Revanth Reddy New CM: ರೇವಂತ್ ರೆಡ್ಡಿಗೆ ಒಲಿದ ತೆಲಂಗಾಣ ಸಿಎಂ ಸ್ಥಾನ, ಡಿ.7ಕ್ಕೆ ಅಧಿಕಾರ ಸ್ವೀಕಾರ, ಮಾಹಿತಿ
ಹೈದರಾಬಾದ್, ಡಿಸೆಂಬರ್ 05: ತೆಲಂಗಾಣದಲ್ಲಿ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ 64 ಸ್ಥಾನ ಗಳಿಸುವ ಮೂಲಕ ಸರ್ಕಾರ ರಚಿಸಲಿರುವ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಯಾರೆಂದು ಅಂತಿಮವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಿ ಹೈಕಮಾಂಡ್ ಆಯ್ಕೆ ಮಾಡಿ ಘೋಷಿಸಿದೆ.
ಬಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್ ರಾವ್ ಅವರ ವಿರುದ್ಧ ಸ್ಫರ್ಧೆಗೆ ಇಳಿದು ಸದ್ದು ಮಾಡಿದ್ದ ರೇವಂತ್ ರೆಡ್ಡಿ ಅವರು ತೆಲಂಗಾಣದ ನೂತನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ. ಇದೇ ಡಿಸೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತೆಲಂಗಾಣದಲ್ಲಿ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಈ ಸಂಬಂಧ ದೆಹಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಮಂಗಳವಾರ ಮಹತ್ವ ಸಭೆ ನಡೆಯಿತು. ಸಭೆಯಲ್ಲಿ ವರಿಷ್ಠ ರೇವಂತ್ ರೆಡ್ಡಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿ ಸಂಜೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ತೆಲಂಗಾಣದ ಉದ್ದಕ್ಕೆ ಅಬ್ಬರದ ಪ್ರಚಾರ ಮಾಡಿದ್ದ ರೇವಂತ್ ರೆಡ್ಡಿ ಹಿಂದಿನಿಂದಲೇ ತಮ್ಮದೇ ಆದ ನಾಯಕತ್ವ ಗುಣದಿಂದ ಗುರುತಿಸಿಕೊಂಡವರು. ಕೇವಲ ತೆಲಂಗಾಣದ ಮಾತ್ರವಲ್ಲದೇ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರು.
ಪಕ್ಷ ಸಂಘಟನೆಗೆ ರೆಡ್ಡಿ ಶ್ರಮ ಅಪಾರ
ತೆಲಂಗಾಣದಲ್ಲಿ ಪಕ್ಷ ಸಂಘಟನೆಯಲ್ಲಿ ಅಪಾರವಾಗಿ ಶ್ರಮಿಸಿದ್ದ ರೇವಂತ್ ರೆಡ್ಡಿಯನ್ನು ಇಂದು ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.
ರೇವಂತ್ ರೆಡ್ಡಿಯವರು ಈ ಹಿಂದೆ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಡಿಕೆ ಶಿವಕುಮಾರ್ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದ ರೇವಂತ್ ರೆಡ್ಡಿಯನ್ನು ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಕರ್ ರಾವ್ ಅವರ ವಿರುದ್ಧ ಕಣಕ್ಕಿಳಿಸುವಲ್ಲಿ ಡಿಕೆಶಿ ಅವರು ಪಾತ್ರವು ಇತ್ತು ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ಕರ್ನಾಟಕದ ಮಾದರಿ ತೆಲಂಗಾಣದಲ್ಲಿ ಕಾಂಗ್ರೆಸ್ ಕೈ ಹಿಡಿದೆ.
ಇದೀಗ ಎಲ್ಲವೂ ಅಂದುಕೊಂಡಂತಾಗಿದ್ದು, ರೇವಂತ್ ರೆಡ್ಡಿ ಅವರು ಮುಂದಿನ ಐದು ವರ್ಷಗಳವರೆಗೆ ತೆಲಂಗಾಣದ ಮುಖ್ಯಮಂತ್ರಿ ಆಗಿರಲಿದ್ದಾರೆ.












Click it and Unblock the Notifications