Ratan Tata: ರತನ್ ಟಾಟಾ ಅಭಿಮಾನಿಗಳಿಗೆ ಆಘಾತ.. ರತನ್ ಟಾಟಾ ಮುಂಬೈ ಆಸ್ಪತ್ರೆಯಲ್ಲಿ...
ರತನ್ ಟಾಟಾ ಅವರ ಅಭಿಮಾನಿಗಳಿಗೆ ಇಂದು ತೀವ್ರ ಆಘಾತ ಎದುರಾಗಿದೆ. ಭಾರತದಲ್ಲಿನ ಉದ್ಯಮ ವಲಯವನ್ನು ಜಗತ್ತಿನ ಮಟ್ಟದಲ್ಲಿ ಎದ್ದು ನಿಲ್ಲುವಂತೆ ಬೆಳೆಸಿ, ಇಡೀ ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿರುವ ರತನ್ ಟಾಟಾ ಅವರು ಶತಕೋಟಿ ಭಾರತೀಯರ ಆರಾಧ್ಯ ದೈವ. ರತನ್ ಟಾಟಾ ಸಮಾಜದ ಒಳಿತಿಗಾಗಿ, ಕೋಟಿ ಕೋಟಿ ರೂಪಾಯಿ ದಾನ ಮಾಡಿ ಮಾದರಿ ಆಗಿದ್ದರು. ಹೀಗಿದ್ದಾಗಲೇ ಇಂದು ರತನ್ ಟಾಟಾ ಅಭಿಮಾನಿಗಳಿಗೆ ಆಘಾತ ಎದುರಾಗಿದ್ದು, ರತನ್ ಟಾಟಾ ಮುಂಬೈ ಆಸ್ಪತ್ರೆಯಲ್ಲಿ...
ರತನ್ ಟಾಟಾ ಇಂದಿಗೂ ಭಾರತದ ಉದ್ಯಮದ ಬಗ್ಗೆ ಚಿಂತಿಸುವವರು & ತಮ್ಮ ಸಂಸ್ಥೆಯ ಉದ್ಯೋಗಿಗಳನ್ನ ಅಂದ್ರೆ ಟಾಟಾ ಸಂಸ್ಥೆ ಕೆಲಸಗಾರರನ್ನು, ಮನೆಯವರಂತೆ ನೋಡಿಕೊಳ್ಳುವ ವ್ಯಕ್ತಿ. ಎಂತಹದ್ದೇ ಪರಿಸ್ಥಿತಿ ಬಂದರೂ ಕೆಲಸಗಾರರನ್ನು ಕೆಲಸದಿಂದ ತೆಗೆಯದೆ ಉಳಿಸುವ ಒಳ್ಳೆಯ ಮನಸ್ಸಿನವರು. ಹಾಗೇ ರತನ್ ಟಾಟಾ ಅವರ ತಂದೆ & ತಾತ ಕೂಡ ಇದೇ ರೀತಿ, ಭಾರತದ ಉದ್ಯಮಗಳಿಗೆ ಬಿಗಿಯಾದ ಅಡಿಪಾಯ ಹಾಕಿ ಕೊಟ್ಟವರು. ಇದೇ ಕಾರಣಕ್ಕೆ ಈ ಹೊತ್ತಿನಲ್ಲೂ 86 ವರ್ಷದ ರತನ್ ಟಾಟಾ ಅವರಿಗೆ ಭಾರಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಇದೆ. ಪರಿಸ್ಥಿತಿ ಹೀಗಿದ್ದಾಗಲೇ, ರತನ್ ಟಾಟಾ ಅಭಿಮಾನಿಗಳಿಗೆ ಆಘಾತ ಎದುರಾಗಿದ್ದು ರತನ್ ಟಾಟಾ ಮುಂಬೈ ಆಸ್ಪತ್ರೆಯಲ್ಲಿ...

86 ವರ್ಷ ವಯಸ್ಸಿನ ರತನ್ ಟಾಟಾ...
ರತನ್ ಟಾಟಾ ಅವರಿಗೆ 86 ವರ್ಷ ವಯಸ್ಸಾಗಿದ್ದು, ಅವರಿಗೆ ವಿಶೇಷ ಆರೈಕೆಯನ್ನ ಇದೀಗ ನೀಡಲಾಗುತ್ತಿತ್ತು. ಹೀಗಿದ್ದಾಗಲೇ ನಿನ್ನೆ ತಡರಾತ್ರಿ 12.30ರ ಸಮಯದಲ್ಲಿ ದೇಶದ ಅತಿದೊಡ್ಡ ಉದ್ಯಮಿ ರತನ್ ಟಾಟಾ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಹೀಗಾಗಿ ತಕ್ಷಣವೇ ಅವರನ್ನು ಮಹಾರಾಷ್ಟ್ರ ರಾಜ್ಯದ ರಾಜಧಾನಿ & ವಾಣಿಜ್ಯ ನಗರಿ ಮುಂಬೈ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹಬ್ಬಿದ್ದು, ಸಂಚಲನ ಸೃಷ್ಟಿಯಾಗಿದೆ!
ನನಗೆ ಏನೂ ಆಗಿಲ್ಲ ಅಂದ್ರು!
ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ಇದೀಗ ದೇಶಾದ್ಯಂತ ಸುದ್ದಿ ಹಬ್ಬಿದ್ದು, ರತನ್ ಟಾಟಾ ಅವರ ಅಭಿಮಾನಿಗಳು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಹಾಗೇ ರತನ್ ಟಾಟಾ ಅವರ ರಕ್ತದ ಒತ್ತಡ ಸಿಕ್ಕಾಪಟ್ಟೆ ಕಡಿಮೆ ಆಗಿದೆ ಎನ್ನಲಾಗಿದ್ದು, ಚಿಕಿತ್ಸೆಯನ್ನ ನೀಡಲಾಗುತ್ತಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಈ ಕುರಿತು ಖುದ್ದಾಗಿ ರತನ್ ಟಾಟಾ ಅವರೇ ಸ್ಪಷ್ಟನೆ ನೀಡಿದ್ದು, ನನಗೆ ಏನೂ ಆಗಿಲ್ಲ ವಯೋಸಹಜ ಪರೀಕ್ಷೆ ಕಾರಣಕ್ಕೆ ನಾನು ಆಸ್ಪತ್ರೆಗೆ ತೆರಳಿದ್ದೆ ಅಷ್ಟೇ. ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಖುದ್ದು ರತನ್ ಟಾಟಾ ಅವರೇ ಇದೀಗ ತಿಳಿಸಿರುವುದು ಅವರ ಅಭಿಮಾನಿಗಳಿಗೆ ನೆಮ್ಮದಿ ನೀಡಿದೆ.












Click it and Unblock the Notifications