ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರಿಯ ರಾಜಕಾರಣದತ್ತ ರಾಬರ್ಟ್ ವಾದ್ರಾ: ಉ.ಪ್ರದೇಶದ ಈ ಕ್ಷೇತ್ರದಿಂದ ಕಣಕ್ಕೆ?

|
Google Oneindia Kannada News

ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮಾರ್ಚ್ ಏಳರಂದು ಮುಕ್ತಾಯಗೊಳ್ಳಲಿದೆ, ಮಾರ್ಚ್ ಹತ್ತರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ ಏಳರ ಸಂಜೆಯಿಂದ ಫಲಿತಾಂಶದ ವರೆಗೆ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆಗಳ ಅಬ್ಬರ.

ಉತ್ತರ ಪ್ರದೇಶ ಎನ್ನುವುದು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಮುಖವಾದದಂತದ್ದು. ಈ ಬಾರಿಯ ಚುನಾವಣೆಯಲ್ಲಿ ನಾನೋ, ನೀನೋ ಎನ್ನುವ ಹಾಗೇ ಎರಡು ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಬಹುತೇಕ ನೇರ ಪೈಪೋಟಿ.

ಕೇಂದ್ರದಲ್ಲಿ ಸರಕಾರ ರಚಿಸಲು ಭಾಷ್ಯ ಬರೆಯುವ ಉತ್ತರ ಪ್ರದೇಶದಲ್ಲಿ ತಮ್ಮ ಹಿಂದಿನ ಛಾಪು ಮೂಡಿಸಲು ಪ್ರಿಯಾಂಕ ಗಾಂಧಿ ವಾದ್ರಾ ಹೆಚ್ಚುಕಮ್ಮಿ ಎರಡು ವರ್ಷದಿಂದ ಅಲ್ಲಿ ಬೀಡುಬಿಟ್ಟಿದ್ದು ಗೊತ್ತಿರುವ ವಿಚಾರ.

ಹೀಗಾಗಿ, ಸಂಪೂರ್ಣವಾಗಿ ಕಾಂಗ್ರೆಸ್ ಪ್ರಚಾರವನ್ನು ಮತ್ತು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರದಲ್ಲಿ ಪ್ರಿಯಾಂಕ ಅವರದ್ದೇ ಕಾರುಬಾರು. ಇವರ, ಅವಿರತ ಪ್ರಯತ್ನ ಪಕ್ಷಕ್ಕೆ ಗತವೈಭವವನ್ನು ಮರುಕಳಿಸುತ್ತಾ ಎನ್ನುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರ ಪತಿ ರಾಬರ್ಟ್ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿಯುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ.

 ಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶ

ಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶ

ಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಎರಡೇ ಕ್ಷೇತ್ರವನ್ನು. ಅದು, ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ, ಬಿಜೆಪಿ ಗೆದ್ದಿದ್ದು 71ಕ್ಷೇತ್ರದಲ್ಲಿ. ಇನ್ನು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಕ್ಷೇತ್ರವನ್ನು. ವಂಶ ಪಾರಂಪಾರ್ಯವಾಗಿ ಗೆದ್ದು ಬರುತ್ತಿದ್ದ ಅಮೇಥಿಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

 ಬಿಜೆಪಿಯ ಭದ್ರಕೋಟೆಯಂತಿರುವ ಮೊರದಾಬಾದ್ ಲೋಕಸಭಾ ಕ್ಷೇತ್ರ

ಬಿಜೆಪಿಯ ಭದ್ರಕೋಟೆಯಂತಿರುವ ಮೊರದಾಬಾದ್ ಲೋಕಸಭಾ ಕ್ಷೇತ್ರ

ಈಗ, ಪ್ರಿಯಾಂಕ ಗಾಂಧಿಯವರ ಪತಿ ಮತ್ತು ಉದ್ಯಮಿಯೂ ಆಗಿರುವ ರಾಬರ್ಟ್ ವಾದ್ರಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಅದು ಸಮಾಜವಾದಿ ಪಕ್ಷ ಮತ್ತು ಬಿಜೆಪಿಯ ಭದ್ರಕೋಟೆಯಂತಿರುವ ಮೊರದಾಬಾದ್ ಲೋಕಸಭಾ ಕ್ಷೇತ್ರದಿಂದ. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 97,878 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಅದಕ್ಕಿಂತ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 87,504 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.

 ವಾದ್ರಾ, ತಮ್ಮ ಸ್ವಂತ ಊರು ಮೊರದಾಬಾದ್ ನಿಂದ ಸ್ಪರ್ಧಿಸುವ ಇಂಗಿತ

ವಾದ್ರಾ, ತಮ್ಮ ಸ್ವಂತ ಊರು ಮೊರದಾಬಾದ್ ನಿಂದ ಸ್ಪರ್ಧಿಸುವ ಇಂಗಿತ

2009ರ ಚುನಾವಣೆಯಲ್ಲಿ ಮೊಹ್ಮದ್ ಅಜರುದ್ದೀನ್ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಗೆಲುವು ಸಾಧಿಸಿದ್ದರು. ಮುಸ್ಲಿಂ ಪ್ರಾಭಲ್ಯವಿರುವ ಮೊರದಾಬಾದ್ ನಗರ ಪಶ್ಚಿಮ ಉತ್ತರ ಪ್ರದೇಶದ ಭಾಗದಲ್ಲಿದ್ದು, ದೆಹಲಿಯಿಂದ 167ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ, ರಾಷ್ಟ್ರ ರಾಜಕಾರಣಕ್ಕೆ ಇಲ್ಲಿ ಹೆಚ್ಚಿನ ಮಹತ್ವ. ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ರಾಬರ್ಟ್ ವಾದ್ರಾ, ತಮ್ಮ ಸ್ವಂತ ಊರು ಕೂಡಾ ಆಗಿರುವ ಮೊರದಾಬಾದ್‌ನಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.

 ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ

ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ

"ಚುನಾವಣೆಯಿರಲಿ ಬಿಡಲಿ, ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ. ಮೊರದಾಬಾದ್ ಅಥವಾ ಉತ್ತರ ಪ್ರದೇಶದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿ ರಾಜಕೀಯಕ್ಕೆ ಇಳಿಯುವಂತೆ ನನಗೆ ಸಾಕಷ್ಟು ಒತ್ತಾಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ನನ್ನ ಮೇಲೆ ಮತದಾರನಿಗೆ ಬಹಳಷ್ಟು ವಿಶ್ವಾಸವಿರುವುದರಿಂದ, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಒತ್ತಡವಿದೆ. ಸ್ಪರ್ಧಿಸುತ್ತೇನೋ, ಇಲ್ಲವೋ ಜನಸೇವೆಯಲ್ಲಂತೂ ಇರುತ್ತೇನೆ"ಎಂದು ರಾಬರ್ಟ್ ವಾದ್ರಾ ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.

Recommended Video

ಪುಟಿನ್ ಹಾಕೋ ಷರತ್ತುಗಳನ್ನು ಉಕ್ರೇನ್ ಒಪ್ಪಿಕೊಂಡ್ರೆ ಮಾತ್ರ ಯುದ್ಧ ನಿಲ್ಲೋದಂತೆ | Oneindia Kannada

English summary
Robert Vadra Husband Of Congress General Secretary Priyanka Gandhi Wants To Contest 2024 Loksabha Election. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X