೀಂ ಕೋರ್ಟ್‌ನಿಂದ ಸಲ್ಮಾನ್ ಖಾನ್‌ಗೆ ನೊಟೀಸ್.
ಏಪ್ರಿಲ್ 05, 2018: ಜೋದ್‌ಪುರ ಕೋರ್ಟ್‌ನಿಂದ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು, ಎರಡು ವರ್ಷ ಶಿಕ್ಷೆ ಪ್ರಕಟ. ಸಲ್ಮಾನ್ ಸಹಚರರಾದ ಸೈಫ್ ಅಲಿ ಖಾನ್, ಟಬು, ನೀಲಂ, ಸೊನಾಲಿ ಬೇಂದ್ರೆ ಅವರು ಆರೋಪ ಮುಕ್ತ.












Click it and Unblock the Notifications