Amarnath yatra 2023: 62 ದಿನಗಳ ಅಮರನಾಥ ಯಾತ್ರೆಗೆ ನೋಂದಣಿ ಆರಂಭ
ಶ್ರೀನಗರ, ಏಪ್ರಿಲ್. 17: 62 ದಿನಗಳ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ಸೋಮವಾರದಿಂದ ದೇಶಾದ್ಯಂತ ಆರಂಭವಾಗಿದೆ. ಈ ವರ್ಷ ಜುಲೈ 1 ರಂದು ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 31 ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ. ನೋಂದಣಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿ ಇತರ ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆಯುತ್ತದೆ.
ನೊಂದಣಿ ಪ್ರಕ್ರಿಯೆಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನ 316 ಶಾಕೆಗಳು ಮತ್ತು ದೇಶಾದ್ಯಂತ ಇತರ 542 ಬ್ಯಾಂಕ್‌ಗಳಲ್ಲಿ 62 ದಿನಗಳ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಆಧಾರ್ ಆಧಾರಿತ ನೋಂದಣಿಯನ್ನು ಮಾಡಲಾಗುತ್ತಿದ್ದು, ಇದರಲ್ಲಿ ನೋಂದಣಿಗಾಗಿ ಯಾತ್ರೆಗೆ ತೆರಳುವ ಯಾತ್ರಿಕರ ಹೆಬ್ಬೆರಳಿನ ಸ್ಕ್ಯಾನ್ ಅಗತ್ಯವಿದೆ.

ಪಿಎನ್‌ಬಿ ಶಾಖೆಯ ವ್ಯವಸ್ಥಾಪಕ ಅಶ್ವನಿ ಕುಮಾರ್ ಮಾತನಾಡಿ, "ಯಾತ್ರೆಯ ನೋಂದಣಿ ಸೋಮವಾರ ಪ್ರಾರಂಭವಾಗಿದೆ, ಇದಕ್ಕಾಗಿ ಪಿಎನ್‌ಬಿ ದೇಶಾದ್ಯಂತ 316 ಶಾಖೆಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಿದೆ. ಉದ್ದೇಶಿತ ಯಾತ್ರಿಕರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಅಧಿಕೃತ ಆಸ್ಪತ್ರೆಗಳಿಂದ ಆರೋಗ್ಯ ಪ್ರಮಾಣಪತ್ರವನ್ನು ತರಬೇಕು" ಎಂದಿದ್ದಾರೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್‌ನಲ್ಲಿ ನೋಂದಣಿ ಪ್ರಾರಂಭವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ವಿಧಗಳಲ್ಲಿಯೂ ನೋಂದಣಿ ಮಾಡಲಾಗುತ್ತದೆ. ಪಿಎನ್‌ಬಿಯ 316 ಶಾಖೆಗಳು, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ 90 ಶಾಖೆಗಳು, ಯೆಸ್ ಬ್ಯಾಂಕ್‌ನ 37 ಶಾಖೆಗಳು ಮತ್ತು ಎಸ್‌ಬಿಐ ಬ್ಯಾಂಕ್‌ನ 99 ಶಾಖೆಗಳು ಸೇರಿದಂತೆ ದೇಶಾದ್ಯಂತ 542 ಬ್ಯಾಂಕ್ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಬಹುದು.
ಮಾರ್ಗಸೂಚಿಗಳ ಪ್ರಕಾರ, 13 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಗಳು ಅಮರನಾಥ ಯಾತ್ರೆ 2023 ಕ್ಕೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಮಾರ್ಚ್ 14 ರಂದು, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪವಿತ್ರ ಅಮರನಾಥ ಯಾತ್ರೆಯ ದಿನಾಂಕಗಳನ್ನು ಪ್ರಕಟಿಸುತ್ತಾ, ಸುಗಮ ಮತ್ತು ತೊಂದರೆ-ಮುಕ್ತ ತೀರ್ಥಯಾತ್ರೆಗಾಗಿ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು.

ಬ್ಯಾಂಕ್ ಶಾಖೆಗಳ ಮೂಲಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿಗೆ 120 ರೂಪಾಯಿ ವೆಚ್ಚವಾಗಲಿದೆ. ಆನ್‌ಲೈನ್ ನೋಂದಣಿಗಾಗಿ, ಪ್ರತಿ ಯಾತ್ರಿಕರಿಗೆ ಶುಲ್ಕ 220 ರೂಪಾಯಿ ಪಾವತಿಸಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ ಎನ್‌ಆರ್‌ಐ ಯಾತ್ರಿಗಳಿಗೆ ನೋಂದಣಿ ಶುಲ್ಕವು ಪ್ರತಿ ಯಾತ್ರಿಕರಿಗೆ 1,520 ರೂಪಾಯಿ ಆಗಿರುತ್ತದೆ.
ಬ್ಯಾಂಕ್ ಶಾಖೆಗಳ ಮೂಲಕ ನೀವು ಮುಂಗಡ ನೋಂದಣಿಗಳನ್ನು ಮಾಡಬಹುದು ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ನೋಂದಣಿಗಳನ್ನು ಸಹ ಮಾಡಬಹುದು. ಯಾತ್ರಿಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ಎರಡರಲ್ಲೂ ಲಭ್ಯವಿರುವ ಅವರ ಮೊಬೈಲ್ ಅಪ್ಲಿಕೇಶನ್ ಮೂಲಕವೂ ನೀವು ನೋಂದಾಯಿಸಿಕೊಳ್ಳಬಹುದು.
"ಈ ವರ್ಷ ಯಾತ್ರೆಯು 62 ದಿನಗಳು ಎಂಬುದನ್ನು ನೆನಪಿಸಿಕೊಂಡೆಎ ನನಗೆ ಸಂತೋಷವಾಗುತ್ತಿದೆ. ಹೆಚ್ಚಿನ ಯಾತ್ರಾರ್ಥಿಗಳು ತೀರ್ಥಯಾತ್ರೆ ಕೈಗೊಳ್ಳಲು ಮತ್ತು ಅಮರನಾಥ ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ" ಎಂದು ಯಾತ್ರಾರ್ಥಿ ಆಸ್ತಾ ಶರ್ಮಾ ಹೇಳಿದ್ದಾರೆ.
ಮತ್ತೊಬ್ಬ ಮಹಿಳಾ ಭಕ್ತೆ ಮಾತನಾಡಿ, "ನಾನು ಹೆಚ್ಚು ಹೆಚ್ಚು ಜನರು ದೇಗುಲಕ್ಕೆ ಭೇಟಿ ನೀಡುವಂತೆ ಒತ್ತಾಯಿಸುತ್ತೇನೆ. ಕಳೆದ ಐದು ವರ್ಷಗಳಿಂದ ಅಮರನಾಥ ದೇಗುಲಕ್ಕೆ ಭೇಟಿ ನೀಡುತ್ತಿದ್ದೇನೆ. ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಆರಾಮದಾಯಕ ತೀರ್ಥಯಾತ್ರೆಗಾಗಿ ಸರ್ಕಾರವು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications