• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆ ಸರಬರಾಜು ಆರಂಭಿಸಿದ ರಷ್ಯಾ

|
Google Oneindia Kannada News

ನವದೆಹಲಿ, ನವೆಂಬರ್ 15: ಭಾರತದ ವಾಯು ರಕ್ಷಣಾ ಪಡೆಯ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಬಹುನಿರೀಕ್ಷಿತ ಎಸ್-400 ಕ್ಷಿಪಣಿಗಳನ್ನು ಇದೇ ವರ್ಷದ ನಿಗದಿತ ಸಮಯಕ್ಕೆ ರವಾನಿಸಲು ಪ್ರಾರಂಭಿಸಲಾಗುವುದು ಎಂದು ರಷ್ಯಾ ಸರ್ಕಾರದ ಅಧಿಕೃತ ಮೂಲಗಳು ದೃಢಪಡಿಸಿವೆ.

ಕಳೆದ 2018ರಲ್ಲಿ ಭಾರತವು 5 ಶತಕೋಟಿ ಯುಎಸ್ ಡಾಲರ್ ನೀಡಿ ವ್ಯವಸ್ಥೆಯನ್ನು ಖರೀದಿಸಿತು. ಈ ಒಪ್ಪಂದವು ರಷ್ಯಾದೊಂದಿಗೆ ರಕ್ಷಣಾ ಒಪ್ಪಂದಗಳಲ್ಲಿ ತೊಡಗಿರುವ ದೇಶಗಳ ಮೇಲೆ ಯುಎಸ್ ನಿರ್ಬಂಧಗಳ ಬೆದರಿಕೆಯಿಂದಾಗಿ ವಿವಾದಕ್ಕೆ ಕಾರಣವಾಗಿತ್ತು.

1962ರ ಚೀನಾ-ಭಾರತ ಯುದ್ಧ: ಗಡಿಯಲ್ಲಿ ರಸ್ತೆ ನಿರ್ಮಿಸದಿದ್ದರೆ ಅಪಾಯ! 1962ರ ಚೀನಾ-ಭಾರತ ಯುದ್ಧ: ಗಡಿಯಲ್ಲಿ ರಸ್ತೆ ನಿರ್ಮಿಸದಿದ್ದರೆ ಅಪಾಯ!

"ರಷ್ಯಾ S-400 ಟ್ರಯಂಫ್ ಸರ್ಫೇಸ್ ಟು ಏರ್ ಮಿಸೈಲ್ ವ್ಯವಸ್ಥೆಯನ್ನು ಭಾರತಕ್ಕೆ ತಲುಪಿಸಲು ಪ್ರಾರಂಭಿಸಿದೆ. ಈ ಕ್ಷಿಪಣಿಗಳ ವಿತರಣೆಯು ಯೋಜಿಸಿದಂತೆ ನಡೆಯುತ್ತಿವೆ" ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. "ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ನಿಗದಿತ ವೇಳಾಪಟ್ಟಿಯಲ್ಲಿ ಮುಂದುವರಿಯುತ್ತಿದೆ" ಎಂದು ಸಂಸ್ಥೆಯು ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರದ ಫೆಡರಲ್ ಸೇವೆಯ ನಿರ್ದೇಶಕ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.


ಸಮುದ್ರ ಮಾರ್ಗದಲ್ಲಿ ಬಿಡಿಭಾಗಗಳ ಸರಬರಾಜು:

ರಷ್ಯಾದಿಂದ ಎಸ್-400 ಕ್ಷಿಪಣಿಗಳ ಸರಬರಾಜು ಪ್ರಕ್ರಿಯೆ ಪ್ರಾರಂಭವವಾಗಿರುವ ಬಗ್ಗೆ ಭಾರತದಿಂದ ಯಾವುದೇ ರೀತಿ ಅಧಿಕೃತ ಹೇಳಿಕೆಗಳು ಬಿಡುಗಡೆಯಾಗಿಲ್ಲ. ಶಸ್ತ್ರಾಸ್ತ್ರ ವ್ಯವಸ್ಥೆಯ ವಿತರಣೆಯು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗುವ ನಿರೀಕ್ಷೆಯಿದೆ. ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಬಿಡಿಭಾಗಗಳ ವಿತರಣೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

800 ಮಿಲಿಯನ್ ಡಾಲರ್ ಹಣ ಪಾವತಿ:

ಕಳೆದ 2018ರಲ್ಲೇ ಭಾರತವು ಎಸ್-400 ಕ್ಷಿಪಣಿ ವ್ಯವಸ್ಥೆಯ ಐದು ಘಟಕಗಳನ್ನು ಖರೀದಿಸಿದ್ದು, ಒಂದು ವರ್ಷದ ನಂತರದಲ್ಲಿ ಮೊದಲ ಕಂತಾಗಿ 800 ಮಿಲಿಯನ್ ಡಾಲರ್ ಹಣವನ್ನು ಪಾವತಿ ಮಾಡಲಾಗಿತ್ತು. ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ, ಒಪ್ಪಂದದ ಪ್ರಕಾರ ಈ ವರ್ಷ ಮೊದಲ ಎಸ್ -400 ಘಟಕವನ್ನು ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದರು.

ಎಸ್-400 ಕ್ಷಿಪಣಿ ಸಾಮರ್ಥ್ಯ:

S-400 ವಿಶ್ವದ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ, ಸುಮಾರು 400 ಕಿ.ಮೀ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಕೆಟ್‌ಗಳು, ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ವಿಮಾನಗಳ ವಿರುದ್ಧ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವ್ಯವಸ್ಥೆಯನ್ನು ಚೀನಾ ಈಗಾಗಲೇ ಹೊಂದಿದ್ದು, ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ (ಎಲ್‌ಎಸಿ) ನಿಯೋಜಿಸಲಾಗಿದೆ.

ರಷ್ಯಾ ಜೊತೆ ಭಾರತದ ಒಪ್ಪಂದಕ್ಕೆ ಅಮೆರಿಕಾ ಕೆಂಡ?:

ರಷ್ಯಾದೊಂದಿಗೆ ಮಾಡಿಕೊಂಡಿರುವ ಎಸ್-400 ಕ್ಷಿಪಣಿ ವ್ಯವಸ್ಥೆ ಒಪ್ಪಂದವು ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧಕ್ಕೆ ಕಂಟಕವಾಗಿರಲಿದೆ. ಕಳೆದ ಜನವರಿಯಲ್ಲಿ, ಭಾರತಕ್ಕೆ ಆಗಿನ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರು S-400 ಒಪ್ಪಂದದ ಬಗ್ಗೆ ಉಲ್ಲೇಖಿಸಿದ್ದು "ಅಂತರ ಕಾರ್ಯಸಾಧ್ಯತೆಯ" ಸಮಸ್ಯೆಗಳನ್ನು ಎತ್ತಿದ್ದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು "ಭಾರತ ಮತ್ತು ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ" ಮತ್ತು "ಭಾರತವು ರಷ್ಯಾದೊಂದಿಗೆ ವಿಶೇಷ ಮತ್ತು ಆಯಕಟ್ಟಿನ ಪಾಲುದಾರಿಕೆಯನ್ನು ಹೊಂದಿದೆ" ಎಂದು ಹೇಳಿತ್ತು. "ಭಾರತ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಂದ ಮಾರ್ಗದರ್ಶಿಸಲ್ಪಡುವ ನಮ್ಮ ರಕ್ಷಣಾ ವ್ಯವಸ್ಥೆಯ ಸ್ವಾಧೀನ ಮತ್ತು ಸರಬರಾಜುಗಳಿಗೂ ಅನ್ವಯಿಸುತ್ತದೆ," ಎಂದು ಜನವರಿಯಲ್ಲೇ ರಕ್ಷಣಾ ಸಚಿವಾಲಯ ತಿಳಿಸಿತ್ತು.

   ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada
   English summary
   Russia Begins Sends of S-400 Missiles To Indian Air Defence System. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion