Get Updates
Get notified of breaking news, exclusive insights, and must-see stories!

ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'

Recommended Video

      ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ | ಟ್ವಿಟ್ಟರ್ ಪ್ರತಿಕ್ರಿಯೆ ನೋಡಿ ಹೇಗಿದೆ | Oneindia Kannada

      ನವದೆಹಲಿ, ಏಪ್ರಿಲ್ 05: "ಸದ್ಯ, ಕೊನೆಗೂ ಕೃಷ್ಣ ಮೃಗದ ಮರಿಮಕ್ಕಳಿಗೆ ನ್ಯಾಯ ಸಿಕ್ಕಿತು...!" ಹಾಗೆಂದು ಕೃಷ್ಣಮೃಗ ಪ್ರಕರಣದ ತೀರ್ಪು, ವಿಚಾರಣೆಯಲ್ಲಿನ ವಿಳಂಬ ನೀತಿಯನ್ನು ಟ್ವಿಟ್ಟರ್ ನಲ್ಲಿ ಹಲವರು ಛೇಡಿಸಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

      ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು 20 ವರ್ಷಗಳ ಹಿಂದೆ (1998) ನಡೆದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಕೊನೆಗೂ ಕೋರ್ಟು ತೀರ್ಪು ನೀಡಿದೆ. ಪ್ರಕರಣದ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಮ್ ಮತ್ತು ಟಬು ಅವರನ್ನು ಖುಲಾಸೆಗೊಳಿಸಲಾಗಿದೆ.

      ರಾಜಸ್ಥಾನದ ಜೋಧಪುರ ನ್ಯಾಯಾಲಯದಿಂದ ಇಂದು ತೀರ್ಪು ಹೊರಬೀಳುತ್ತಿದ್ದಂತೆಯೇ ಸಲ್ಲೂ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಲ್ಮಾನ್ ಖಾನ್ ಮಟ್ಟಿಗೆ ಇದೇನು ಹೊಸತಲ್ಲ. ಇನ್ನು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಹೊರಬಂದರೂ ಅಚ್ಚರಿಯೇನಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ!

      Array

      ಕೆಲವು ವರ್ಷಗಳ ನಂತರ....

      ಇಂದು- ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ದೋಷಿ.
      ಕೆಲ ದಿನಗಳ ನಂತರ- ಜಾಮೀನು ಪಡೆದು ಹೊರಬಂದ ಸಲ್ಮಾನ್ ಖಾನ್
      ಮತ್ತಷ್ಟು ದಿನಗಳ ನಂತರ- 'ಬೀಯಿಂಗ್ ಬ್ಲಾಕ್ ಬಕ್' ಟಿ ಶರ್ಟ್ ಬಿಡುಗಡೆಗೊಳಿಸಿದ ಸಲ್ಮಾನ್ ಖಾನ್. ಇದರ 3% ಲಾಭ ಚಾರಿಟಿಗೆ!
      ಇವೆಲ್ಲವುಗಳ ನಂತರ- 'ಟೈಗರ್ ಇನ್ನೋಸೆಂಟ್ ಹೆ' ಎಂಬ ವನ್ಯಜೀವಿ ಸಂರಕ್ಷಕನ ಸಲ್ಮಾನ್ ಚಿತ್ರದಿಂದ 2 ಬಿಲಿಯನ್ ಡಾಲರ್ ಸಂಪಾದನೆ!
      ಹೀಗೆಂದು ಟ್ವೀಟ್ ಮಾಡಿದ್ದಾರೆ ಸೋರಭ್ ಪಂಥ್

      ಮರುಜನ್ಮ ಪಡೆದ ಕೃಷ್ಣಮೃಗ

      20 ವರ್ಷಗಳ ನಂತರ ಸಲ್ಮಾನ್ ಖಾನ್ ರನ್ನು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಕೋರ್ಟು ತೀರ್ಪು ನೀಡಿದೆ. ಕೃಷ್ಣಮೃಗ 1998 ರಲ್ಲೇ ಸತ್ತಿದೆ. ಬಹುಶಃ ಇನ್ನು ಮೇಲೆ ಕೃಷ್ಣಮೃಗ ಎಲ್ಲೋ ಪುನರ್ಜನ್ಮ ಪಡೆಯಬಹುದು. ಈ ತೀರ್ಪನ್ನು ಅದು ಕೇಳಿಸಿಕೊಂಡು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಹೊಗಳಿರಬಹುದದು! ನೋಡೋಣ ಇನ್ನೆಷ್ಟು ದಿನದಲ್ಲಿ ಸಲ್ಮಾನ್ ಖಾನ್ ಜಾಮೀನು ಪಡೆಯುತ್ತಾರೆ ಅಂತ! ಎಂದಿದ್ದಾರೆ ಅಂಶುಲ್ ಸಕ್ಸೆನಾ.

      ಕೊನೆಗೂ ಕೃಷ್ಣಮೃಗದ ಮರಿಮೊಮ್ಮಕ್ಕಳಿಗೆ ನ್ಯಾಯದೊರಕಿದೆ!

      ಸಲ್ಮಾನ್ ಖಾನ್ ರನ್ನು ಕೃಷ್ಣ ಮೃಗ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ. ಕೊನೆಗೂ ಕೃಷ್ಣಮೃಗದ ಮರಿಮೊಮ್ಮಕ್ಕಳಿಗೆ ನ್ಯಾಯ ದೊರಕಿದೆ ಎಂದು ಛೇಡಿಸಿದ್ದಾರೆ ರಮೇಶ್ ಶ್ರೀವತ್ಸ್!

      ಸಲ್ಮಾನ್ ಖಾನ್ ಶಿಕ್ಷೆಗೆ ಅರ್ಹರಲ್ಲ!

      ಕಳೆದ 20 ವರ್ಷಗಳಿಂದ ಸಲ್ಮಾನ್ ಖಾನ್ ಸತತವಾಗಿ ಜೋಧಪುರಕ್ಕೆ ಭೇಟಿನೀಡಿದ್ದಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಸಮಾನವಾದರೂ, ಸಲ್ಮಾನ್ ಖಾನ್ ಶಿಕ್ಷೆಗೆ ಅರ್ಹರಲ್ಲ. ಮೇಲಿನ ನ್ಯಾಯಾಲಯಗಳು ಈ ತೀರ್ಪನ್ನು ವಜಾಗೊಳಿಸುತ್ತದೆಂದು ನಂಬಿಕೆ ಇದೆ ಎಂದು ಸಲ್ಮಾನ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+