ಅರುಣಾಚಲ ಪ್ರಾಂತ್ಯಗಳ ಹೆಸರು ಬದಲು: ಚೀನಾಕ್ಕೆ ಭಾರತದ ದಿಟ್ಟ ಉತ್ತರ
ಅರುಣಾಚಲ ಪ್ರದೇಶದ ಕೆಲ ಪ್ರಾಂತ್ಯಗಳ ಹೆಸರನ್ನು ಬದಲಿಸಿರುವುದಾಗಿ ಬುಧವಾರ (ಏ. 19) ಘೋಷಿಸಿದ್ದ ಚೀನಾ, ಇದು ಕಾನೂನು ರೀತಿಯ ಕ್ರಮವೆಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.
ನವದೆಹಲಿ, ಏಪ್ರಿಲ್ 20: ಚೀನಾ ದೇಶವು ಅರುಣಾಚಲ ಪ್ರದೇಶದ ಆರು ಪ್ರದೇಶಗಳ ಹೆಸರುಗಳನ್ನು ಬದಲಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಹೀಗೆ ಹೆಸರು ಬದಲಿಸುವುದರಿಂದ ಅರುಣಾಚಲವನ್ನು ಭಾರತದಿಂದ ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ, ''ಅರುಣಾಚಲ ಪ್ರದೇಶದ ಕೆಲ ಪ್ರಾಂತ್ಯಗಳ ಹೆಸರುಗಳನ್ನು ಬದಲಿಸುವುದರಿಂದ ಅರುಣಾಚಲ ಪ್ರದೇಶವನ್ನು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ'' ಎಂದು ತಿಳಿಸಿದರು.

ಅರುಣಾಚಲ ಪ್ರದೇಶದ ಕೆಲ ಪ್ರಾಂತ್ಯಗಳ ಹೆಸರನ್ನು ಬದಲಿಸಿರುವುದಾಗಿ ಬುಧವಾರ (ಏ. 19) ಘೋಷಿಸಿದ್ದ ಚೀನಾ, ಇದು ಕಾನೂನು ರೀತಿಯ ಕ್ರಮವೆಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

Click it and Unblock the Notifications