ವಾಲ್ಮೀಕಿ ವಿರುದ್ಧ ಅವಹೇಳನ: ರಾಖಿ ಸಾವಂತ್ ಗೆ ನಿರೀಕ್ಷಣಾ ಜಾಮೀನು

Posted By:
Subscribe to Oneindia Kannada

ಲೂಧಿಯಾನ : ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

'ಪಾಕ್ ವಿರುದ್ಧ ಭಾರತ ಸೋಲಿಗೆ ಕೊಹ್ಲಿ ಚಟವೇ ಕಾರಣ'

ಪ್ರಕರಣದ ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಗುರುರ್ ವೀರ್‌ ಸಿಂಗ್‌ ಅವರು ಇದೇ 7ರಂದು ಕೋರ್ಟ್‌ಗೆ ಹಾಜರಾಗುವಂತೆ ರಾಖಿ ಸಾವಂತ್ ಅವರಿಗೆ ಸೂಚಿಸಿದ್ದಾರೆ.

Remarks against Valmiki: Rakhi Sawant granted anticipatory bail

ಜುಲೈ 7 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಿದ್ದರೂ ರಾಖಿ ಸಾವಂತ್ ಹಾಜರಾಗಿರಲಿಲ್ಲ. ಹಾಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರ ನಿರೀಕ್ಷಣಾ ಜಾಮೀನನ್ನು ರದ್ದು ಪಡಿಸಿತ್ತು.

Rakhi Sawant Statement On Sage Valmiki | Oneindia Kannada

ಜುಲೈ 6ರಂದು ನಿರೀಕ್ಷಣಾ ಜಾಮೀನು ನೀಡಿದ ಮ್ಯಾಜಿಸ್ಟೇಟ್ ನ್ಯಾಯಾಧೀಶ ವಿಶಾವ್ ಗುಪ್ತಾ ಅವರು ಜುಲೈ 7 ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದರು. ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಕೀಲ ನರೀಂದರ್ ದೂರು ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A local court in Ludhiana granted anticipatory bail to actress Rakhi Sawant but ordered her to surrender before it on August 7 in a case related to objectionable remarks by her against Valmiki, the author of the epic Ramayana.
Please Wait while comments are loading...