ಮೋದಿಯನ್ನು 'ಮಿಸ್ಟರ್ ರಿಲಯನ್ಸ್' ಎಂದ ದೆಹಲಿ ಸಿಎಂ ಕೇಜ್ರಿವಾಲ್

Written By:
Subscribe to Oneindia Kannada

ನವದೆಹಲಿ, ಸೆ 3: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಪಕ್ಷದ ಪ್ರಣಾಳಿಕೆಯ ಒಂದು ಭಾಗ ಎನ್ನುವಂತೆ ನಡೆದುಕೊಂಡು ಬರುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್, ಮೋದಿಗೆ ಹೊಸ ಬಿರುದನ್ನು ನೀಡಿದ್ದಾರೆ.

ಭರ್ಜರಿ ಪ್ರಚಾರ ಪಡೆದುಕೊಂಡ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆ ಘೋಷಣೆಯ ಮರುದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು 'ಮಿಸ್ಟರ್ ರಿಲಯನ್ಸ್'ಎಂದು ಲೇವಡಿ ಮಾಡಿದ್ದಾರೆ.

ಮೋದಿ ಭಾವಚಿತ್ರವಿರುವ ರಿಲಯನ್ಸ್ ಜಿಯೋ ಜಾಹೀರಾತಿನ ಬಗ್ಗೆ ಕಿಡಿಕಾರಿರುವ ಕೇಜ್ರಿವಾಲ್, ನರೇಂದ್ರ ಮೋದಿ ರಿಲಯನ್ಸ್ ಜಾಹೀರಾತಿಗಾಗಿ ಮಾಡೆಲಿಂಗ್ ಆಗಿ ಕೆಲಸ ಮಾಡಲಿ ಎಂದು ತಮಾಷೆಯಾಡಿದ್ದಾರೆ.

ಈ ಸಂಬಂಧ ಸಾಲು ಸಾಲು ಟ್ವೀಟ್ ಮಾಡಿರುವ ಕೇಜ್ರಿವಾಲ್, ಇದೇ ರೀತಿ ನೀವು ಬಂಡವಾಳಶಾಹಿಯವರ ಪರವಾಗಿದ್ದರೆ 2019ರ ಚುನಾವಣೆಯಲ್ಲಿ ಜನ ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.

ದೇಶದ ಪ್ರಮುಖ ದೈನಿಕಗಳಲ್ಲಿ (ಸೆ 2) ರಿಲಯನ್ಸ್ ಸಂಸ್ಥೆ ಪ್ರಧಾನಿ ಮೋದಿ ಭಾವಚಿತ್ರ ಬಳಸಿಕೊಂಡು 'Dedicated to India, and 1.2 billion Indians' ಎಂದು 'ಜಿಯೋ' ಪ್ರೊಡಕ್ಟಿನ ಜಾಹೀರಾತು ನೀಡಿತ್ತು.

ರಿಯಲನ್ಸ್ ಸಂಸ್ಥೆಯ ಈ ಜಾಹೀರಾತು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೊಳಗಾಗುತ್ತಿರುವ ಮಧ್ಯೆ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಧಾನಿ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಕೇಜ್ರಿವಾಲ್ ಮತ್ತು ಇತರರ ಟ್ವೀಟಿನ ಕೆಲವೊಂದು ಸ್ಯಾಂಪಲ್ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಪ್ರಮುಖ ದೈನಿಕಗಳಲ್ಲಿ ಜಾಹೀರಾತು

ಪ್ರಮುಖ ದೈನಿಕಗಳಲ್ಲಿ ಜಾಹೀರಾತು

ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ಥಾನ್ ಟೈಮ್ಸ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ರಿಲಯನ್ಸ್ ಸಂಸ್ಥೆ 'ಜಿಯೋ' ಜಾಹೀರಾತು ನೀಡಿತ್ತು. ಖಾಸಗಿ ಸಂಸ್ಥೆಯ ಜಾಹೀರಾತಿಗೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಬಳಸುವುದು ಎಷ್ಟು ಸರಿ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಮಿಸ್ಟರ್ ರಿಲಯನ್ಸ್

ಪ್ರಧಾನಮಂತ್ರಿಯವರನ್ನು ಮಿಸ್ಟರ್ ರಿಲಯನ್ಸ್ ಎಂದು ಸಂಭೋದಿಸಿ ವ್ಯಂಗ್ಯವಾಡಿರುವ ಟ್ವೀಟ್

ಮೋದಿ ಚೌಕೀದಾರ್

ಸಂಸ್ಥೆ ಒಳ್ಳೆ ಚೌಕೀದಾರ್ ನನ್ನು ನೇಮಿಸಿದೆ. ಜಿಯೋ ಸಂಸ್ಥೆಯ ಡೇಟಾ ಭ್ರಷ್ಟಾಚಾರವನ್ನು ಇವರು ರಕ್ಷಿಸಲಿದ್ದಾರೆನ್ನುವ ಟ್ವೀಟ್ ಅನ್ನು ಕೇಜ್ರಿವಾಲ್ ರಿಟ್ವೀಟ್ ಮಾಡಿದ್ದಾರೆ.

ರಿಲಯನ್ಸ್ ಮಾಡೆಲಿಂಗ್

ರಿಲಯನ್ಸ್ ಸಂಸ್ಥೆಗೆ ನೀವು ಮಾಡೆಲಿಂಗ್ ಮಾಡುತ್ತಿರಿ ಎನ್ನುವ ಕೇಜ್ರಿವಾಲ್ ಟ್ವೀಟ್

ಮೋದಿ ಸೇಲ್ಸ್ ಮ್ಯಾನಾ?

ಮೋದಿ ರಿಲಯನ್ಸ್ ಸಂಸ್ಥೆಯ ಪಿಎಂ ಅಥವಾ ಸೇಲ್ಸ್ ಮ್ಯಾನಾ?

ಇನ್ನೇನು ಸಾಕ್ಷಿ ಬೇಕು

ಮೋದಿಜೀ, ಅಂಬಾನಿಯವರ ಜೇಬಿನಲ್ಲಿದ್ದಾರೆ ಎನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಕು?

ಪ್ರಧಾನಿ ಮೋದಿ

ಮೋದಿ ಓಪನ್ ಆಗಿ ರಿಲಯನ್ಸ್ ಪ್ರೊಡಕ್ಟನ್ನು ಒಪ್ಪಿಕೊಂಡಂತಾಯಿತು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi CM Arvind Kejriwal on Friday (Sep 2) dubbed PM Narendra Modi as “Mr. Reliance” after his photo appeared in the company’s advertisements and accused him of “openly endorsing” Reliance Jio services.
Please Wait while comments are loading...