ಶಿವಭಕ್ತನೆಂದು ಹೊರದಬ್ಬಿಸಿಕೊಂಡ ರಷ್ಯಾ ಪ್ರಜೆಗೆ ಭಾರತವೆಂದರೆ ಪ್ರಾಣ!
ಪುರಿ, ಜನವರಿ 04: ಒಡಿಶಾದ ಪುರಿಯ ಜಗನ್ನಾಥ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ 53 ವರ್ಷದ ರಷ್ಯಾ ಪ್ರಜೆಯನ್ನು ಪುರಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ದೆಹಲಿಯ ರಷ್ಯನ್ ರಾಯಭಾರ ಕಚೇರಿಗೆ ಕಳಿಸಿದೆ.
ರಶ್ಯಾದ ಅಂದೇರಿ ಗ್ಲಾಗೊಲೆವ್ ಎಂಬ ವ್ಯಕ್ತಿ ಕಳೆದ ಕೆಲ ತಿಂಗಳಿನಿಂದ ಪುರಿಯ ಜಗನ್ನಾಥ ಮಂದಿರದಲ್ಲಿ ಭಿಕ್ಷೆ ಬೇಡುತ್ತಿದ್ದರು. ವಿಷಯ ತಿಳಿದ ಪುರಿ ಜಿಲ್ಲಾಡಳಿತ ಡಿಸೆಂಬರ್ 11 ರಂದು ಅವರನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿತ್ತು.

ಗ್ಲಾಗೊಲೆವ್ ಅವರ ಹಿನ್ನೆಲೆ ವಿಚಾರಿಸಿದಾಗ, ಅವರು ರಷ್ಯಾ ಮೂಲದವರೆಂದೂ, ಅವರಿಗೆ ಭಾರತವೆಂದರ ಇಷ್ಟವೆಂದೂ, ತಾನು ಶಿವನ್ನು ಆರಾಧಿಸಿದ್ದೆನೆಂದೂ ಹೇಳಿಕೊಂಡಿದ್ದಾರೆ. ಅವರ ಶಿವಭಕ್ತಿಯನ್ನು ಮುಚ್ಚದ ಮನೆಯವರು ಅವರನ್ನು ಮನೆಯಿಂದ ಹೊರಹಾಕಿದ್ದಾರೆಂದೂ ತಿಳಿಸಿದ್ದರು. 2015 ರಲ್ಲೇ ರಷ್ಯಾ ಬಿಟ್ಟು ಬಂದ ಗ್ಲಾಗೊಲೆವ್, ತಾನು ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗುವುದಿಲ್ಲ. ನನ್ನನ್ನು ನಿರಾಶ್ರಿತನೆಂದು ಪರಿಗಣಿಸಿ ಇಲ್ಲಿಯೇ ಇರುವುದಕ್ಕೆ ಜಾಗ ನೀಡಿ ಎಂದು ಕೇಳುತ್ತಿದ್ದಾರೆ.
ಈ ಕುರಿತು ಪುರಿ ಜಿಲ್ಲಾಡಳಿತ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಅವರನ್ನು ದೆಹಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿಗೆ ಕಳಿಸಲಾಗಿದೆ.












Click it and Unblock the Notifications