Dollar Vs Rupee: ಡಾಲರ್ ಎದುರು ರೂಪಾಯಿ ಬೆಲೆ ಢಮಾರ್!
ಭಾರತ ಆರ್ಥಿಕವಾಗಿ ಮುಂದುವರಿದು, ಭವಿಷ್ಯದಲ್ಲಿ ಅಮೆರಿಕ ಸೇರಿದಂತೆ ಜಗತ್ತಿನ ಶ್ರೀಮಂತ ದೇಶಗಳನ್ನು ಹಿಂದೆ ಹಾಕಲಿದೆ ಎಂಬ ನಿರೀಕ್ಷೆ ಮನೆಮಾಡಿದೆ. ಈಗಾಗಲೇ ಹಲವು ಕ್ಷೇತ್ರ & ವಿಚಾರಗಳಲ್ಲಿ ಭಾರತ ಆರ್ಥಿಕವಾಗಿ ಬಲಶಾಲಿ ಆಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದಿದೆ. ಹೀಗಾಗಿ ಭಾರತ ಇನ್ನೇನು ಟಾಪ್-3 ಆರ್ಥಿಕತೆಯ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂಬ ನಿರೀಕ್ಷೆ ಕೂಡ ಇದೆ.
ಭಾರತ ಈ ರೀತಿಯಾಗಿ ಆರ್ಥಿಕ ಅಭಿವೃದ್ಧಿ ಸಾಧನೆ ಮಾಡುತ್ತಿರುವುದು ಭಾರಿ ಗಮನವನ್ನ ಕೂಡ ಸೆಳೆದಿದೆ. ಭಾರತ ಐಟಿ ವಲಯ, ಉತ್ಪಾದನಾ ವಲಯ, ಸೇವಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಗತ್ತನ್ನು ಆವರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಕೂಡ ಭಾರತ ದೊಡ್ಡ ಸಾಧನೆ ಮಾಡುತ್ತಿದೆ.

ಇಷ್ಟೆಲ್ಲದರ ನಡುವೆ ಕೂಡ ಭಾರತದ ರೂಪಾಯಿ ಮೌಲ್ಯ ಭಾರಿ ದೊಡ್ಡ ಕುಸಿತ ಕಾಣುತ್ತಿದೆ. ಅದ್ರಲ್ಲೂ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರಕ್ಕೆ ಇನ್ನು 1 ವಾರ ಬಾಕಿ ಇರುವಾಗಲೇ ಭಾರತದ ರೂಪಾಯಿಗೆ ದೊಡ್ಡ ಆಘಾತ ಎದುರಾಗಿದೆ. ಹಾಗಾದ್ರೆ ಈಗ ಎಷ್ಟಿದೆ ರೂಪಾಯಿ ಮೌಲ್ಯ? ಡಾಲರ್ ಬೆಲೆ ಎಷ್ಟಕ್ಕೆ ತಲುಪಿದೆ? ಮುಂದೆ ಓದಿ.
ಡಾಲರ್ ಎದುರು ರೂಪಾಯಿ ಬೆಲೆ ಢಮಾರ್!
ಹೌದು, ಭಾರತದ ರೂಪಾಯಿ ಮೌಲ್ಯ ಕಳೆದ ಕೆಲವು ದಿನಗಳಿಂದ ನಿರಂತರ ಕುಸಿತ ಕಂಡು ಆತಂಕ ಹೆಚ್ಚಾಗುವಂತೆ ಮಾಡಿದೆ. ಭಾರತದ ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಆತಂಕ ಕಾಡುತ್ತಿದೆ. ಇಂದು ಒಂದೇ ದಿನ ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದ್ದು, ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
1 ಡಾಲರ್‌ಗೆ 86.47 ರೂಪಾಯಿ!
ರೂಪಾಯಿ ಮೌಲ್ಯ ಇಂದು ಕೂಡ ಭರ್ಜರಿ ಕುಸಿತ ಕಂಡು ಪ್ರತಿ 1 ಡಾಲರ್‌ಗೆ 86.47 ರೂಪಾಯಿ ತಲುಪಿದೆ. ಈ ಮೂಲಕ ರೂಪಾಯಿ ಸಾರ್ವಕಾಲಿಕ ಕುಸಿತ ಕಂಡು ಹೊಸ ಇತಿಹಾಸ ಬರೆದಿದೆ ಡಾಲರ್ ಬೆಲೆ. ಡೊನಾಲ್ಡ್ ಟ್ರಂಪ್ ಇನ್ನೇನು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮೊದಲು ರೂಪಾಯಿಯ ಬೆಲೆ ಐತಿಹಾಸಿಕ ಮಟ್ಟದಲ್ಲಿ ಕುಸಿತ ಕಂಡಿದೆ. ಇದರ ಜೊತೆಗೆ ಇಂದು ಭಾರತದ ಷೇರು ಮಾರುಕಟ್ಟೆಯಲ್ಲಿ ಕೂಡ ಕುಸಿತ ಕಂಡು ಬಂದಿದೆ. ಇದು ಹೂಡಿಕೆದಾರರ ಎದೆಯಲ್ಲೂ ಭಯ ಮೂಡುವಂತೆ ಮಾಡಿದ್ದು, ಜಾಗತಿಕ ಬೆಳವಣಿಗೆಗೆಳು ಈ ರೀತಿಯ ಕುಸಿತಕ್ಕೆ ಕಾರಣ ಎನ್ನಲಾಗ್ತಿದೆ.












Click it and Unblock the Notifications