Pahalgam Incident: ಉಗ್ರರ ಬೆಂಬಲಿಸಿದ 14 ಸ್ಥಳೀಯ ಕಾಶ್ಮೀರಿಗಳ ಹೆಸರು ಬಹಿರಂಗ
ಬೆಂಗಳೂರು, ಏಪ್ರಿಲ್ 27: ಕಾಶ್ಮೀರ ಪಹಲ್ಗಾಮ್ ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಉಗ್ರರಿಗೆ ಸ್ಥಳೀಯರ ಬೆಂಬಲ ಇದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಅದರ ಭಾಗವಾಗಿ ಭಾರತೀಯ ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆ ಮತ್ತು ಕಾರ್ಯಾಚರಣೆಯಲ್ಲಿ 14 ಸ್ಥಳೀಯ ಕಾಶ್ಮೀರಿಗಳನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಾತ್ರವೇ 30 ವಯಸ್ಸು ದಾಟಿದವರಾಗಿದ್ದು, ಉಳಿದವರೆಲ್ಲರು ಹರೆಯದ ಯುವಕರಾಗಿದ್ದಾರೆ. ಅವರ ಹೆಸರನ್ನು ಪ್ರಕಟಿಸಿದ ಗುಪ್ತಚರ ಸಂಸ್ಥೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದೆ.
ಕಾಶ್ಮೀರದಲ್ಲಿ ಕಾರ್ಯಾಚರಣೆಗೆ ಇಳಿದಿರುವ ಗುಪ್ತಚರ ಸಂಸ್ಥೆ, ಭಾರತೀಯ ಸೇನೆ ಸ್ಥಳೀಯವಾಗಿ ಉಗ್ರರ ದಾಳಿಗೆ ಕಾರಣವಾದವರನ್ನು, ಉಗ್ರರನ್ನು ಬೆಂಬಲಿಸಿದವರನ್ನು ಬಗ್ಗು ಬಡಿಯುತ್ತಿದೆ. ಅದರ ಭಾಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ (JeM) ಹಾಗೂ ಹಿಜ್ಬುಲ್-ಮುಜಾಹಿದ್ದೀನ್ (HM) ಭಯೋತ್ಪಾದಕ ಗುಂಪುಗಳು ಸೇರಿದಂತೆ ವಿವಿಧ ಭಯೋತ್ಪಾದಕ ಗುಂಪುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುವ 14 ಸ್ಥಳೀಯ ಯುವ ಕಾಶ್ಮೀರಿಗಳು ಉಗ್ರರ ಹೆಸರು ಬಿಡುಗಡೆ ಮಾಡಿದೆ.

ಪಹಲ್ಗಾಮ್ ದಾಳಿಯ ಉಗ್ರರಿಗೆ ಬೆಂಬಲಿಸಿದ ಕಾಶ್ಮೀರಿಗಳು
ಮೊಹಮ್ಮದ್ ಅಹ್ಸನ್ ಅಹ್ಮದ್ ಶೇಖ್ (23)
ಮೊಹಮ್ಮದ್ ಹಾರಿಸ್ ನಜೀರ್ (20)
ಮೊಹಮ್ಮದ್ ಆದಿಲ್ ರೆಹಮಾನ್ ಡೆಂಟು (21)
ಮೊಹಮ್ಮದ್ ಆಸಿಫ್ ಅಹ್ಮದ್ ಶೇಖ್ (28)
ಮೊಹಮ್ಮದ್ ಅಮೀರ್ ನಜೀರ್ ವಾನಿ (20)
ಮೊಹಮ್ಮದ್ ನಸೀರ್ ಅಹ್ಮದ್ ವಾನಿ (21)
ಮೊಹಮ್ಮದ್ ಶಾಹಿದ್ ಅಹ್ಮದ್ ಕುಟೆ (27)
ಮೊಹಮ್ಮದ್ ಯವರ್ ಅಹಮದ್ ಭಟ್
ಮೊಹಮ್ಮದ್ ಆಸಿಫ್ ಅಹ್ಮದ್ ಖಾಂಡೆ (24)
ಮೊಹಮ್ಮದ್ ಅಮೀರ್ ಅಹ್ಮದ್ ದಾರ್
ಮೊಹಮ್ಮದ್ ಅದ್ನಾನ್ ಸಫಿ ದಾರ್
ಮೊಹಮ್ಮದ್ ಜಾಕಿರ್ ಅಹ್ಮದ್ ಘನಿ (29)
ಮೊಹಮ್ಮದ್ ಜುಬೇರ್ ಅಹ್ಮದ್ ವಾನಿ (39)
ಮೊಹಮ್ಮದ್ ಹರೂನ್ ರಶೀದ್ ಗನೈ (32)
ಇವರೆಲ್ಲರು ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದಾರೆ ಎಂಬುದು ಸಾಬೀತಾಗುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾಕ್ ವಿರುದ್ಧ ಅನೇಕ ಕ್ರಮ ಕೈಗೊಂಡಿರುವ ಭಾರತ ಸರ್ಕಾರ ಕಾಶ್ಮೀರದಲ್ಲಿ ಸ್ಥಳೀಯ ಮಟ್ಟದಲ್ಲೂ ಹೆಚ್ಚಿನ ಜಾಗೃತಿ ವಹಿಸಿದೆ. ಉಗ್ರರ ವಿರುದ್ಧ ಶಪಥ ಮಾಡಿರುವ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ನಿಮ್ಮ ನಿಮ್ಮ ರಾಜ್ಯಗಳಲ್ಲಿ ಪಾಕಿಸ್ತಾನಿಗಳನ್ನು ಮರಳಿ ಅವರ ದೇಶಕ್ಕೆ ಕಳುಹಿಸುವಂತೆ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪಾಕಿಗಳ ಪತ್ತೆಗೆ ಕಾರ್ಯ ಶುರು
ಕೇಂದ್ರದ ಸೂಚನೆ ಪಾಲಿಸುವುದಾಗಿ ತಿಳಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಪೈಕಿ ಬೆಂಗಳೂರಿನಲ್ಲಿ ಹೆಚ್ಚಿನ ಪಾಕಿಸ್ತಾನ್ ಜನರಿರಬಹುದು. ಆದರೆ ಅವರ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇನ್ನೂ ಮಹಾರಾಷ್ಟ್ರ ರಾಜ್ಯದಲ್ಲಿ 5000ಕ್ಕೂ ಹೆಚ್ಚು ಮಂದಿಯ ವಿಳಾಸ, ಗುರುತು ಪತ್ತೆ ಮಾಡಲಾಗಿದೆ. ಇದರಲ್ಲಿ 107 ಮಂದಿ ಕಾಣೆಯಾಗಿದ್ದರೆ, 34 ಮಂದಿ ತಮ್ಮ ವೀಸಾ ಅವಧಿ ಮುಗಿದಿದ್ದರೂ ಕಾನೂನು ಬಾಹೀರವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಭಾರತಾದ್ಯಂತ ಎಲ್ಲೆಲ್ಲಿ ಅದೆಷ್ಟು ಮಂದಿ ಅವಿತು ಕೂತಿದ್ದಾರೆ? ಹಿಂದೂಗಳ ವಿರುದ್ಧ ಏನೇನು ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ.












Click it and Unblock the Notifications