ಹೈದರಾಬಾದ್: ಬಾಲಕನಿಗೆ ಕಚ್ಚಿದ ಇಲಿ- ಮೆಕ್‌ಡೊನಾಲ್ಡ್ ರೆಸ್ಟೋರೆಂಟ್ ವಿರುದ್ಧ ದೂರು
ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಬಾಲಕನಿಗೆ ಬೃಹತ್ ಇಲಿಯೊಂದು ಕಚ್ಚಿದ್ದು ಪ್ರಕರಣ ದಾಖಲಾಗಿದೆ.
ಹೈದರಾಬಾದ್‌ನ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ 8 ವರ್ಷದ ಬಾಲಕನಿಗೆ ಬೃಹತ್ ಇಲಿಯೊಂದು ಕಚ್ಚಿದ ಘಟನೆ ನಡೆದಿದೆ. ಹೈದರಾಬಾದ್‌ನ ಹೋಟೆಲ್ ಎಸ್‌ಪಿಜಿ ಗ್ರ್ಯಾಂಡ್ ಆವರಣದಲ್ಲಿರುವ ಮೆಕ್‌ಡೊನಾಲ್ಡ್ ಔಟ್‌ಲೆಟ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
RODENT ATTACK ON A CHILD in the McDonald’s restaurent Ground Floor, SPG Hotel, Kompally, Hyderabad, Telangana 500096.@McDonalds @mcdonaldsindia @consumercourtin @PiyushGoyalOffc @director_food @AFCGHMC @fooddeptgoi @TOIIndiaNews @TOIHyderabad @ABPNews @ndtv @ChildWelfareGov pic.twitter.com/wrjeQgAiBh
— Savio H (@SHenrixs) March 10, 2023
ಫಾಸ್ಟ್‌ಫುಡ್ ಆನಂದಿಸಲು ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ಗೆ ಬಂದಿದ್ದ ಕುಟುಂಬಕ್ಕೆ ಭಯಾನಕ ಅನುಭವವಾಗಿದೆ. 8 ವರ್ಷದ ಬಾಲಕನ ಶಾರ್ಟ್ಸ್‌ಗೆ ಬೃಹತ್ ಇಲಿ ನುಗ್ಗಿ ಅವನ ಕಾಲಿಗೆ ಕಚ್ಚಿದೆ. ಹೈದರಾಬಾದ್‌ನ ಕೊಂಪಲ್ಲಿ ಪ್ರದೇಶದ ಮೆಕ್‌ಡೊನಾಲ್ಡ್ ಔಟ್‌ಲೆಟ್‌ನಲ್ಲಿ ಈ ಘಟನೆ ನಡೆದಿದೆ.

ಇಲಿ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು ಚಿಕ್ಕ ನಾಯಿಯ ಗಾತ್ರದ ಇಲಿ, ಫಾಸ್ಟ್ ಫುಡ್ ಔಟ್ಲೆಟ್ನ ನೆಲದ ಮೇಲೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ನಂತರ ಚಿಕ್ಕ ಮಗುವಿನ ಶಾರ್ಟ್ಸ್ಗೆ ಜಿಗಿದು ಕಚ್ಚಿದೆ.
ರೆಸ್ಟೊರೆಂಟ್‌ನ ವಾಶ್‌ರೂಮ್‌ನಿಂದ ಇಲಿ ಹೊರಬಂದು ನೇರವಾಗಿ ಮಗುವಿನ ಬಳಿಗೆ ಹೋಗಿದೆ. ಈ ವೇಳೆ ಬಾಲಕ ತನ್ನ ಹೆತ್ತವರೊಂದಿಗೆ ತಿಂಡಿ ತಿನ್ನುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಇಲಿ ಬಾಲಕನ ಕಾಲಿನ ಮೇಲೆ ಮತ್ತು ಆತನ ಶಾರ್ಟ್ಸ್‌ಗೆ ಏರುತ್ತಿದ್ದಾಗ ಮಗುವಿನ ತಂದೆ ಅವನನ್ನು ರಕ್ಷಿಸಲು ಮುಂದಾಗುತ್ತಾರೆ. ಅವನ ಬಟ್ಟೆಯಿಂದ ಇಲಿಯನ್ನು ಕಿತ್ತು ಎಸೆಯುತ್ತಾರೆ. ಈ ವೇಳೆ ಬಾಲಕನ ಎಡಗಾಲಿಗೆ ಎರಡು ಕಡೆ ಇಲಿ ಕಚ್ಚಿದ ಕಾರಣ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಸೇನಾ ಅಧಿಕಾರಿಯಾಗಿರುವ ಬಾಲಕನ ತಂದೆ ಮರುದಿನ ದೂರು ದಾಖಲಿಸಿದ್ದರು. ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.












Click it and Unblock the Notifications