ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ 1 ಸಾವಿರ ರು. ನೋಟು
ನವದೆಹಲಿ, ಆಗಸ್ಟ್ 28 : ಹೊಸ 2 ಸಾವಿರ, 500 ಹಾಗೂ 200 ರು. ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇದೀಗ ಹೊಸ ಸಾವಿರ ರು. ನೋಟು ಚಲಾವಣೆಗೆ ತರಲು ಮುಂದಾಗಿದೆ.
ಐನೂರು ಮತ್ತು ಸಾವಿರ ರು. ಮುಖ ಬೆಲೆಯ ನೋಟುಗಳು ರದ್ದಾದ ಬಳಿಕ ಆರ್ ಬಿಐ 2 ಸಾವಿರ ರು. ನೋಟು ಜಾರಿಗೆ ತಂದಿತ್ತು. ಆದರೆ, ಸಾರ್ವಜನಿಕರಿಗೆ ಎರಡು ಸಾವಿರ ರು.ಗೆ ಚಿಲ್ಲರೆ ಸಮಸ್ಯೆ ಎದುರಾಗಿದ್ದರಿಂದ ಆರ್ ಬಿಐ 1 ಸಾವಿರ ರು. ನೋಟು ಮುದ್ರಿಸಲಿದೆ ಎಂದು ವರದಿಯಾಗಿದೆ.

ಈ ಹೊಸ ನೋಟುಗಳು ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈಗಾಗಲೇ 2000 ರೂ. ನೋಟ್ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ರು.ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
2 ಸಾವಿರ ರು. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರಕ್ಕೆ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರು. ನೋಟು ಬಿಡುಗಡೆ ಮಾಡಿದೆ.












Click it and Unblock the Notifications