ಪ್ರಜಾಪ್ರತಿನಿಧಿ ಕಾಯ್ದೆಯಡಿ ಅನರ್ಹಗೊಂಡ ಜನಪ್ರತಿನಿಧಿಗಳ ಪಟ್ಟಿ

ನವದೆಹಲಿ, ಮಾರ್ಚ್ 24: 'ಎಲ್ಲಾ ಕಳ್ಳರಿಗೂ ಮೋದಿ ಉಪನಾಮೆ ಏಕಿರುತ್ತದೆ' ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ ರಾಹುಲ್ ಅವರನ್ನು ದೋಷಿ ಎಂದು ಆದೇಶ ನೀಡಿತ್ತು. ಈಗ ಅದರ ಬೆನ್ನಲ್ಲೇ, ಲೋಕಸಭಾ ಸದಸ್ಯತ್ವ ಸ್ಥಾನದಿಂದಲೂ ಅವರನ್ನು ಅನರ್ಹಗೊಳಿಸಲಾಗಿದೆ.

ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ರಾಹುಲ್ ಗಾಂಧಿ ಅವರ ಮೇಲಿನ ಅಪರಾಧ ಸಾಬೀತಾದ ದಿನಾಂಕದಿಂದ ಅಂದರೆ ಮಾರ್ಚ್ 23, 2023 ರಿಂದ 102(1)(ಇ) ವಿಧಿಯ ನಿಬಂಧನೆಗಳ ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಲೋಕಸಭೆಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

parlimentdp

ಪ್ರಜಾಪ್ರತಿನಿಧಿ ಕಾಯಿದೆಯನ್ವಯ, ಎರಡು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಅವಧಿಯ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಯನ್ನು ಅಪರಾಧ ಎಂದು ನಿರ್ಣಯವಾದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಭಾರತದ ಇತಿಹಾಸದಲ್ಲಿ ಈ ರೀತಿ ಸಂಸದ ಸ್ಥಾನದಿಂದ ಅನರ್ಹಗೊಂಡ ರಾಜಕಾರಣಿ ರಾಹುಲ್ ಗಾಂಧಿ ಮಾತ್ರವಲ್ಲ. ಆರ್‌ಪಿ ಕಾಯ್ದೆಯಡಿ (Representation of the People (RP) Act) ನಿರ್ಬಂಧಿಸಲಾದ ಇತರ ಪ್ರಮುಖ ನಾಯಕರ ಹೆಸರುಗಳು ಇಲ್ಲಿವೆ.

ಜಾಗೀರ್ ಕೌರ್: ಮಾಜಿ ಕ್ಯಾಬಿನೆಟ್ ಸಚಿವೆಯಾಗಿದ್ದ ಇವರು, ಬಲವಂತದ ಗರ್ಭಪಾತ ಮತ್ತು ಮಗಳ ಅಪಹರಣದ ಆರೋಪದ ನಂತರ ಕ್ಯಾಬಿನೆಟ್ ಸ್ಥಾನವನ್ನು ಕಳೆದುಕೊಂಡರು.

ಲಾಲು ಪ್ರಸಾದ್ ಯಾದವ್: ಅಕ್ಟೋಬರ್ 2013 ರಲ್ಲಿ ಇವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು ಮತ್ತು 11 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಯಿತು, ಇದರಲ್ಲಿ ಅವರ 5 ವರ್ಷಗಳ ಜೈಲು ಶಿಕ್ಷೆ ಒಳಗೊಂಡಿತ್ತು.

ಇಂದಿರಾ ಗಾಂಧಿ : ಚುನಾವಣಾ ಪ್ರಚಾರಕ್ಕಾಗಿ ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರನ್ನು ದೋಷಿ ಎಂದು ಅಲಹಾಬಾದ್ ಹೈಕೋರ್ಟ್ ಅಸಿಂಧುಗೊಳಿಸಿತ್ತು. ನ್ಯಾಯಾಲಯವು ಅವರ ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸಿತ್ತು.

ಅಲ್ಲದೇ, ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭೆಯ ಅವರ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಹೆಚ್ಚುವರಿಯಾಗಿ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯ ಅವರನ್ನು ನಿಷೇಧಿಸಿತ್ತು.

ಉಮ್ಲೇಶ್ ಯಾದವ್: 2007ರ ಉತ್ತರ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಸೌಲಿ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾದಾಗ ಮಾಡಿದ ಚುನಾವಣಾ ವೆಚ್ಚವನ್ನು ಆಯೋಗದ ಕಾನೂನಿನ ಪ್ರಕಾರ ನಿರ್ವಹಿಸದೇ ಇದ್ದ ಕಾರಣಕ್ಕಾಗಿ ಮೂರು ವರ್ಷಗಳ ಅವಧಿಗೆ ಭಾರತದ ಚುನಾವಣಾ ಆಯೋಗದಿಂದ ಅನರ್ಹಗೊಂಡಿದ್ದರು.

loksabha

ಜಯಲಲಿತಾ: ಬೆಂಗಳೂರಿನ ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ಅವರನ್ನು ದೋಷಿ ಎಂದು ತೀರ್ಪು ನೀಡಿದ ನಂತರ ಎಐಎಡಿಎಂಕೆ ಮುಖ್ಯಸ್ಥೆಯಾಗಿದ್ದ ಇವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿತ್ತು.

ಅಜಂ ಖಾನ್: ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಅನರ್ಹಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+