ರಾಜಸ್ಥಾನ: ಕಾಂಗ್ರೆಸ್ ನಾಯಕರು ವಿಧಾನಸಭೆಯಿಂದ ನನ್ನನ್ನು ಹೊರಗೆ ಎಳೆದರು ಎಂದ ವಜಾಗೊಂಡ ಕಾಂಗ್ರೆಸ್ ಸಚಿವ!
ಜೈಪುರ, ಜುಲೈ. 24: ಇತ್ತೀಚೆಗಷ್ಟೇ ತಮ್ಮದೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮಾತನಾಡಿ ವಜಾಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರನ್ನು ರಾಜ್ಯ ವಿಧಾನಸಭೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಕೀಯವಾಗಿ ಸ್ಫೋಟಕವಾಗಲಿದೆ ಎಂದು ಅವರು ಹೇಳುವ "ಕೆಂಪು ಡೈರಿ" ಅನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದ ವೇಳೆ ಸ್ವಪಕ್ಷದ ನಾಯಕರೇ ತನ್ನನ್ನು ಹೊಹಾಕಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಿಧಾನಸಭೆಯಲ್ಲಿ ಟೀಕಿಸಿದ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಶುಕ್ರವಾರ ರಾಜ್ಯ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಸೋಮವಾರ ಅವರು ಕೆಂಪು ಡೈರಿಯೊಂದಿಗೆ ಸ್ಪೀಕರ್ ಸಿಪಿ ಜೋಶಿ ಅವರ ಪೀಠದ ಬಳಿಗೆ ತಲುಪಿ, ಶೂನ್ಯ ವೇಳೆಯಲ್ಲಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಸ್ವಲ್ಪ ಸಮಯದ ನಂತರ, ರಾಜೇಂದ್ರ ಸಿಂಗ್ ಗುಢಾ ಆಕ್ರಮಣಕಾರಿಯಾಗಿ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಬಳಿಗೆ ಹೊರಟರು, ಅವರು ಮಾತನಾಡಲು ನಿಂತಾಗ ಅವರನ್ನು ಎದುರಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಅವರು ರಾಜೇಂದ್ರ ಸಿಂಗ್ ಗುಢಾ ಅವರನ್ನು ತಳ್ಳಿದ್ದಾರೆ. ನಂತರ ಪಕ್ಷದ ಇತರ ಶಾಸಕರು ಅವರತ್ತ ಧಾವಿಸಿ ಉದಯಪುರವತಿ ಶಾಸಕರನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.
ಬಿಜೆಪಿ ಶಾಸಕರು ತಮ್ಮ ಆಸನಗಳಿಂದ ಎದ್ದು ಕೋಲಾಹಲ ಸೃಷ್ಟಿಸಿ "ಕೆಂಪು ಡೈರಿ" ಬಗ್ಗೆ ಪ್ರಶ್ನಿಸಿದ್ದಾರೆ. ಕೆಂಪು ಡೈರಿ ವಿಚಾರವಾಗಿ ಬಿಜೆಪಿ ಶಾಸಕರು ಕೋಲಾಹಲ ಸೃಷ್ಟಿಸಿ ಸದನದ ಬಾವಿಗೆ ನುಗ್ಗಿದರು. ಬೆಳಗ್ಗೆ ಸದನ ಪ್ರಾರಂಭವಾಗುವ ಮೊದಲು, ರಾಜೇಂದ್ರ ಸಿಂಗ್ ಗುಢಾ ಅವರು ವಿಧಾನಸಭೆಯಲ್ಲಿ ಕೆಂಪು ಡೈರಿ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಡೈರಿಯಲ್ಲಿ ಕೆಲವು ರಹಸ್ಯಗಳಿವೆ ಎಂದು ಅವರು ಮಾಹಿತಿ ನೀಡಿದ್ದರು.

ಸದನವನ್ನು ಮುಂದೂಡಿದ ಬಳಿಕ ವಿಧಾನಸಭೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್ ಗುಢಾ ಅವರು ಕೆಂಪು ಡೈರಿ ಕುರಿತು ಹೇಳಿಕೆ ನೀಡಲು ಬಯಸಿದ್ದರು ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. "ಶಾಂತಿ ಧಾರಿವಾಲ್ ಮಾತನಾಡಲು ನಿಂತರು ಮತ್ತು ನಾನು ಅವರ ಬಳಿಗೆ ಹೋಗಿ ನಾನು ಸದನದಲ್ಲಿ ಹೇಳಿಕೆ ನೀಡಬೇಕೆಂದು ಹೇಳಿದ್ದೇನೆ. ಆದರೆ ಕಾಂಗ್ರೆಸ್ ಶಾಸಕರು ನನ್ನನ್ನು ನೆಲಕ್ಕೆ ತಳ್ಳಿ ನನ್ನನ್ನು ಬೀಳಿಸಿದರು. ಶಾಂತಿ ಧರಿವಾಲ್ ಸೇರಿದಂತೆ ಕೆಲವರು ನನಗೆ ಒದ್ದು ಡೈರಿಯನ್ನು ಕಸಿದುಕೊಂಡರು. ಆದರೆ ಡೈರಿಯ ಕೆಲವು ಭಾಗ ನನ್ನ ಬಳಿ ಉಳಿದಿದೆ" ಎಂದು ಆರೋಪಿಸಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರ್ಕಾರದ ಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿದ ಕೆಲವು ಗಂಟೆಗಳ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಕಳೆದ ವಾರ ವಜಾಗೊಳಿಸಲಾಯಿತು. ಅವರನ್ನು ವಜಾಗೊಳಿಸಿದ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, "ಸಚಿವರ ಸೇರ್ಪಡೆ ಅಥವಾ ಅವರನ್ನು ವಜಾಗೊಳಿಸುವುದು ಮುಖ್ಯಮಂತ್ರಿಗೆ ಬಿಟ್ಟದ್ದು ಮತ್ತು ಅವರು ಅದರಂತೆ ನಡೆದುಕೊಂಡಿದ್ದಾರೆ. ಇದು ಮುಖ್ಯಮಂತ್ರಿಯ ಹಕ್ಕು" ಎಂದು ಹೇಳಿದ್ದಾರೆ.
"ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂಬುದು ನಿಜ ಮತ್ತು ಒಪ್ಪಿಕೊಳ್ಳಬೇಕು. ಮಣಿಪುರದ ಬದಲಿಗೆ, ನಾವು ನಮ್ಮೊಳಗೆ ನೋಡಬೇಕು. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಏಕೆ ಹೆಚ್ಚಿವೆ ಎಂಬುದನ್ನು ತಿಳಿಯಬೇಕು. ತಾವು ಸಚಿನ್ ಪೈಲಟ್ ಪರವಾಗಿ ಮಾತನಾಡುವ ಕಾರಣ ತನ್ನನ್ನು ಗುರಿಯಾಗಿಸಲಾಗುತ್ತಿದೆ" ಎಂದು ರಾಜೇಂದ್ರ ಸಿಂಗ್ ಗುಢಾ ಹೇಳಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications