ದೇಶಭಕ್ತಿ ಮನದೊಳಗಿರಲಿ, ಪ್ರದರ್ಶನ ಬೇಕಿಲ್ಲ: ಮೋದಿ

ನವದೆಹಲಿ, ಡಿಸೆಂಬರ್. 01: ಬಾಬಾಸಾಹೇಬ್ ಅಂಬೇಡ್ಕರ್ ಭಾರತ ಸಂಪೂರ್ಣ ಕೈಗಾರಿಕರಣವಾಗಬೇಕು ಎಂಬ ಕನಸು ಕಂಡಿದ್ದರು. ಸಂವಿಧಾನವೇ ನಮ್ಮೆಲ್ಲರ ಶಕ್ತಿ, ಜೀವಾಳ, ಇದರ ಎದುರು ಉಳಿದ ಸಂಗತಿಗಳೆಲ್ಲ ನಗಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರತಿಪಾದಿಸಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಅವರು ರಾಜ್ಯಸಭೆಯಲ್ಲಿ ಮಾತನಾಡಿದರು. ಸಂವಿಧಾನ ಮೇಲಿನ ಚರ್ಚೆಯಲ್ಲಿ ದೇಶ ಒಗ್ಗಟ್ಟಾಗಿರಲು ಹಲವು ಕಾರಣಗಳಿವೆ. ಏಕತೆಗೆ ಭಂಗ ತರುವಂತಹ ಕೆಲಸಗಳು ನಡೆದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.[ತಾಜ್ ಮಹಲ್ ಬಗ್ಗೆ ಮೋದಿ ಸರ್ಕಾರ ಹೇಳೋದೇನು?]

narendra

ಪ್ರಧಾನಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
* ಸಂವಿಧಾನದ ಬಗ್ಗೆ ಮಾತನಾಡುತ್ತೇವೆ ಅಂದರೆ ನಮ್ಮ ದೇಶದ ಹೋರಾಟಗಾರರು, ನಿಜವಾದ ನಾಯಕರ ಬಗ್ಗೆ ಮಾತನಾಡುತ್ತಿದ್ದೇವೆ ಎಂದೇ ಅರ್ಥ.
* ನಮ್ಮ ಮೇಲಿನ ಜವಾಬ್ದಾರಿಯನ್ನು ನಾವು ಚೆನ್ನಾಗಿಯೇ ನಿಭಾಯಿಸುತ್ತಿದ್ದೇವೆ. ಇದು ಇಡೀ ದೇಶಕ್ಕೆ ಗೊತ್ತು.
* ಸಮಾಜ ತಾನಾಗಿಯೇ ಸುಧಾರಣೆಗೊಳ್ಳಬೇಕು. ಬೇಡದ ಆಚರಣೆಗಳಿಂದ ಸ್ವಯಂ ಪ್ರೇರಿತರಾಗಿ ಹೊರಕ್ಕೆ ಬರಬೇಕು.[ಕುಡಿಯುವ ನೀರಿಗೆ ಮೋದಿಗೆ ಪತ್ರ ಬರೆದ ಬೆಂಗಳೂರಿಗ]
* ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಲೇ ಬೇಕಿಲ್ಲ. ಉತ್ತಮ ಯೋಜನೆ, ಆಲೋಚನೆ ಯಾರದ್ದೇ ಆದರೂ ಅದನ್ನು ಬೆಂಬಲಿಸಬೇಕು.
* ದೇಶದಲ್ಲಿ ಪ್ರತಿಭಟನೆ ಮಾಡುವುದು ಎಂದರೇ ದೇಶ ದ್ರೋಹ ಎಂಬಂಥ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.
* ಯಾರಿಗೂ ನಿಮ್ಮ ದೇಶಭಕ್ತಿ ಪ್ರದರ್ಶನ ಮಾಡಿ ಎಂದು ಹೇಳಿಲ್ಲ. ಇಂಥ ಸಂದರ್ಭದಲ್ಲಿ ಅಂಥ ಅಗತ್ಯವೂ ಇಲ್ಲ. ನಿಜವಾದ ದೇಶಭಕ್ತಿಯನ್ನು ಮೆರೆಸಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು.
* ನಂತರ ರಾಜ್ಯ ಸಭಾ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+