ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐ

|
Google Oneindia Kannada News

ಅಪನಗದೀಕರಣ ಎಂಬ ನೋಟಿನ ಯಜ್ಞದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿಗಳನ್ನು ಬುಧವಾರ ಬಿಡುಗಡೆ ಮಾಡಿದೆ. ತನ್ನ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ನೀಡಿದ ವರದಿ ಪ್ರಕಾರ, ಅಮಾನ್ಯವಾದ 15.44 ಲಕ್ಷ ಕೋಟಿ ಅಮಾನ್ಯ ನೋಟುಗಳ ಪೈಕಿ 15.28 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ವಾಪಸ್ ಜಮೆಯಾಗಿದೆ.

Recommended Video

RBI to Issue New 200 Rs Notes From Tomorrow | Oneindia Kannada

ಅಪನಗದೀಕರಣದ ವೇಳೆ 1.6ರಿಂದ 1.7 ಲಕ್ಷ ಕೋಟಿ ರುಪಾಯಿ ಅಸಹಜ ಜಮೆಅಪನಗದೀಕರಣದ ವೇಳೆ 1.6ರಿಂದ 1.7 ಲಕ್ಷ ಕೋಟಿ ರುಪಾಯಿ ಅಸಹಜ ಜಮೆ

ಅಂದರೆ ಶೇ 99ರಷ್ಟು ಹಣ ಮರಳಿ ಬ್ಯಾಂಕ್ ಗೆ ಜಮೆಯಾಗಿದೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಒಂದು ಸಾವಿರ ಮುಖಬೆಲೆಯ 8,900 ಕೋಟಿ ರುಪಾಯಿಯಷ್ಟು ಮೊತ್ತ ವಾಪಸ್ ಬಂದಿಲ್ಲ ಎಂದು ವರದಿ ಹೇಳುತ್ತಿದೆ. ಇನ್ನು ಹೊಸದಾಗಿ ಬಿಡುಗಡೆಯಾದ ಎರಡು ಸಾವಿರ ಮುಖಬೆಲೆಯ ನೋಟುಗಳು ಮಾರ್ಚ್ ಕೊನೆಯ ವೇಳೆಗೆ ಒಟ್ಟಾರೆ ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ ಐವತ್ತಕ್ಕಿಂತ ಹೆಚ್ಚಿತ್ತು.

RBI annual report: 99% of demonetised currency back with central bank

ಕಳೆದ ಆರ್ಥಿಕ ವರ್ಷದಲ್ಲಿ ಹೊಸ ನೋಟುಗಳನ್ನು ಮುದ್ರಿಸುವ ಸಲುವಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 7,965 ಕೋಟಿ ರುಪಾಯಿ ಖರ್ಚು ಮಾಡಿದೆ. ವರ್ಷದಿಂದ ವರ್ಷಕ್ಕೆ ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮಾರ್ಚ್ ಅಂತ್ಯಕ್ಕೆ ಶೇ 20.2ರಷ್ಟು ಕಡಿಮೆಯಾಗಿದೆ.

ಅಪನಗದೀಕರಣ ಎಫೆಕ್ಟ್: ಅರ್ಧಕರ್ಧ ಇಳಿದ ರಿಸರ್ವ್ ಬ್ಯಾಂಕ್ ಲಾಭಾಂಶ!ಅಪನಗದೀಕರಣ ಎಫೆಕ್ಟ್: ಅರ್ಧಕರ್ಧ ಇಳಿದ ರಿಸರ್ವ್ ಬ್ಯಾಂಕ್ ಲಾಭಾಂಶ!

ಕಳೆದ ವರ್ಷ ನವೆಂಬರ್ ಎಂಟರಂದು ಐನೂರು ಹಾಗೂ ಸಾವಿರ ರುಪಾಯಿ ನೋಟಿನ ಅಮಾನ್ಯ ಮಾಡಲಾಗಿತ್ತು. ಕಪ್ಪು ಹಣದ ಚಲಾವಣೆ ನಿಯಂತ್ರಣ, ಖೋಟಾ ನೋಟು ಹಾವಳಿಗೆ ತಡೆ ಹಾಗೂ ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿದ್ದ ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

English summary
The Reserve Bank of India on Wednesday revealed in its annual report that Rs 15.28 lakh crore, or 99 per cent of the Rs 15.44-lakh-crore scrapped currency notes, had come back to the central bank since the government’s demonetisation decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X