ರತನ್ ಟಾಟಾ ನಿಧನಕ್ಕೆ ಶಿವಣ್ಣ ಸೇರಿದಂತೆ ಚಿತ್ರರಂಗದ ಗಣ್ಯರ ಕಂಬನಿ
ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ನಿಧನವಾರ್ತೆ ಎಲ್ಲರಿಗೂ ಶಾಕ್ ಕೊಟ್ಟಿದೆ. 86 ವರ್ಷ ವಯಸ್ಸಾಗಿದ್ದ ರತನ್ ಟಾಟಾ ಅವರು ತೀವ್ರ ಅನಾರೋಗ್ಯದ ಹಿನ್ನೆಲೆ ದಕ್ಷಿಣ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಡ ರಾತ್ರಿ 11.30ಕ್ಕೆ ನಿಧನರಾಗಿದ್ದು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ರತನ್ ಟಾಟಾ ಅವರು ಅಕ್ಟೋಬರ್ 9ರಂದು ನಿಧನ ಹೊಂದಿದರು. ಅವರ ಸಾವು ಉದ್ಯಮ ರಂಗಕ್ಕೆ ಶಾಕಿಂಗ್ ಎನಿಸಿದೆ. ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. 'ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.

ಈ ಕುರಿತು ನಟಿ ಪ್ರಿಯಾಂಕಾ ಚೋಪ್ರಾ ಅವರು ಕಂಬನಿ ಮಿಡಿದಿದ್ದು, ನಿಮ್ಮ ದಯೆಯಿಂದ ನೀವು ಲಕ್ಷಾಂತರ ಜನರ ಜೀವಗಳನ್ನು ತಲುಪಿದ್ದೀರಿ. ನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶಕ್ಕಾಗಿ ನೀವು ನೀಡಿದ ಕೊಡುಗೆ, ನಿಮ್ಮ ಸಾಟಿಯಿಲ್ಲದ ಉತ್ಸಾಹ ಮತ್ತು ಸಮರ್ಪಣೆಗಾಗಿ ಧನ್ಯವಾದಗಳು. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ. ಅಲ್ಲದೇ ರತನ್ ಟಾಟಾ ನಿಧನವಾರ್ತೆ ಕೇಳಿ ದುಃಖವಾಗಿದೆ' ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ಸಂಜಯ್ ದತ್ ಅವರು ಸಹ ಸಂತಾಪ ಸೂಚಿಸಿದ್ದು, ಭಾರತ ಇಂದು ನಿಜವಾದ ದಾರ್ಶನಿಕನನ್ನು ಕಳೆದುಕೊಂಡಿದೆ. ಅವರು ಸಮಗ್ರತೆ ಮತ್ತು ಸಹಾನುಭೂತಿಯ ದಾರಿದೀಪವಾಗಿದ್ದರು, ಅವರ ಕೊಡುಗೆಗಳು ವ್ಯವಹಾರವನ್ನು ಮೀರಿ, ಲೆಕ್ಕವಿಲ್ಲದಷ್ಟು ಜೀವನದ ಮೇಲೆ ಪ್ರಭಾವ ಬೀರಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
ಉದ್ಯಮದ ಟೈಟಾನ್ ರತನ್ ಟಾಟಾ ಅವರ ನಿಸ್ವಾರ್ಥ ಲೋಕೋಪಕಾರ ಮತ್ತು ದೂರದೃಷ್ಟಿಯ ನಾಯಕತ್ವವು ಅಸಂಖ್ಯಾತ ಜೀವನವನ್ನು ಪರಿವರ್ತಿಸಿದೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಜೂನಿಯರ್ ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications