ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿ: ಆರ್‌ಬಿಐ ಕೊನೆ ಎಚ್ಚರಿಕೆ

By Nayana
|
Google Oneindia Kannada News

ಬೆಂಗಳೂರು, ಜು.7: ಎಟಿಎಂ ಯಂತ್ರದ ಹಳೆಯ ತಂತ್ರಾಂಶವನ್ನು ತೆಗೆದು ಹೆಚ್ಚು ಭದ್ರತೆ ಇರುವ ಹೊಸ ತಂತ್ರಾಂಶ ಅಳವಡಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ ಮುಂದಾಗಿದೆ.

ಬ್ಯಾಂಕ್‌ಗಳ ಎಟಿಎಂ ಕಳ್ಳತನ ಇತ್ತೀಚೆಗೆ ಹೆಚ್ಚಾಗುತ್ತಿದೆ ಅದನ್ನು ತಡೆಯಲಿ ರಿಸರ್ವ್ ಬ್ಯಾಂಕ್‌ ಮುಂದಾಗಿದ್ದು ಈ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಹೊಸ ತಂತ್ರಾಂಶ ಅಳವಡಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ಮೂರು ಬಾರಿ ಸೂಚನೆ ನೀಡಲಾಗಿದೆ. 2019ರ ಜೂನ್‌ ಒಳಗೆ ಹೊಸ ತಂತ್ರಾಂಶ ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ

ಈಗಿರುವ ಎಟಿಎಂನಲ್ಲಿಒ ವಿಂಡೋಸ್‌ ಎಕ್ಸ್‌ಪಿ ತಂತ್ರಾಂಶವಿದ್ದು, ಕಂಪನಿ ಪ್ರಕಾರ 2014ಕ್ಕೆ ಈ ತಂತ್ರಾಂಶ ಹಳೆಯದಾಗಿದೆ. ಇದರಲ್ಲಿ ಯುಎಸ್‌ಬಿ ಪೋರ್ಟ್ಸ್ ಮತ್ತು ಆಟೋರನ್‌ ಸೌಲಭ್ಯ ಇರುವುದರಿಂದ ಸೈಬರ್‌ ಖದೀಮರು ಸುಲಭವಾಗಿ ಎಟಿಎಂ ಹ್ಯಾಕ್‌ ಮಾಡಬಹುದಾಗಿತ್ತು. ಇದರಿಂದ ಬ್ಯಾಂಕ್‌ಗಳ ಮೇಲೆ ಗ್ರಾಹಕರ ನಂಬಿಕೆ ಕಡಿಮೆಯಾಗಿದ್ದು, ಬ್ಯಾಂಕಿಂಗ್‌ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿತ್ತು ಎಂದು ಆರ್‌ಬಿಐ ಹೇಳಿತ್ತು.

RBI warns bankers to update ATM software

ಜತೆಗೆ ಆಯಾ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ತಕ್ಷಣ ಸಭೆ ನಡೆಸಿ ಹೊಸ ತಂತ್ರಾಂಶ ಅಳವಡಿಸಿಕೊಳ್ಳುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಂಡು ಜುಲೈ 31ರ ಒಳಗೆ ಮಾಹಿತಿ ನೀಡುವಂತೆ ಆರ್‌ಬಿಐ ಪ್ರಧಾನ ವ್ಯವಸ್ಥಾಪಕ ಆರ್‌. ರವಿಕುಮಾರ್‌ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

English summary
Reserve Bank of India has set deadline for all bankers to update software of ATMs with theft free technology before June 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X