Rice mill building collapse: ಕರ್ನಾಲ್‌ನಲ್ಲಿ ರೈಸ್ ಮಿಲ್ ಕಟ್ಟಡ ಕುಸಿದು 4 ಸಾವು, 20 ಮಂದಿಗೆ ಗಾಯ
ಹರಿಯಾಣದ ಕರ್ನಾಲ್‌ನಲ್ಲಿ ಭೀಕರ ದುರಂತವೊಂದು ನಡೆದಿದೆ. ಇಲ್ಲಿ ಮೂರು ಅಂತಸ್ತಿನ ರೈಸ್ ಮಿಲ್ ಕಟ್ಟಡ ಕುಸಿದು ಬಿದ್ದು ನಾಲ್ಕು ಜನ ಸಾವನ್ನಪ್ಪಿದ್ದಾರೆ, 20 ಮಂದಿ ಗಾಯಗೊಂಡಿದ್ದಾರೆ. ಅನೇಕ ಕಾರ್ಮಿಕರು ಕಟ್ಟಡದ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಭೀತಿ ಇದೆ. ಮಾಹಿತಿ ಪ್ರಕಾರ, ಇಲ್ಲಿ ಸುತ್ತಲು ಕೆಲಸ ಮಾಡುವ ಕಾರ್ಮಿಕರು ಈ ಕಟ್ಟಡದೊಳಗೆ ಮಲಗಿದ್ದರು. ಈ ವೇಳೆ ಏಕಾಏಕಿ ಕಟ್ಟಡ ಕುಸಿದು ಬಿದ್ದಿದೆ.
ಘಟನೆ ಕುರಿತು ಮಾಹಿತಿ ಪಡೆದು ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡ ಇಲ್ಲಿಗೆ ಆಗಮಿಸಿದೆ. ತಕ್ಷಣ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ತಲುಪಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ಹೊರ ತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ವರದಿಗಳ ಪ್ರಕಾರ, ನೂರಾರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಹೂತುಹೋಗಬಹುದು. ಆದರೆ, ಈ ಅಪಘಾತದಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಇದುವರೆಗೆ ಬಹಿರಂಗವಾಗಿಲ್ಲ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅವಶೇಷಗಳಿಂದ ಎರಡು ದೇಹಗಳನ್ನು ಹೊರತೆಗೆಯಲಾಗಿದೆ. ಹಲವಾರು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ಮುಕ್ಕಾಮ್ ಹೂಡಿವೆ. ಅಧಿಕ ಸಂಖ್ಯೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗಳು ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ್ದಾರೆ.
ಈ ಅವಘಡದಲ್ಲಿ 24 ಮಂದಿ ಸಿಲುಕಿದ್ದು, ಈ ಪೈಕಿ 20 ಮಂದಿ ಗಾಯಗೊಂಡಿದ್ದಾರೆ ಮತ್ತು 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಕರ್ನಾಲ್ ಡಿಎಂ ಅನೀಶ್ ಯಾದವ್ ತಿಳಿಸಿದ್ದಾರೆ. ಘಟನೆ ನಡೆದಾಗ ಕಟ್ಟಡದೊಳಗೆ ಸುಮಾರು 150 ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
#WATCH | Haryana: Several rice mill workers feared being trapped under debris after a three-storeyed rice mill building collapsed in Karnal. Workers used to sleep inside the building. Fire brigade, police and ambulance have reached the spot. Rescue operations underway. pic.twitter.com/AFzN9HDPYw
— ANI (@ANI) April 18, 2023
ಕಟ್ಟಡದಲ್ಲಿ ಲೋಪವಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ರೈಸ್ ಮಿಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಳಿಸರು ತಿಳಿಸಿದ್ದಾರೆ.
ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಕರ್ನಾಲ್ ಎಸ್ಪಿ ಶಶಾಂಕ್ ಕುಮಾರ್ ತಿಳಿಸಿದ್ದಾರೆ. ನಾವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳೂ ಇಲ್ಲಿಗೆ ತಲುಪುತ್ತಿವೆ. ಈಗ ಕಾಣೆಯಾದವರ ಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಿದ್ದೇವೆ ಎಂದು ಶಶಾಂಕ್ ಕುಮಾರ್ ಹೇಳಿದರು.












Click it and Unblock the Notifications