5000 ಕೋಟಿ ವಂಚನೆಯಲ್ಲಿ ಯೆಸ್ ಬ್ಯಾಂಕ್‌ನ ರಾಣಾ ಕಪೂರ್ ಭಾಗಿ: ಇಡಿ ಆರೋಪಪಟ್ಟಿ
The ED has alleged that Yes Bank co-founder Rana Kapoor and Dewan Housing Finance Limited promoters Kapil and Dheeraj Wadhawan siphoned off funds worth ₹ 5,050 crore through suspicious transactions.
ಮುಂಬೈ, ಏ. 23: ಯೆಸ್ ಬ್ಯಾಂಕ್‌ನ ಸಹ-ಸಂಸ್ಥಾಪಕ ರಾಣಾ ಕಪೂರ್ ಮತ್ತು ಡಿಎಚ್‌ಎಫ್‌ಎಲ್ ಸಂಸ್ಥೆಯ ಪ್ರೊಮೋಟರ್ಸ್ ಆಗಿರುವ ಕಪಿಲ್ ವಾಧವಾನ್ ಮತ್ತು ಧೀರಜ್ ವಾಧವಾನ್ ಅವರು 5 ಸಾವಿರ ರೂ ಹಣಕಾಸು ವಂಚನೆ ಎಸಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ. ಹಣ ಅವ್ಯವಹಾರ ಪ್ರಕರಣವೊಂದರಲ್ಲಿ ರಾಣ ಕಪೂರ್ ಮತ್ತು ಅವರ ಕುಟುಂಬ, ವಾಧವಾನ್ ಸಹೋದರರು ಹಾಗು ಇತರರ ವಿರುದ್ಧ ಇಡಿ ಇಂದು ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ ಮೂರನೇ ಚಾರ್ಜ್‌ಶೀಟ್‌ನಲ್ಲಿ ಈ ವಿಚಾರವನ್ನು ತಿಳಿಸಿದೆ.
ಈ ಪ್ರಕರಣದಲ್ಲಿ ಅಪರಾಧದಿಂದ ಬಂದ ಲಾಭದಲ್ಲಿ (POC- Proceeds of Crime) ಹೆಚ್ಚಿನ ಭಾಗವನ್ನು ರಾಣಾ ಕಪೂರ್ ಅವರು ವಿದೇಶಕ್ಕೆ ಸಾಗಿಸಿ ಮರೆಮಾಚಿರುವ ವಿಚಾರ ತನಿಖೆ ವೇಳೆ ಗೊತ್ತಾಯಿತು. ಈ ಅಕ್ರಮ ಆಸ್ತಿಯನ್ನ ಮನಿ ಲಾಂಡರಿಂಗ್ ಕಾಯ್ದೆ ಅಡಿ ನೇರವಾಗಿ ಅಟ್ಯಾಚ್ ಮಾಡಲು ಸಾಧ್ಯವಾಗಲಿಲ್ಲ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್‌ಗೆ ಹೇಳಿದೆ.
"ರಾಣಾ ಕಪೂರ್, ಡಿಎಚ್‌ಎಫ್‌ಎಲ್ ಪ್ರೊಮೋಟರ್‌ಗಳಾದ ಕಪಿಲ್ ವಾಧವಾನ್, ಧೀರಜ್ ವಾಧವಾನ್, ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತಿತರರು ಕ್ರಿಮಿನಲ್ ಸಂಚು ರೂಪಿಸಿ 5050 ಕೋಟಿ ರೂ ನಷ್ಟು ಹಣವನ್ನು ಅಕ್ರಮವಾಗಿ ಬೇರೆಡೆ ಸಾಗಿಸಿದ್ದರು" ಎಂದು ತನ್ನ ಹೊಸ ಆರೋಪಪಟ್ಟಿಯಲ್ಲಿ ಇ.ಡಿ. ತಿಳಿಸಿದೆ.
ಯೆಸ್ ಬ್ಯಾಂಕ್ 2018ರ ಏಪ್ರಿಲ್ ತಿಂಗಳಿಂದ ಜೂನ್ ತಿಂಗಳವರೆಗೆ ಡಿಎಚ್‌ಎಫ್‌ಎಲ್‌ನಿಂದ 3700 ಕೋಟಿ ರೂ ಮೌಲ್ಯದ ಡಿಬಂಚರ್‌ಗಳನ್ನ ಖರೀದಿ ಮಾಡಿತ್ತು. ಆ ಮೊತ್ತವನ್ನು ಡಿಎಚ್‌ಎಫ್‌ಎಲ್‌ಗೆ ವರ್ಗಾವಣೆ ಮಾಡಲಾಯಿತು. ಇದಾದ ಬಳಿಕ ಡಿಎಚ್‌ಎಫ್‌ಎಲ್ ಸಂಸ್ಥೆಯು ಡಿಒಐಟಿ ಅರ್ಬನ್ ವೆಂಚರ್ಸ್ ಪ್ರೈ ಲಿ ಎಂಬ ಕಂಪನಿಗೆ 600 ಕೋಟಿ ರೂ ಸಾಲ ಕೊಟ್ಟಿದ್ದು ತನಿಖೆ ವೇಳೆ ಬೆಳಕಿಗೆ ಬಂದಿತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಡಿಒಐಟಿ ಅರ್ಬನ್ ವೆಂಚರ್ಸ್ ಸಂಸ್ಥೆಯು (DUVPL) ರಾಣಾ ಕಪೂರ್ ಮತ್ತವರ ಕುಟುಂಬಸದಸ್ಯರ ಮಾಲೀಕತ್ವದಲ್ಲಿದೆ.

ಡಿಯುವಿಪಿಎಲ್ ಕಂಪನಿಗೆ ಸಾಲ ಕೊಡುವಾಗ ಡಿಎಚ್‌ಎಫ್‌ಎಲ್ ಸರಿಯಾದ ಅಡಮಾನ ಪಡೆದಿಲ್ಲ. ಕೇವಲ 39.68 ಕೋಟಿ ಮೌಲ್ಯದ ಆಸ್ತಿಗಳನ್ನ ಅಡಮಾನವಾಗಿ ಇಟ್ಟುಕೊಳ್ಳಲಾಗಿತ್ತು. ಈ ಆಸ್ತಿ ಮೌಲ್ಯವನ್ನು ಕೃತಕವಾಗಿ 735 ಕೋಟಿ ರೂಪಾಯಿಗೆ ಉಬ್ಬಿಸಿ 600 ಕೋಟಿ ರೂ ಸಾಲ ಕೊಡಲಾಗಿದ್ದು ಅನುಮಾನಾಸ್ಪದವಾಗಿದೆ. ಯೆಸ್ ಬ್ಯಾಂಕ್‌ನಿಂದ ತನ್ನ ಡಿಬಂಚರ್‌ಗಳನ್ನ ಖರೀದಿ ಮಾಡಿದ್ದಕ್ಕೆ ಕೃತಜ್ಞತಾಪೂರ್ವಕವಾಗಿ ಡಿಎಚ್‌ಎಫ್‌ಎಲ್ ಈ ಕೆಲಸ ಮಾಡಿದೆ ಎಂದು ಜಾರಿ ನಿರ್ದೇಶನಾಲಯವು ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ ತನ್ನ ಚಾರ್ಜ್ ಶೀಟ್‌ನಲ್ಲಿ ಆರೋಪ ಮಾಡಿದೆ.
ಇಡಿ ಇನ್ನೂ ಒಂದಷ್ಟು ಸ್ಫೋಟಕ ಮಾಹಿತಿ ಕಲೆಹಾಕಿದೆ. ಡಿಎಚ್‌ಎಫ್‌ಎಲ್‌ನಿಂದ ಸಾಲ ಪಡೆಯುವಾಗ ಡಿಯುವಿಪಿಎಲ್ ಸಂಸ್ಥೆ ಯಾವುದೇ ವ್ಯವಹಾರ ಹೊಂದಿರಲಿಲ್ಲ. ಅಂದರೆ ಅದು ಸುಮ್ಮನೆ ಹೆಸರಿಗೆ ಮಾತ್ರ ಕಂಪನಿಯಾಗಿತ್ತು. ಯಾವುದೇ ವ್ಯಾವಹಾರಿಕ ಚಟುವಟಿಕೆ ಇಲ್ಲದ ಕಂಪನಿಯೊಂದಕ್ಕೆ 600 ಕೋಟಿ ರೂ ಸಾಲ ಕೊಡಲಾಗಿತ್ತಂತೆ.
ಯೆಸ್ ಬ್ಯಾಂಕ್‌ನಿಂದ ಖರೀದಿಯಾಗಿದ್ದ ಸಾವಿರಾರು ಕೋಟಿ ಮೌಲ್ಯದ ಶಾರ್ಟ್-ಟರ್ಮ್ ಡಿಬಂಚರ್‌ಗಳನ್ನ ಡಿಎಚ್‌ಎಫ್‌ಎಲ್ ಈಗಲೂ ರಿಡೀಮ್ ಮಾಡಿಲ್ಲ. ಇದು ಅನುಮಾನ ಹುಟ್ಟಿಸುತ್ತದೆ. ಹಾಗೆಯೇ, ಡಿಎಚ್‌ಎಫ್‌ಎಲ್‌ನ ಪ್ರೊಮೋಟರ್ಸ್ ಆದ ವಾಧವಾನ್ ಅವರ ಮಾಲೀಕತ್ವದ ಬಿಲೀಫ್ ರಿಯಾಲ್ಟರ್ಸ್ ಪ್ರೈ ಸಂಸ್ಥೆಗೆ ಅದರ ಬಾಂದ್ರಾದ ಯೋಜನೆ ಹೆಸರಿನಲ್ಲಿ 750 ಕೋಟಿ ರೂ ಸಾಲ ಕೊಟ್ಟಿತು. ಆದರೆ, ಈ ಹಣ ಒಂದು ನಯಾಪೈಸೆಯನ್ನೂ ವಾಧವಾನ್ ಸಹೋದರರು ಬಳಕೆ ಮಾಡಿಲ್ಲ. ಆ ಹಣವನ್ನು ತಮ್ಮ ಶೆಲ್ (ಖೊಟ್ಟಿ) ಕಂಪನಿಗಳ ಮೂಲಕ ಬೇರೆಡೆ ಅಕ್ರಮವಾಗಿ ಸಾಗಿಸಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಪ್ರಕರಣದಲ್ಲಿ ರಾಣ ಕಪೂರ್ ಅವರನ್ನ 2020ರಲ್ಲಿ ಬಂಧಿಸಲಾಗಿದ್ದು ಈಗಲೂ ಅವರು ನ್ಯಾಯಾಂಗ ಕಸ್ಟಡಿಯಲ್ಲಿದ್ಧಾರೆ. ಇನ್ನು, ವಾಧವಾನ್ ಸಹೋದರರು ಬೇರೊಂದು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications