'ನನ್ನ ಸುತ್ತ ಹಲವು ಬಂದೂಕುಗಗಳಿವೆ': ಜೀವ ಬೆದರಿಕೆ ಪತ್ರಗಳ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್
ಮುಂಬೈ, ಏಪ್ರಿಲ್. 30: ಗ್ಯಾಂಗ್‌ಸ್ಟರ್‌ಗಳ ಟಾರ್ಗೆಟ್ ಲಿಸ್ಟ್‌ನಲ್ಲಿರುವ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದು, ಕೊನೆಗೂ ತಮ್ಮ ಅನುಭವ ಮತ್ತು ಅದನ್ನು ಹೇಗೆ ಎದುರಿಸುತ್ತಿದ್ದೇನೆ ಎಂಬ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈಗಾಗಲೇ ಮುಂಬೈ ಪೋಲಿಸರು ಸಲ್ಮಾನ್ ಖಾನ್‌ಗೆ Y+ ವರ್ಗದ ಭದ್ರತೆಯನ್ನು ಒದಗಿಸಿದ್ದಾರೆ.
ಇಂಡಿಯಾ ಟಿವಿಯ 'ಆಪ್ ಕಿ ಅದಾಲತ್' ಶೋನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಸಲ್ಮಾನ್ ಖಾನ್, "ಅಭದ್ರತೆಗಿಂತ ಭದ್ರತೆಯೇ ಮೇಲು. ಹೌದು ಭದ್ರತೆ ಇದೆ. ಈಗ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಏಕಾಂಗಿಯಾಗಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ, ನಾನು ಟ್ರಾಫಿಕ್‌ನಲ್ಲಿರುವಾಗ ನನಗೆ ನೀಡಿರುವ ಭದ್ರತೆ ಕಾರಣದಿಂದಾಗಿ ವಾಹನಗಳು ಇತರ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತವೆ" ಎಂದಿದ್ದಾರೆ.

"ನಾನು ಹೇಳಿದ್ದನ್ನೆಲ್ಲ ಮಾಡುತ್ತಿದ್ದೇನೆ. 'ಕಿಸಿ ಕಾ ಭಾಯಿ ಕಿಸಿ ಕಿ ಜಾನ್' ಸಿನಿಮಾದಲ್ಲಿ ಒಂದು ಡೈಲಾಗ್ ಇದೆ.'ಅವರಿಗೆ 100 ಬಾರಿ ಅದೃಷ್ಟ ಬರಬೇಕು, ನಾನು ಒಮ್ಮೆ ಅದೃಷ್ಟಶಾಲಿಯಾಗಬೇಕು ಎಂದು. ಹಾಗಾಗಿ, ನಾನು ತುಂಬಾ ಎಚ್ಚರಿಕೆಯಿಂದ ಇರಬೇಕು" ಎಂದು ತಿಳಿಸಿದ್ದಾರೆ.
ಮುಂದುವರಿಸಿ, "ನಾನು ಎಲ್ಲೆಡೆ ಸಂಪೂರ್ಣ ಭದ್ರತೆಯೊಂದಿಗೆ ಹೋಗುತ್ತಿದ್ದೇನೆ. ನೀವು ಏನು ಮಾಡಿದರೂ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ನನಗೆ ತಿಳಿದಿದೆ. ಅವನು ಇದ್ದಾನೆ ಎಂದು (ದೇವರು ಇದ್ದಾನೆ) ನಾನು ನಂಬುತ್ತೇನೆ. ಹಾಗೆಂದು ನಾನು ಮುಕ್ತವಾಗಿ ತಿರುಗಾಡಲು ಪ್ರಾರಂಭಿಸುತ್ತೇನೆ ಎಂದಲ್ಲ. ಅನೇಕ ಬಂದೂಕುಗಳು ನನ್ನೊಂದಿಗೆ ಓಡಾಡುತ್ತಿವೆ, ನನ್ನು ಸುತ್ತ ಬಂದೂಕುಗಳಿವೆ. ಈ ದಿನಗಳಲ್ಲಿ ನಾನು ಹೆದರುತ್ತಿದ್ದೇನೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಲೆ ಬೆದರಿಕೆ ಪತ್ರಗಳ ನಂತರ, ಕೆಲವು ದಿನಗಳ ಹಿಂದೆ, ಫೋನ್ ಕರೆಯಲ್ಲಿ ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈ ಪೊಲೀಸರು ಅಪ್ರಾಪ್ತರನ್ನು ಬಂಧಿಸಿದ್ದರು. ಏಪ್ರಿಲ್ 10 ರಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರದ ರಾಕಿ ಭಾಯ್ ಎಂದು ಕರೆ ಮಾಡಿದ ವ್ಯಕ್ತಿ ತಾನು ಗೋರಕ್ಷಕ ಎಂದು ಹೇಳಿಕೊಂಡಿದ್ದಾರೆ.

ಕರೆ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. " ಈ ಬೆದರಿಕೆ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ನಾವು ಭಾವಿಸಿದ್ದೇವೆ. ಆದರೆ ಅಪ್ರಾಪ್ತ ವಯಸ್ಕನು ಏಕೆ ಈ ರೀತಿ ವರ್ತಿಸಿದನು ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ಮಾರ್ಚ್ 26 ರಂದು, ಸಲ್ಮಾನ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಯಿತು. ಆತನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ತನ್ನ ಮೇಲ್‌ನಲ್ಲಿ, ನಟ ಸಲ್ಮಾನ್ ಖಾನ್‌ಗೂ ಗಾಯಕ ಸಿಧು ಮೂಸೆವಾಲಾಗೆ ಆದ ರೀತಿಯೇ ಆಗುತ್ತದೆ ಎಂದು ಬೆದರಿಸಿದ್ದರು.
"ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಇಮೇಲ್ ಬೆದರಿಕೆಗೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು ಮತ್ತು ಲುನಿ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ, ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್‌ನನ್ನು ಬಂಧಿಸಿವೆ" ಎಂದು ಜೋಧಪುರದ ಲುನಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಈ ಹಿಂದೆ ಎಎನ್‌ಐಗೆ ತಿಳಿಸಿದ್ದರು.












Click it and Unblock the Notifications