ಪ್ರಣಬ್ ಮುಖರ್ಜಿ ತಿರುಚಿದ ಫೋಟೋಗೆ ಆರ್.ಎಸ್.ಎಸ್ ಗರಂ
ನಾಗ್ಪುರ, ಜೂನ್ 8: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ತಿರುಚಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಆರ್.ಎಸ್.ಎಸ್ ತೀವ್ರವಾಗಿ ಖಂಡಿಸಿದೆ.
ಗುರುವಾರ ಆರ್.ಎಸ್.ಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಂಘದ ಕಾರ್ಯಕ್ಕಮದಲ್ಲಿ ಡಾ. ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಆರ್.ಎಸ್.ಎಸ್ ನವರ ರೀತಿಯಲ್ಲಿ ಧ್ವಜವಂದನೆ ಸಲ್ಲಿಸದೆ ಸುಮ್ಮನೆ ನಿಂತಿದ್ದರು. ಆದರೆ, ಆರ್.ಎಸ್.ಎಸ್ ಟೋಪಿ ಹಾಕಿರುವ, ಎದೆಮಟ್ಟಕ್ಕೆ ಕೈ ಇಟ್ಟು ಧ್ವಜ ವಂದನೆ ಸಲ್ಲಿರುವ ತಿರುಚಿದ ಫೋಟೋಗಳು ಈಗ ಹರಿದಾಡುತ್ತಿವೆ.

"ನಾಗ್ಪುರದಲ್ಲಿ ನಿನ್ನೆ ಸಂಘದ ಪ್ರಾರ್ಥನೆ ವೇಳೆ ಡಾ. ಪ್ರಣಬ್ ಮುಖರ್ಜಿ ಕೈ ಮಡಚಿ ನಿಂತಿರುವ ತಿರುಚಿದ ಚಿತ್ರಗಳನ್ನು ವಿಭಜಕ ರಾಜಕೀಯ ಶಕ್ತಿಗಳು ಪ್ರಕಟಿಸಿವೆ," ಎಂದು ಆರ್.ಎಸ್.ಎಸ್ ನ ಸಹಕಾರ್ಯವಾಹ ಡಾ. ಮನ್ ಮೋಹನ್ ವೈದ್ಯ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

"ಇದೇ ಶಕ್ತಿಗಳು ಆರಂಭದಲ್ಲಿ ಕಾರ್ಯಕ್ರಮದಲ್ಲಿ ಡಾ. ಪ್ರಣಬ್ ಮುಖರ್ಜಿ ಭಾಗವಹಿಸುವುದನ್ನು ತಡೆಯಲು ಯತ್ನಿಸಿದ್ದವು. ಇದೀಗ ಈ ಶಕ್ತಿಗಳು ಆರ್.ಎಸ್.ಎಸ್ ನ ಹೆಸರಿಗೆ ಮಸಿ ಬಳೆಯಲು ಈ ರೀತಿಯ ಕೊಳಕು ಯತ್ನಗಳನ್ನು ಮಾಡುತ್ತಿವೆ," ಎಂದು ಅವರು ದೂರಿದ್ದಾರೆ.












Click it and Unblock the Notifications