ಹತರಾದ ಉಗ್ರರ ಬಳಿ ಸಿಕ್ಕಿತು 2 ಸಾವಿರ ರು. ನೋಟು

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು-ಕಾಶ್ಮೀರ, ನವೆಂಬರ್ 22: ಬಂಡೀಪೋರ್ ನಲ್ಲಿ ಹೊಡೆದುರುಳಿಸಿದ ಉಗ್ರಗಾಮಿಗಳ ಬಳಿ ಭಾರತೀಯ ಸೇನೆಗೆ 2 ಸಾವಿರ ರುಪಾಯಿಯ ಹೊಸ ನೋಟುಗಳು ದೊರೆತಿವೆ. ಜತೆಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಸಹ ದೊರೆತಿವೆ. ಉಗ್ರಗಾಮಿಗಳ ಬಳಿ 2 ಸಾವಿರ ರುಪಾಯಿಯ ಹೊಸ ನೋಟುಗಳಿದ್ದವು,

ಕಾರ್ಯಾಚರಣೆ ನಂತರ ನಡೆದ ಶೋಧ ಕಾರ್ಯದಲ್ಲಿ ನೂರು ರುಪಾಯಿಯ ಕೆಲವು ನೋಟುಗಳು ಸಹ ಸಿಕ್ಕಿವೆ. ಬಂಡೀಪೋರ್ ನ ಹಂಜಾನ್ ಹಳ್ಳಿಯ ಜನವಸತಿ ಪ್ರದೇಶದಲ್ಲಿ ಸೇನೆಯು ಉಗ್ರಗಾಮಿಗಳ ಎನ್ ಕೌಂಟರ್ ಮಾಡಿತ್ತು. ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರಗಾಮಿಗಳನ್ನು ಕೊಲ್ಲಲಾಯಿತು.[ಹಿಂದೂ ಮುಖಂಡರ ಹತ್ಯೆಗೆ ಭಯೋತ್ಪಾದಕರ ಸಂಚು!]

Rs 2,000 notes found on terrorists killed at Bandipora, J&K

ಮದ್ದು-ಗುಂಡು ಹಾಗೂ ಶಸ್ತ್ರಾಸ್ತ್ರದ ಜತೆಗೆ ಎಕೆ-47 ಕೂಡ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರ ಗುರುತು ಪತ್ತೆ ಹಚ್ಚಬೇಕಿದೆ. ಉಗ್ರಗಾಮಿಗಳು ಲಷ್ಕರ್ ಇ ತೋಯ್ಬಾಗೆ ಸೇರಿದವರಿರಬಹುದು ಎಂದು ಸೇನೆ ಅಧಿಕಾರಿಗಳು ಶಂಕಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರು ಒಳ ನುಸುಳಿದ ನಂತರ ಸ್ಥಳೀಯರಿಂದ ಹೊಸ ನೋಟುಗಳನ್ನು ಪಡೆದಿರಬಹುದು ಎಂಬ ಗುಮಾನಿ ಇದೆ.

ಉಗ್ರಗಾಮಿಗಳ ಕೃತ್ಯಕ್ಕೆ ಹಣಕಾಸು ನೆರವು ದೊರೆಯಬಾರದು, ನಕಲಿ ನೋಟುಗಳ ಮುದ್ರಣಕ್ಕೆ ತಡೆಯೊಡ್ಡಬೇಕು, ಕಪ್ಪುಹಣಕ್ಕೆ ಕಡಿವಾಣ ಹಾಕಬೇಕು ಎಂಬ ಕಾರಣಕ್ಕೆ ನವೆಂಬರ್ 8ರಂದು 500, 1000 ರುಪಾಯಿ ನೋಟುಗಳನ್ನು ರದ್ದು ಮಾಡಿ, ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Indian army has recovered the new Rs 2,000 note from the terrorists who were gunned down in an encounter at Bandipora, Jammu and Kashmir. Apart from arms and ammunition, recovered, the terrorists were in possession of the new Rs 2,000 notes.
Please Wait while comments are loading...