ಕೊಟ್ಟ ಭರವಸೆ ಈಡೇರಿಸುವುದು ಬಿಜೆಪಿ ಅಲ್ಲ, ಕಾಂಗ್ರೆಸ್: ರಾಬರ್ಟ್ ವಾದ್ರಾ
ನವದೆಹಲಿ, ಮೇ 17: ಬಿಜೆಪಿ ಕೊಡುವುದು ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ಮಾತ್ರ. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಕಾಂಗ್ರೆಸ್ ಪಕ್ಷ ಎಂದು ಉತ್ತರ ಪ್ರದೇಶದ (ಪೂರ್ವ) ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿರುವ ರಾಬರ್ಟ್ ವಾದ್ರಾ, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
'ಜನರಿಗೆ ತಾನು ನೀಡಿದ ಭರವಸೆ ನೀಡಿದ್ದನ್ನು ಕಾಂಗ್ರೆಸ್ ಈಡೇರಿಸುತ್ತದೆ. ಬಿಜೆಪಿ ಮಾಡಿದಂತೆ ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ಬಿಜೆಪಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ನಾವು ಎಲ್ಲ ಅಗತ್ಯಗಳನ್ನೂ ಪೂರೈಸುತ್ತೇವೆ' ಎಂದು ವಾದ್ರಾ ಹೇಳಿದ್ದಾರೆ.
ಅಲ್ಲದೆ, ವಾದ್ರಾ ಎರಡು ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ಅವರು ಕಾಂಗ್ರೆಸ್‌ಗಾಗಿ ಮತಯಾಚನೆ ಮಾಡುತ್ತಿದ್ದಾರೆ. ಇನ್ನೊಂದು ಫೋಟೊದಲ್ಲಿ ಬಡವರಿಗೆ ಆಹಾರ ಹಂಚುತ್ತಿರುವುದನ್ನು ಕಾಣಬಹುದು.

ನಾವು ನಮ್ಮ ಭರವಸೆಗಳೊಂದಿಗೆ ಖಚಿತವಾಗಿ ನಿಲ್ಲುತ್ತೇವೆ. ನವ ಭಾರತಕ್ಕಾಗಿ ಮತ ಹಾಕಿ ಎಂದು ಅವರು ಹೇಳಿದ್ದಾರೆ.
ರಾಬರ್ಟ್ ವಾದ್ರಾ ಅವರ ವಿರುದ್ಧ ಮೂರು ಪ್ರಕರಣಗಳಿವೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂಮಿ ವ್ಯವಹಾರದ ಅಕ್ರಮ ಹಣ ವರ್ಗಾವಣೆ ಪ್ರಕರಣ, 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲಿಯಂ ಡೀಲ್ ಪ್ರಕರಣ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅಕ್ರಮ ಆಸ್ತಿ ಹೊಂದಿರುವ ಪ್ರಕರಣಗಳು ನ್ಯಾಯಾಲಯದಲ್ಲಿವೆ.












Click it and Unblock the Notifications