ಕೇರಳದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ; ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲ್ಲೆ
ಕೇರಳದಲ್ಲಿ ಮತ್ತೆ ಆರ್‍ಎಸ್‍ಎಸ್-ಸಿಪಿಐಎಂ ನಡುವೆ ಸಂಘರ್ಷ ಭುಗಿಲೆದ್ದಿದೆ. ಕೋಯಿಕ್ಕೋಡಿನಲ್ಲಿ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹರಿತ ಆಯುಧಗಳಿಂದ ದಾಳಿ ನಡೆಸಿದ್ದು ಸಿಪಿಎಂ ಕಾರ್ಯಕರ್ತರೇ ನಡೆಸಿದ್ದಾರೆ ಎಂದು ಕೊಳ್ಳಲಾಗಿದೆ.
ಕೋಝಿಕ್ಕೋಡ್, ಮಾರ್ಚ್ 5: ಕೇರಳದಲ್ಲಿ ಮತ್ತೆ ಆರ್‍ಎಸ್‍ಎಸ್-ಸಿಪಿಐಎಂ ನಡುವೆ ಸಂಘರ್ಷ ಭುಗಿಲೆದ್ದಿದೆ. ಕೋಯಿಕ್ಕೋಡಿನಲ್ಲಿ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹರಿತ ಆಯುಧಗಳಿಂದ ದಾಳಿ ನಡೆಸಿದ್ದು ಸಿಪಿಎಂ ಕಾರ್ಯಕರ್ತರೇ ನಡೆಸಿದ್ದಾರೆ ಎಂದು ಕೊಳ್ಳಲಾಗಿದೆ.
ಘಟನೆಯಲ್ಲಿ ಮೂವರು ಸಂಘ ಪರಿವಾರದ ಮಂದಿಗೆ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಶುಕ್ರವಾರ ಮೂವರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.[ಕೇರಳ: ಆರ್ ಎಸ್ಎಸ್ ಕಛೇರಿ ಬಳಿ ಬಾಂಬ್ ಸ್ಫೋಟ; ನಾಲ್ವರಿಗೆ ಗಾಯ]

ಇನ್ನು ಗುರುವಾರ ರಾತ್ರಿ ಇದೇ ಕೋಯಿಕ್ಕೋಡ್ ನಲ್ಲಿ ಆರ್.ಎಸ್.ಎಸ್ ಕಚೇರಿಯ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಘಟನೆಯಲ್ಲಿ 4 ಜನ ಗಾಯಗೊಂಡಿದ್ದರು.[ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ]
ಹಿಂದಿನಿದಂಲೂ ಕೇರಳಲದಲ್ಲಿ ಆರ್.ಎಸ್.ಎಸ್ ಮತ್ತು ಸಿಪಿಎಂ ನಡುವೆ ನಡೆಯುತ್ತಿದ್ದ ಸೈದ್ಧಾಂತಿಕ ಸಂಘರ್ಷ ಸದ್ಯ ಹಿಂಸೆಯ ರೂಪವನ್ನು ಪಡೆದುಕೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ದಿನಂಪ್ರತಿ ಒಂದಲ್ಲ ಒಂದು ಹಲ್ಲೆ ಕೊಲೆಯ ಘಟನೆಗಳು ಬೆಳಕಿಗೆ ಬರುತ್ತಿವೆ.












Click it and Unblock the Notifications