Sabarimala: ಕೇರಳದಲ್ಲಿ ಕೋವಿಡ್: ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಶಬರಿಮಲೆಯಕ್ಕೆ ಹರಿದುಬರುತ್ತಿದೆ ಭಕ್ತ ಸಾಗರ
ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಶಬರಿಮಲೆಯಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು ಪ್ರಕರಣಗಳು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ಡಿಸೆಂಬರ್ 19 ರಂದು ಶಬರಿಮಲೆ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಅಂದಾಜು 65,000 ಭಕ್ತರು ಪವಿತ್ರ ಕ್ಷೇತ್ರಕ್ಕೆ ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಿದ್ದಾರೆ. ಕಾಲ್ನಡಿಗೆಯಲ್ಲಿ ಭಕ್ತರು ದೇವಸ್ಥಾನಕ್ಕೆ ತೆರಳುತ್ತಿದ್ದು ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದರ ಮಧ್ಯೆ ಕೇರಳವು ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. ಡಿಸೆಂಬರ್ 19 ರಂದು ಬೆಳಿಗ್ಗೆ 8 ಗಂಟೆಗೆ ಕಳೆದ 24 ಗಂಟೆಗಳಲ್ಲಿ 115 ಹೊಸ ಪ್ರಕರಣಗಳು ವರದಿಯಾಗಿವೆ. ಹೆಚ್ಚುತ್ತಿರುವ ಜನಸಂದಣಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್ ಈ ಹಿಂದೆ ದೇವಸ್ಥಾನದ ಅಧಿಕಾರಿಗಳಿಗೆ ಸ್ವಚ್ಚತೆಗೆ ಸೂಚಿಸಿತ್ತು.
ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಪೊಲೀಸರು ಪಂಪಾಕ್ಕೆ ತೆರಳುವ ವಾಹನ ಸಂಚಾರವನ್ನು ನಿಯಂತ್ರಿಸಿದ್ದಾರೆ. ಡಿಸೆಂಬರ್ 27ರಂದು ಮಂಡಲ ಪೂಜೆಯನ್ನು ನಿಗದಿಪಡಿಸಲಾಗಿದ್ದು, ಈ ಸಮಯದಲ್ಲಿ ಅಧಿಕಾರಿಗಳು ಭಾರೀ ಜನದಟ್ಟಣೆಯನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಮುಂಬರುವ ಧಾರ್ಮಿಕ ಆಚರಣೆಯ ಸಮಯದಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ.
ಭಕ್ತರ ದರ್ಶನದ ಸಮಯ ವಿಸ್ತರಣೆ:-
ಜೊತೆಗೆ ಭಕ್ತರ ದರ್ಶನದ ಸಮಯವನ್ನು ವಿಸ್ತರಿಸಲಾಗಿದೆ. ಇದರಿಂದಾಗಿ ರಾತ್ರಿ 11 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಬಹುದು. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಭಕ್ತರ ದಂಡು ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೂ ಸಮಯವನ್ನು ಹೆಚ್ಚಿಸಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಿಂದೆಂದೂ ಕಾಣದ ರೀತಿಯಲ್ಲಿ ಶಬರಿಮಲೆಯ ದೇವಸ್ಥಾನ ಭಕ್ತರಿಂದ ತುಂಬಿ ಹೋಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿ ಮಕ್ಕಳು ಮತ್ತು ವೃದ್ಧರೊಂದಿಗೆ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರು ಅತ್ಯಂತ ಜಾಗರೂಕತೆಯಿಂದ ಪ್ರಯಾಣಿಸಲು ಮತ್ತು ದರ್ಶನದ ಸಮಯದಲ್ಲಿ ಸುರಕ್ಷಿತವಾಗಿರಲು ಸೂಚಿಸಿದೆ.
ಕೊರೊನಾ ಲಕ್ಷಣವಿದ್ದರೆ ಟೆಸ್ಟ ಕಡ್ಡಾಯ:-
ಇದರಿಂದಾಗಿ ಕರ್ನಾಟಕದಲ್ಲೂ ಕೊರೊನಾ ಹರಡುವ ಭಯ ಸೃಷ್ಟಿಯಾಗಿದೆ. ಈ ನಡುವೆ ವಿದೇಶದಿಂದ ಹಾಗೂ ಕೇರಳದಿಂದ ಬಂದ ಅಯ್ಯಪ್ಪ ಭಕ್ತರಿಗೂ ಸ್ಕ್ರೀನಿಂಗ್ ಇಲ್ಲ. ಆದರೆ ಕೊರೊನಾ ಲಕ್ಷಣವಿದ್ದರೆ ಮಾತ್ರ ಟೆಸ್ಟ್ ಕಡ್ಡಾಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೌಚಾಲಯದ ನೀರಿನಿಂದ ಅಡುಗೆ
ಕೇರಳದ ಪೂಜ್ಯ ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಮಾರ್ಗಗಳ ಉದ್ದಕ್ಕೂ ಹಲವಾರು ಆಹಾರ ಮಳಿಗೆಗಳಿವೆ. ಇವು ಅಯ್ಯಪ್ಪನ ಆಶೀರ್ವಾದವನ್ನು ಕೋರಿ ಬರುವ ಯಾತ್ರಾರ್ಥಿಗಳಿಗೆ ಆಹಾರವನ್ನು ನೀಡುತ್ತವೆ. ಆದರೆ ಇಲ್ಲಿ ಭಕ್ತರಿಗೆ ಬಡಿಸುವ ಖಾದ್ಯಗಳ ತಯಾರಿಕೆಯಲ್ಲಿ ಶೌಚಾಲಯದ ನೀರನ್ನು ಬಳಸಿರುವ ಆರೋಪ ಕೇಳಿ ಬಂದಿದೆ.
ಇದು ತಪಾಸಣೆಯ ಸಮಯದಲ್ಲಿ ಬಹಿರಂಗಗೊಂಡಿದೆ. ಈ ಬಗ್ಗೆ ಅಯ್ಯಪ್ಪ ಸೇವಾ ಸಂಘದವರು ಪರಿಶೀಲನೆ ನಡೆಸಿದ್ದು, ಡಿವೈಎಫ್‌ಐ ಎರುಮೇಲಿ ಪ್ರಾದೇಶಿಕ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು. ಆಗ ಅಬ್ದುಲ್ ಶೆಹೀಂ ಎಂಬಾತ ನಿರ್ವಹಿಸುತ್ತಿರುವ ಆಹಾರ ಮಳಿಗೆಯಲ್ಲಿ ಸುಮಾರು ಎರಡು ವಾರಗಳಿಂದ ಅಡುಗೆಗೆ ಶೌಚಾಲಯದ ನೀರನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಭಕ್ತರಿಗೆ ನೀಡುವ ಆಹಾರದ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.












Click it and Unblock the Notifications