Piyush Pandey: ಪಿಯೂಷ್ ನಿಧನ, ಭಾರತೀಯ ಜಾಹೀರಾತು ಕ್ಷೇತ್ರಕ್ಕೆ ತುಂಬಲಾರದ ನಷ್ಟ
ಭಾರತೀಯ ಜಾಹೀರಾತು ಕ್ಷೇತ್ರ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರನ್ನು ಕಳೆದುಕೊಂಡು, ಅದೇ ನೋವಿನಲ್ಲಿ ದಿನಕಳೆಯುತ್ತಿದೆ. ಭಾರತೀಯ ಜಾಹೀರಾತು ಕ್ಷೇತ್ರಕ್ಕೆ ಹೊಸ ರೂಪ ನೀಡಿದ್ದವರು ಪಿಯೂಷ್ ಪಾಂಡೆ, ಭಾರತೀಯ ಸಂವಹನದ ಭಾಷೆ, ಹೃದಯ ಮತ್ತು ಹಾಸ್ಯದ ಸ್ವರೂಪವನ್ನೇ ಬದಲಿಸಿದ ವ್ಯಕ್ತಿ ಆಗಿದ್ದರು. ಆದರೆ 2025 ಅಕ್ಟೋಬರ್ 24 ಅಂದರೆ ಕಳೆದ ಶುಕ್ರವಾರ ಪಿಯೂಷ್ ಪಾಂಡೆ ಅವರು ನಿಧನರಾದರು. ಪೀಳಿಗೆಯಿಂದ ಪೀಳಿಗೆಗೆ ಸೃಜನಾತ್ಮಕ ಚಿಂತನೆಗೆ ಪ್ರೇರಣೆ ಆಗಿದ್ದ ಪರಂಪರೆಯನ್ನು ಅವರು ತಮ್ಮೊಡನೆ ಕೊಂಡೊಯ್ದರು.
ಪಿಯೂಷ್ ಪಾಂಡೆ ಅವರು ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಜೊತೆಗೆ ಒಗಿಲ್ವಿ ಇಂಡಿಯಾ ಸಂಸ್ಥೆ ಹೆಸರನ್ನ ಕೂಡ ಉತ್ತುಂಗಕ್ಕೆ ಏರಿಸಿ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದರು. ಒಗಿಲ್ವಿ ಇಂಡಿಯಾದ ಮಾಜಿ ಚೀಫ್ ಕ್ರಿಯೇಟಿವ್ ಆಫೀಸರ್ (ವಿಶ್ವಮಟ್ಟದ) ಹಾಗೂ ಎಕ್ಸಿಕ್ಯುಟಿವ್ ಚೇರ್ಮನ್ ಆಗಿ, ಪಿಯೂಷ್ ಪಾಂಡೆ ಅವರು ಈ ಏಜೆನ್ಸಿಯನ್ನು ಭಾರತದ ಅಗ್ರಗಣ್ಯ ಕ್ರಿಯೇಟಿವ್ ಶಕ್ತಿಕೇಂದ್ರವಾಗಿ ರೂಪಿಸಿದ್ದರು. ಕಳೆದ 4 ದಶಕಗಳಿಗಿಂತ ಹೆಚ್ಚು ಕಾಲದ ತಮ್ಮ ವೃತ್ತಿ ಜೀವನದಲ್ಲಿ, ಸಾವಿರಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದರು. ಈ ಪಟ್ಟಿಯಲ್ಲಿ ಕ್ಯಾನ್ಸ್ ಲಯನ್ಸ್ & ಅಬ್ಬೀಸ್ ಒಳಗೊಂಡಿವೆ ಎಂಬುದು ಹೆಮ್ಮೆಯ ವಿಚಾರ. ಕ್ರಿಯೇಟಿವಿಟಿ ಕ್ಷೇತ್ರದ ಕ್ಯಾನ್ಸ್ ಲಯನ್ಸ್ ಉತ್ಸವದಲ್ಲಿ ಏಷ್ಯಾದಿಂದ ಮೊದಲ ಜ್ಯೂರಿ ಅಧ್ಯಕ್ಷರಾಗಿ ಆಯ್ಕೆ ಆಗುವುದರ ಮೂಲಕ ಅವರು ಇತಿಹಾಸ ನಿರ್ಮಿಸಿದರು. ಇದು ಅವರ ಜಾಗತಿಕ ಪ್ರಭಾವದ ಸಾಕ್ಷಿಯಾಗಿದೆ.

ಪ್ರಶಸ್ತಿಗಿಂತ ಹೆಚ್ಚಾಗಿ, ಪಾಂಡೆ ಅವರ ಅತ್ಯಂತ ದೊಡ್ಡ ಕೊಡುಗೆ ಎಂದರೆ ಅವರು ಭಾರತವನ್ನು ಅದರದೇ ಶಬ್ದದೊಂದಿಗೆ ಪ್ರೇಮಿಸಲು ಕೋಟ್ಯಂತರ ಜನರಿಗೆ ಕಲಿಸಿದ್ದರು. ಈ ವಿಚಾರವು ಅತ್ಯಂತ ಸ್ಮರಣೀಯ ಎನ್ನಬಹುದು.
ಅದರಲ್ಲೂ ಹಿಂದಿ ಭಾಷೆಯನ್ನು, ಜಾಹೀರಾತು ಚಲನಚಿತ್ರಗಳಲ್ಲಿ & ಟ್ಯಾಗ್‌ಲೈನ್‌ಗಳ ಮೂಲಕ ಪೇಮಸ್ ಮಾಡಿದ್ದರು. ಅವರು ಪಾಶ್ಚಾತ್ಯ ಪ್ರಭಾವಗಳಿಂದ ದೂರ ಸರಿದು, ಸೃಜನಾತ್ಮಕತೆಯನ್ನು ಭಾರತೀಯ ದೈನಂದಿನ ಜೀವನದ ಸರಳತೆಯೊಂದಿಗೆ ಜೋಡಿಸಿದರು. ಫೆವಿಕೋಲ್ ಜಾಹೀರಾತು ಆಗಿದ್ದ, ಅಂಟುತ್ತಾ? ಹಾಸ್ಯದಿಂದ ಹಿಡಿದು ಕ್ಯಾಡ್ಬರಿ ಡೈರಿ ಮಿಲ್ಕ್ ಹೃದಯಸ್ಪರ್ಶಿ "ಕುಚ್ ಖಾಸ್ ಹೇ ಜಿಂದಗಿ ಮೇನ್" ತನಕವು ಪಾಂಡೆ ಅವರ ಕೆಲಸ ಭಾರತದ ಸಮೂಹ ಸ್ಮೃತಿಯ ಭಾಗವಾಯಿತು ಎನ್ನಬಹುದು.
'ಅವರು ಸಾಂಸ್ಕೃತಿಕ ಮೈಲುಗಲ್ಲು ನಿರ್ಮಿಸಿದರು'
ಅಂದಹಾಗೆ ವಿಜ್ಕ್ರಾಫ್ಟ್ ಇಂಟರ್‌ನ್ಯಾಷನಲ್ ಎಂಟರ್ಟೈನ್‌ಮೆಂಟ್ ಸಂಸ್ಥೆಯ ಸಹ-ಸ್ಥಾಪಕರಾದ ಆಂಡ್ರೆ ಟಿಮ್ಮಿನ್ಸ್ ಅವರು ಪಿಯೂಷ್ ಪಾಂಡೆ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಇಂದು, ನಾವು ಪಿಯೂಷ್ ಪಾಂಡೆ ಅವರ ಜೀವನ & ಪರಂಪರೆಯನ್ನು ಗೌರವಿಸುತ್ತೇವೆ. ಅವರ ಸೃಜನಾತ್ಮಕ ಶಕ್ತಿ ಪೀಳಿಗೆಯಿಂದ ಪೀಳಿಗೆ ಪ್ರತಿಧ್ವನಿಸುತ್ತಲೇ ಇರುತ್ತದೆ.
ಅವರು ಜಾಹೀರಾತುಗಳನ್ನ ಮಾತ್ರ ಮಾಡಲಿಲ್ಲ, ಸಾಂಸ್ಕೃತಿಕ ಮೈಲುಗಲ್ಲು ಕೂಡ ನಿರ್ಮಿಸಿದರು. ಅವರ ಸೃಜನಾತ್ಮಕ ಭಾಷೆ ಪ್ರತಿ ಭಾರತೀಯರ ಜೀವನದಲ್ಲಿ ನೆಲೆಗೊಂಡಿತ್ತು. ಸರಳ, ಪ್ರಾಮಾಣಿಕ, ಹಾಸ್ಯಾಸ್ಪದ, ಆಳವಾದ ಮಾನವೀಯತೆಯುತ...
ಅವರು ಕೇವಲ ಶ್ರೇಷ್ಠ ಅಭಿಯಾನಗಳನ್ನು ಮಾತ್ರವಲ್ಲ, ಜನಪ್ರಿಯ ಸಂಸ್ಕೃತಿ ರೂಪವನ್ನ ನೀಡಿದ ಕೆಲಸಗಳನ್ನೂ ಮತ್ತು ಆ ಉದಾಹರಣೆಯಿಂದ ದಾರಿತೋರಿಸಲ್ಪಟ್ಟ ಸೃಜನಶೀಲರ ಪೀಳಿಗೆಯನ್ನೂ ಹಿಂದಿಟ್ಟು ಹೋಗಿದ್ದಾರೆ.'
- ಆಂಡ್ರೆ ಟಿಮ್ಮಿನ್ಸ್, ಸಹ-ಸ್ಥಾಪಕ, ವಿಜ್ಕ್ರಾಫ್ಟ್ ಇಂಟರ್‌ನ್ಯಾಷನಲ್ ಎಂಟರ್ಟೈನ್‌ಮೆಂಟ್
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications