ಕೇರಳದಲ್ಲಿ ಪ್ರಭಾವ ಬೀರಲು ಆರ್ ಎಸ್ ಎಸ್ ಹವಣಿಸುತ್ತಿದೆ: ಪ್ರಕಾಶ್ ಕಾರಟ್
ನವದೆಹಲಿ, ಅಕ್ಟೋಬರ್ 12: ಕೇಂದ್ರ ಸರ್ಕಾರದ ಅಧಿಕಾರ ಉಪಯೋಗಿಸಿಕೊಂಡು ಕೇರಳದಲ್ಲಿ ತನ್ನ ಪ್ರಭಾವ ಬೀರಲು ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ ಎಂದು ಸಿಪಿಐ ಎಂ ಮುಖ್ಯಸ್ಥ ಪ್ರಕಾಶ್ ಕಾರಟ್ ಹೇಳಿದ್ದಾರೆ.
ಕೇರಳದಲ್ಲಿ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲವೆಂದು ಆರ್ ಎಸ್ ಎಸ್ ಇದೀಗ ಕೇರಳದಲ್ಲಿ ನಡೆದ ಹಿಂಸೆ ಮತ್ತು ಹತ್ಯೆಗಳನ್ನು ಕಮ್ಯನಿಸ್ಟರ ತಲೆಗೆ ಕಟ್ಟುತ್ತಿದೆ ಎಂದು ಸಹ ಅವರು ಹೇಳಿದ್ದಾರೆ.

"ಕೇಂದ್ರದಲ್ಲಿ ತಮ್ಮ ಸರ್ಕಾರವಿರುವುದರಿಂದ ಅದರ ಅಧಿಕಾರವನ್ನು ಬಳಸಿಕೊಂಡು ಕೇರಳದಲ್ಲಿ ತನ್ನ ಗಟ್ಟಿ ನೆಲೆ ಕಂಡುಕೊಳ್ಳಲು ಆರ್ ಎಸ್ ಎಸ್ ಹವಣಿಸುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ"ವೆಂದು ಅವರು ದೂರಿದ್ದಾರೆ.












Click it and Unblock the Notifications