ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ಗೆ ಖುಲಾಸೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಜುಲೈ 25: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ ಹೈಕೋರ್ಟ್ ನಿಂದ ಶುಭ ಸುದ್ದಿ ಸಿಕ್ಕಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸಲ್ಮಾನ್ ಖಾನ್ ಖುಲಾಸೆಗೊಂಡಿದ್ದಾರೆ.

ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಿ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. [ಸಲ್ಮಾನಿಗೊಂದು ನ್ಯಾಯ, ಗೀತಾಗೊಂದು ನ್ಯಾಯ ಏಕೆ?]

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಸೋಮವಾರದಂದು ' ಬೆನಿಫಿಟ್ ಆಫ್ ಡೌಟ್' ಮೇಲೆ ಸಲ್ಮಾನ್ ಖಾನ್ ಗೆ ಎರಡು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ. [ಗುದ್ದೋಡು ಪ್ರಕರಣ: ಸಲ್ಮಾನ್ ಗೆ ಮತ್ತೆ ಸಂಕಟ, ಸುಪ್ರೀಂನಿಂದ ನೋಟಿಸ್]

1998ರಲ್ಲಿ ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. [ಗುದ್ದೋಡು ತೀರ್ಪು: ಮುಂಬೈ ಹೈಕೋರ್ಟ್ ಹೇಳಿದ್ದೇನು?]

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಾಜಸ್ಥಾನದ ಭವಾದ್ ನ ಲ್ಲಿ ಸೆಪ್ಟೆಂಬರ್ 26, 1998ರಲ್ಲಿ ನಡೆದ ಶೂಟಿಂಗ್ ಹಾಗೂ ಘೋಡಾ ಫಾರ್ಮ್ ನಲ್ಲಿ ಸೆಪ್ಟೆಂಬರ್ 28, 1998ರಲ್ಲಿ ನಡೆದ ಶೂಟಿಂಗ್ ನಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ 1 ಹಾಗೂ 5 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟ, ನಟಿಯರು

ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟ, ನಟಿಯರು

ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು

ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು

ಎಲ್ಲರ ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು. ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು.

ಸಲ್ಮಾನ್ ಖಾನ್ ಗೆ ಖುಲಾಸೆ ನೀಡಲಾಗಿದೆ

ಸಲ್ಮಾನ್ ಖಾನ್ ಗೆ ಖುಲಾಸೆ ನೀಡಲಾಗಿದೆ

ಈಗ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿತ್ತು. ನಂತರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಫೆ.5, 2016ರಂದು ವಿಚಾರಣೆ ಮುಗಿಸಿದ ರಾಜಸ್ಥಾನ ಕೋರ್ಟ್ ಈಗ ಅಂತಿಮ ತೀರ್ಪು ಸಜ್ಜಾಗಿತ್ತು. ಆದರೆ, ಪ್ರಕರಣದ ಮರು ವಿಚಾರಣೆ ನಡೆದು ಜುಲೈ 25ರಂದು ತೀರ್ಪು ನೀಡಲಾಗಿದ್ದು, ಸಲ್ಮಾನ್ ಖಾನ್ ಗೆ ಖುಲಾಸೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Salman Khan has been acquitted by Rajasthan High court today(July 25) in both the Blackbuck poaching cases- he had challenged his conviction by a lower court which had sentenced him to 1 and 5 years in two cases
Please Wait while comments are loading...