ಫಿರೋಜಾಬಾದ್ : ದುಷ್ಕರ್ಮಿಗಳ ಗುಂಡಿಗೆ ಆರೆಸ್ಸೆಸ್ ಕಾರ್ಯಕರ್ತ ಸಾವು

ಫಿರೋಜಾಬಾದ್(ಉತ್ತರಪ್ರದೇಶ), ಜುಲೈ 4: ಮನೆ ಮುಂದೆ ವಿಹಾರಾರ್ಥವಾಗಿ ಓಡಾಡಿಕೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.

ಮೃತ ಕಾರ್ಯಕರ್ತರನ್ನು ಸಂದೀಪ್ ಶರ್ಮ ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮಂಗಳವಾರ ರಾತ್ರಿ ವೇಳೆ, ಸಂದೀಪ್ ಶರ್ಮ ಅವರು, ರಾತ್ರಿ ಊಟ ಮುಗಿಸಿಕೊಂಡು, ಮನೆ ಮುಂದೆ ಓಡಾಡುತ್ತಿದ್ದರು. ಈ ವೇಳೆಗೆ ಬೈಕಿನಿಂದ ಬಂದ ಅಪರಿಚಿತ ದುಷ್ಕರ್ಮಿಗಳು ಏಕೇಕಿ ಗುಂಡು ಹಾರಿಸಿದ್ದಾರೆ.

ಗುಂಡಿನ ಸದ್ದು ಕೇಳಿ ಹೊರಕ್ಕೆ ಬಂದ ಮನೆಯವರಿಗೆ, ರಕ್ತದ ಮಡುವಿನಲ್ಲಿ ಮಲಗಿದ್ದ ಸಂದೀಪ್ ಶರ್ಮ ಕಾಣಿಸಿಕೊಂಡಿದ್ದಾರೆ. ತಕ್ಷಣವೇ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ತೀರ ರಕ್ತಸ್ರಾವದಿಂದ ಬಳಲಿದ ಶರ್ಮ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.

RSS Worker Shot Dead by Bike-borne Miscreants in Firozabad

ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಫಿರೋಜಾಬಾದ್ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ನಂತರ ಬರುವ ವರದಿ ಆಧಾರಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+