ಕಾರೈಕುಡಿಯಲ್ಲಿ ಸಿಕ್ಕಿದ್ದು 1.2 ಕೋಟಿ ಹಳೇ ನೋಟು, ನಾಲ್ವರು ಅರೆಸ್ಟ್

Posted By:
Subscribe to Oneindia Kannada

ಚೆನ್ನೈ, ಜನವರಿ 27: 1.2 ಕೋಟಿ ಮೌಲ್ಯದ ಅಮಾನ್ಯವಾಗಿದ್ದ ನೋಟುಗಳನ್ನು ವಶಪಡಿಸಿಕೊಂಡ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಕಾರೈಕುಡಿ ಸಮೀಪದ ಲಾಡ್ಜ್ ವೊಂದರಲ್ಲಿ ಶುಕ್ರವಾರ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಚೆನ್ನೈ ಮೂಲದ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ.

ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ ನಾಲ್ವರ ತಂಡವು ಗುರುವಾರ ಕಾರೈಕುಡಿಗೆ ಬಂದು, ಹಳೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಗಣೇಶ್ ಉದಯರ್ ಎಂಬಾತನನ್ನು ಭೇಟಿ ಮಾಡಿದ್ದರು. ಈ ನಾಲ್ವರಿಗೆ ಚೆನ್ನೈ ಮೂಲದ ವ್ಯಕ್ತಿಯಿಂದ ಸೂಚನೆಯೊಂದಿತ್ತು. ಆ ಪ್ರಕಾರ ಹಣವನ್ನು ಶಿವಗಂಗಾ ಜಿಲ್ಲೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ತಲುಪಿಸಬೇಕಿತ್ತು.

Rs. 1.2 crore in demonetised currency seized in TN, 4 held

ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ. ಕೇಂದ್ರ ಸರಕಾರದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 31ರ ನಂತರ ಹಳೇ ನೋಟುಗಳನ್ನು ಹತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರಿಸಿಕೊಳ್ಳಬಾರದು ಎಂದು ಕೇಂದ್ರ ಸರಕಾರ ಸೂಚನೆ ನೀಡಿತ್ತು. ಆದರೆ ಈಗ ಸಿಕ್ಕಿರುವ ಮೊತ್ತ 1.2 ಕೋಟಿ ರುಪಾಯಿ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demonetised currency notes to the tune of Rs. 1.2 crore were seized from a lodge in nearby Karaikudi on Friday with four persons arrested in this connection, police said.
Please Wait while comments are loading...