ಕಣ್ಣೂರಿನಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತನ ಕಗ್ಗೊಲೆ

Posted By:
Subscribe to Oneindia Kannada

ಕಣ್ಣೂರು, ಸೆ.04: ಕೇರಳದಲ್ಲಿ ರಾಜಕೀಯ ಪ್ರೇರಿತ ಕೊಲೆಗಳು ಮುಂದುವರೆದಿದೆ. ಆರೆಸ್ಸೆಸ್ ಹಾಗೂ ಬಿಜೆಪಿಯ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾರ್ಯಕರ್ತ ವಿನೀಶ್ ಹತ್ಯೆ ಖಂಡಿಸಿ, ಬಿಜೆಪಿ ಭಾನುವಾರದಂದು ಹರತಾಳ ಹಮ್ಮಿಕೊಂಡಿದೆ.

ಕಣ್ಣೂರು ಜಿಲ್ಲೆ ಇರಿಟ್ಟಿಯ ತಿಲ್ಲಂಗೇರಿ ಸಮೀಪ ಬಿಜೆಪಿ ಕಾರ್ಯಕರ್ತನೊಬ್ಬ 27 ವರ್ಷ ವಯಸ್ಸಿನ ವಿನೀಶ್ ಎಂಬಾತನನ್ನು ಶನಿವಾರ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಾ ಸಂಘದ ಹಾಗೂ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

RSS BJP worker hacked to death in Kannur

ವಿನೀಸ್ ಕೊಲೆಯಾದ ಸ್ಥಳದಲ್ಲಿ ಕೆಲವೇ ತಾಸುಗಳ ಮುಂಚೆ ಡಿವೈಎಫ್‌ಐ ಕಾರ್ಯಕರ್ತನೊಬ್ಬನ ಮೇಲೆ ಬಾಂಬ್ ಎಸೆಯಲಾಗಿತ್ತು. ಹೀಗಾಗಿ ರಾಜಕೀಯ ಪ್ರೇರಿತ ಕೊಲೆಗಳಿಗೆ ಕಣ್ಣೂರು ರಾಜಧಾನಿಯಾಗುತ್ತಿದೆ. [ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಮಚಂದ್ರನ್ ಕೊಲೆ]

ಬಿಜೆಪಿ ಕಾರ್ಯಕರ್ತನ ಹತ್ಯೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ, ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ವಿನೇಶ್ ಹತ್ಯೆಯ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಪಿಎಂ ನರಬೇಟೆಯಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಭಾನುವಾರದಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಜುಲೈ ತಿಂಗಳಿನಲ್ಲಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಹಾಗೂ ರಾಷ್ಟೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ​ನ ಸಕ್ರಿಯ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಕಚ್ಚಾ ಬಾಂಬ್ ಎಸೆದು ಕೊಲೆ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A BJP worker and RSS swayamsevak Vineesh was hacked to death in Thillankery in Kannur district of Kerala. BJP holding a hartal from 6 am to 6 pm on Sunday(September 04)
Please Wait while comments are loading...