'ಸಚಿನ್: ದ ಬಿಲಿಯನ್ ಡ್ರೀಮ್ಸ್' ಟ್ರೈಲರ್ ಬಿಡುಗಡೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 13: ಸಚಿನ್ ಅಭಿಮಾನಿಗಳು ತುಂಬಾ ದಿನಗಳಿಂದ ನಿರೀಕ್ಷಿಸುತ್ತಿರುವ 'ಸಚಿನ್: ದ ಬಿಲಿಯನ್ ಡ್ರೀಮ್ಸ್' ಚಿತ್ರದ ಟ್ರೈಲರ್ ಏಪ್ರಿಲ್ 13ರಂದು ಸಂಜೆ ಬಿಡುಗಡೆಗೊಂಡಿದೆ.

ಮುಂಬೈನ ಜುಹುನಲ್ಲಿರುವ ಆಡಿಟೋರಿಯಂವೊಂದರಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದನ್ನು 15 ಲಕ್ಷದಷ್ಟು ವೀಕ್ಷಕರು ನೋಡಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಜೇಮ್ಸ್ ಎರ್ ಸ್ಕಿನ್ ಹಾಜರಿದ್ದರು. ಚಿತ್ರವು ಸಚಿನ್ ತೆಂಡೂಲ್ಕರ್ ಅವರ ಜೀವನದ ಈವರೆಗಿನ ಪಯಣವನ್ನು ಅನಾವರಣಗೊಳಿಸಲಿದೆ. ಅಲ್ಲದೆ, ಸಚಿನ್ ಬಗ್ಗೆ ಈವರೆಗೆ ತಿಳಿಯದಿರುವ ಕೆಲವಾರು ಆಪ್ತ ವಿಚಾರಗಳನ್ನೂ ಹೇಳಲಾಗಿದೆ.

ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It was an occasion to revisit memories as cricket legend Sachin Tendulkar launched the trailer of 'Sachin - A Billion Dreams' in Mumbai on April 13, 2017.
Please Wait while comments are loading...