ಉಗ್ರ ರಿಯಾಜ್ ಎನ್ಕೌಂಟರ್: ಹಿಜ್ಬುಲ್ ಉಗ್ರರು ಬೆಚ್ಚಿಬೀಳುವ ವಿಷಯ ಇನ್ನೊಂದಿದೆ!

ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ನನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

Recommended Video

      ಹುಟ್ಟಿದ್ದಕ್ಕೆ ಸಾರ್ಥಕವಾಯ್ತು ಅಂತಾ ತಮಗೆ ತಾವೇ ಲಕ್ಷ್ಮಿ‌ಹೆಬ್ಬಾಳ್ಕರ್ ಹೇಳಿದ್ಯಾಕೆ?

      ಈ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಬುರ್ಹಾನ್ ವಾನಿ ಸಾವನ್ನಪ್ಪಿದ ನಂತರ, ಆ ಸ್ಥಾನಕ್ಕೆ ಬಡ್ತಿ ಪಡೆದಿದ್ದ ರಿಯಾಜ್, ತಲೆಗೆ ಹನ್ನೆರಡು ಲಕ್ಷ ರೂಪಾಯಿ ಘೋಷಿಸಲಾಗಿತ್ತು.

      ಈತನನ್ನು ಸೆರೆಹಿಡಿಯುವುದೋ ಅಥವಾ ಎನ್ಕೌಂಟರ್ ಮಾಡುವುದು ಭಾರತೀಯ ಸೇನೆಗೆ ಪ್ರಮುಖ ಆದ್ಯತೆಯಾಗಿತ್ತು. ತನ್ನ ತಾಯಿಯನ್ನು ನೋಡಲು ಬಂದಿದ್ದ ರಿಯಾಜ್ ನನ್ನು ಫಿನಿಷ್ ಮಾಡುವಲ್ಲಿ ಸೇನೆ ಯಶಸ್ವಿಯಾಗಿದೆ.

      ಉಗ್ರ ರಿಯಾಜ್ ಪುಲ್ವಾಮಾಗೆ ಬಂದಿದ್ದ ಖಚಿತ ಮಾಹಿತಿ ಸೇನೆ ಮತ್ತು ಜಮ್ಮು, ಕಾಶ್ಮೀರ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯನ್ನು ಸೇನೆಗೆ ನೀಡಿದ್ದು, ಇನ್ನೊಂದು ಉಗ್ರ ಸಂಘಟನೆ ಎನ್ನುವುದು ಹಿಜ್ಬುಲ್ ಮುಜಾಹಿದ್ದೀನ್ ಗೆ ಭಾರೀ ಹಿನ್ನಡೆಯಾಗುವ ಅಂಶವಾಗಿದೆ. ರಕ್ಷಣಾ ಪಡೆಗಳ ಸಹಾಯಕ್ಕೆ ನಿಂತ ಉಗ್ರ ಸಂಘಟನೆ ಯಾವುದು?

      ಹಿಜ್ಬುಲ್ ಮುಖ್ಯಸ್ಥ ಬುರ್ಹಾನ್ ವಾನಿ

      ಹಿಜ್ಬುಲ್ ಮುಖ್ಯಸ್ಥ ಬುರ್ಹಾನ್ ವಾನಿ

      ಹಿಜ್ಬುಲ್ ಮುಖ್ಯಸ್ಥನಾಗಿದ್ದ ಬುರ್ಹಾನ್ ವಾನಿ 2016ರ ಜುಲೈನಲ್ಲಿ ಎನ್ಕೌಂಟರ್ ನಲ್ಲಿ ಹತನಾಗಿದ್ದ. ಆ ಸ್ಥಾನವನ್ನು ತುಂಬಿದ್ದ ರಿಯಾಜ್ ನೈಕೂ, ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ರಾಜೀನಾಮೆ ನೀಡುವಂತೆ ಹಲವು ಬಾರಿ ಬೆದರಿಸಿದ್ದ. ಮತ್ತು, ಈ ಭಾಗದ ಯುವಕರನ್ನು ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ.

      ಗುಪ್ತಚರ ಇಲಾಖೆ

      ಗುಪ್ತಚರ ಇಲಾಖೆ

      ಬುಧವಾರ (ಮೇ 6) ರಿಯಾಜ್ ನ ಸ್ವಂತ ಊರಾದ ಪುಲ್ವಾಮಾದ ಬೆಲ್ಫ್ ಪುರದಲ್ಲಿ ಹತ್ಯೆಗೈಯಲಾಯಿತು. ರಿಯಾಜ್ ಸೇರಿ ಕೆಲವು ಉಗ್ರರು ಅಲ್ಲಿ ತಂಗಿದ್ದಾರೆ ಎನ್ನುವ ಖಚಿತ ಮಾಹಿತಿ, ಗುಪ್ತಚರ ಇಲಾಖೆಯ ಮೂಲಕ, ಸೇನೆ ಮತ್ತು ಪೊಲೀಸರಿಗೆ ಲಭಿಸಿತ್ತು.

      ದಿ ರೆಸಿಸ್ಟನ್ಸ್ ಫ್ರಂಟ್ ಉಗ್ರ ಸಂಘಟನೆ

      ದಿ ರೆಸಿಸ್ಟನ್ಸ್ ಫ್ರಂಟ್ ಉಗ್ರ ಸಂಘಟನೆ

      ಇಂತಹ ಸೆನ್ಸಿಟೀವ್ ಮಾಹಿತಿಯನ್ನು ಬಹಿರಂಗ ಪಡಿಸದ ಗುಪ್ತಚರ ಇಲಾಖೆ, ಮಾಹಿತಿ ನೀಡಿದ ಉಗ್ರ ಸಂಘಟನೆಯ ಹೆಸರನ್ನು ಬಹಿರಂಗ ಪಡಿಸಿದೆ. 'ದಿ ರೆಸಿಸ್ಟನ್ಸ್ ಫ್ರಂಟ್' (ಟಿ ಆರ್ ಎಫ್) ಎನ್ನುವ ಉಗ್ರ ಸಂಘಟನೆ, ರಿಯಾಜ್ ಇರುವ ಮಾಹಿತಿಯನ್ನು ನೀಡಿದ್ದು ಎಂದು ಐಬಿ ಬಹಿರಂಗ ಪಡಿಸಿದೆ.

      ಉಗ್ರ ರಿಯಾಜ್ ಎನ್ಕೌಂಟರ್

      ಉಗ್ರ ರಿಯಾಜ್ ಎನ್ಕೌಂಟರ್

      "ಟಿ ಆರ್ ಎಫ್, ಲಷ್ಕರ್ ತೊಯ್ಬಾ ಮತ್ತು ಪಾಕಿಸ್ತಾನ ಮೂಲದ ಇತರ ಉಗ್ರ ಸಂಘಟನೆಯ ಇನ್ನೊಂದು ಮುಖ. ಈ ಸಂಘಟನೆ, ಕಾಶ್ಮೀರದಿಂದ ಕಾರ್ಯಾಚರಣೆ ನಡೆಸುತ್ತಿರುವುದು, ಇದಕ್ಕೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಗತ್ತಿಗೆ ತೋರಿಸಲು, ಪಾಕಿಸ್ತಾನದ ಹೊಸ ಐಡಿಯಾ ಇದು" ಎಂದು ಐಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಷ್ಕರ್ ಮತ್ತು ಜೈಶ್ ಮೊಹಮ್ಮದಿನ ಪ್ರಮುಖ ಉಗ್ರರು ಟಿ ಆರ್ ಎಫ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+