ಬಾಲಿವುಡ್ ಸಿನಿಮಾಗೆ ಸ್ಪೂರ್ತಿಯಾಯ್ತು ರಿಕ್ಷಾ ಡ್ರೈವರ್‌ ಮಗನ ಲೈಫ್‌ ಜರ್ನಿ: ಇದು IAS ಅಧಿಕಾರಿ ಗೋವಿಂದ್ ಯಶೋಗಾಥೆ

ಬಡತನ, ಕಷ್ಟ, ಮೂಲಸೌಕರ್ಯಗಳ ಕೊರತೆಗಳು ಎಂದಿಗೂ ಸಾಧಿಸಬೇಕು ಎನ್ನುವ ಛಲ ಇರುವವರಿಗೆ ಸಾಧಕರಿಗೆ ಎಂದಿಗೂ ಅಡ್ಡಿಯಾಗಿಲ್ಲ ಎಂಬುದಕ್ಕೆ ನಮ್ಮ ದೇಶದಲ್ಲಿ ಅನೇಕ ಒಳ್ಳೆಯ ಉದಾಹರಣೆಗಳಿವೆ. ತಂದೆ ರಿಕ್ಷಾ ಓಡಿಸುತ್ತಿದ್ದರೂ, ಮಗನಿಗೆ ಉನ್ನತ ಶಿಕ್ಷಣ ಕೊಡಿಸಿ ಆತನನ್ನು ದೇಶದ ಅತ್ಯುನ್ನತ ಅಧಿಕಾರಿಯನ್ನಾಗಿ ಮಾಡಿದ ಹೆಮ್ಮೆಯ ಕಥೆ ಇದು.

ಹೌದು, ವಾರಣಾಸಿಯ ಪುಟ್ಟ ಗಲ್ಲಿಯಿಂದ ಬಂದು ಇದೀಗ ಜಮ್ಮು ಮತ್ತು ಕಾಶ್ಮೀರದ ಆಡಳಿತದ ಪ್ರಮುಖ ಹುದ್ದೆಯನ್ನ ಅಲಂಕರಿಸಿರುವ ಐಎಎಸ್ ಅಧಿಕಾರಿ ಗೋವಿಂದ್ ಜೈಸ್ವಾಲ್ ಅವರ ಜೀವನಗಾಥೆ ಯುವಜನತೆಗೆ ನಿಜಕ್ಕೂ ಮಾದರಿ.

Rickshaw Puller Son To J amp amp K LG s Principal Secretary The Inspiring Story Of IAS Govind Jaiswal

ಗೋವಿಂದ್ ಹಿನ್ನೆಲೆ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳೆದ ಗೋವಿಂದ್ ಜೈಸ್ವಾಲ್ ಅವರಿಗೆ ಹಣಕಾಸಿನ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಅರಿವಿತ್ತು. ಅವರ ತಂದೆ ಸಂಸಾರವನ್ನ ಸಾಗಿಸಲು ರಿಕ್ಷಾ ಓಡಿಸುತ್ತಿದ್ದರು.

ಆದರೆ, ತಮ್ಮ ಭವಿಷ್ಯಕ್ಕೆ ಹೊಸ ಬಾಗಿಲುಗಳನ್ನ ತೆರೆಯಲು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಬಲವಾದ ನಂಬಿಕೆ ಗೋವಿಂದ್ ಅವರಲ್ಲಿತ್ತು. ಎಷ್ಟೇ ಕಷ್ಟ ಬಂದರೂ ಅವರು ತಮ್ಮ ಓದು ಮತ್ತು ಅಧ್ಯಯನವನ್ನ ನಿಲ್ಲಿಸಲಿಲ್ಲ. ತಮ್ಮ ಪರಿಸ್ಥಿತಿಗಳು ತಮ್ಮ ಮಹತ್ವಾಕಾಂಕ್ಷೆಗಳನ್ನ ಕಸಿದುಕೊಳ್ಳಲು ಅವರು ಎಂದಿಗೂ ಅವಕಾಶ ನೀಡಲಿಲ್ಲ.

ಜೌನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಬಿ.ಎಸ್‌ಸಿ ಪದವಿ ಪಡೆದ ಅವರು, ನಂತರ ಭಾರತದ ಅತ್ಯಂತ ಕಠಿಣವಾದ ಯುಪಿಎಸ್‌ಸಿ ಪರೀಕ್ಷೆ (ನಾಗರಿಕ ಸೇವಾ ಪರೀಕ್ಷೆ) ಎದುರಿಸುವ ದೊಡ್ಡ ಸಾಹಸಕ್ಕೆ ಕೈಹಾಕಿದರು.

48ನೇ ರ‍್ಯಾಂಕ್‌ನೊಂದಿಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು

ತಮ್ಮ ಕಠಿಣ ಪರಿಶ್ರಮದ ಫಲವಾಗಿ, 2007ರಲ್ಲಿ ಗೋವಿಂದ್ ಜೈಸ್ವಾಲ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದರು. ಅಷ್ಟೇ ಅಲ್ಲದೆ, ಅಖಿಲ ಭಾರತ ಮಟ್ಟದಲ್ಲಿ 48ನೇ ರ‍್ಯಾಂಕ್ (AIR 48) ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.

ಎಜಿಎಂಯುಟಿ (AGMUT) ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ ಅವರು, ಆಡಳಿತಾತ್ಮಕ ಪಯಣದಲ್ಲಿ ಹಲವು ಪ್ರಮುಖ ಹುದ್ದೆಗಳನ್ನ ನಿರ್ವಹಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.

ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಜವಾಬ್ದಾರಿ

ಇದೀಗ ಅಕ್ಟೋಬರ್ 15, 2026ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅವರ ಆಡಳಿತಾತ್ಮಕ ಅನುಭವವನ್ನ ಗುರುತಿಸಿ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಗೋವಿಂದ್ ಜೈಸ್ವಾಲ್ ಅವರನ್ನ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇದರ ಜೊತೆಗೆ, ವಾರ್ಷಿಕ ಅಮರನಾಥ್ ಯಾತ್ರೆಯ ಉಸ್ತುವಾರಿ ನೋಡಿಕೊಳ್ಳುವ ಶ್ರೀ ಅಮರನಾಥ್ ಶ್ರೈನ್ ಬೋರ್ಡ್ ಸಿಇಒ ಆಗಿಯೂ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನ ವಹಿಸಲಾಗಿದೆ. ಈ ಹೊಸ ಜವಾಬ್ದಾರಿಗಳು ಅವರನ್ನ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಆಡಳಿತಾತ್ಮಕ ಸಮನ್ವಯ ಮತ್ತು ಕಾರ್ಯಾಚರಣೆಯ ಕೇಂದ್ರಬಿಂದುವನ್ನಾಗಿಸಿವೆ.

ಬಾಲಿವುಡ್ ಸಿನಿಮಾಗೂ ಸ್ಪೂರ್ತಿಯಾದ ಅಬ್ ದಿಲ್ಲೀ ದೂರ್ ನಹೀ

ಗೋವಿಂದ್ ಜೈಸ್ವಾಲ್ ಅವರ ಈ ಪಯಣ ಕೇವಲ ಆಡಳಿತ ಕ್ಷೇತ್ರಕ್ಕೆ ಮಾತ್ರವಲ್ಲದೆ, ಸಿನಿಮಾ ರಂಗಕ್ಕೂ ಸ್ಪೂರ್ತಿಯಾಗಿದೆ. ಅವರ ಜೀವನದ ಕಷ್ಟಗಳು ಮತ್ತು ದೃಢಸಂಕಲ್ಪವನ್ನು ಆಧರಿಸಿ 2023ರಲ್ಲಿ ಕಮಲ್ ಚಂದ್ರ ನಿರ್ದೇಶನದ ಮತ್ತು ಇಮ್ರಾನ್ ಝಾಹಿದ್ ಅಭಿನಯದ ಹಿಂದಿ ಚಲನಚಿತ್ರ 'ಅಬ್ ದಿಲ್ಲೀ ದೂರ್ ನಹೀ' ಬಿಡುಗಡೆಯಾಗಿ ಜನಮನ್ನಣೆ ಗಳಿಸಿತ್ತು.

ಸೀಮಿತ ಸಂಪನ್ಮೂಲಗಳೊಂದಿಗೆ ಬೆಳೆದ ಬಾಲಕನೊಬ್ಬ ಇಂದು ದೇಶದ ಹಿರಿಯ ಆಡಳಿತಾತ್ಮಕ ಜವಾಬ್ದಾರಿಗಳನ್ನ ಹೊರುವ ಮಟ್ಟಕ್ಕೆ ಬೆಳೆದಿರುವುದು ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+