Viral Rashmika-Vijay Photo: ರಶ್ಮಿಕಾ ಮಂದಣ್ಣ-ವಿಜಯ್ ಅನ್‌ಸಿನ್ ರೋಮ್ಯಾಟಿಕ್ ಫೋಟೋ ವೈರಲ್
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ತೆಲುಗಿನ 'ಗೀತಾ ಗೋವಿಂದಂ' ಸಿನಿಮಾವು ಚಿತ್ರದ ಅದ್ಭುತ ಯಶಸ್ಸು ಕಂಡಿತ್ತು. ಬಳಿಕ ಇದೇ ಕಾಂಬಿನೇಷನ್ ನಲ್ಲಿ ಮತ್ತೆ 'ಡಿಯರ್ ಕಾಮ್ರೆಡ್' ಸಿನಿಮಾ ತೆರೆ ಕಂಡಿತ್ತು. ಅದಕ್ಕೀಗ ಐದು ವರ್ಷ ತುಂಬುವ ಹೊತ್ತಿನಲ್ಲೇ ರಶ್ಮಿಕಾ- ವಿಜಯ್ ಆಪ್ತ, ರೋಮ್ಯಾಟಿಕ್ ಫೋಟೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಟ ವಿಜಯ್ ದೇವರಕೊಂಡ ಅಭಿಮಾನಿಗಳು ತಮ್ಮ ಹಿರೋ ನಟಿ ರಶ್ಮಿಕಾ ಜೊತೆಗಿನ ರೋಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಯೂಟ್ಯೂಬ್ ನಲ್ಲಿ ಅತ್ಯಧಿಕ ವೀಕ್ಷಣೆಗೆ ಪಾತ್ರವಾದ 'ಡಿಯರ್ ಕಾಮ್ರೆಡ್' ಸಿನಿಮಾಗೆ ಐದು ವರ್ಷ ತುಂಬುತ್ತಿವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಜೋಡಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರು ಡೇಟಿಂಗ್ ನಲ್ಲಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಆಗಲಿದ್ದಾರೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ ಇದನ್ನೆಲ್ಲ ಇಬ್ಬರು ತಳ್ಳಿಹಾಕಿದ್ದು, ತಾವು ಒಳ್ಳೆಯ ಸ್ನೇಹಿತರ ಎಂದು ಹೇಳಿದ್ದರು.
ರಶ್ಮಿಕಾ ವಿಜಯ್ ಕೆಮೆಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಂತೂ ಸುಳ್ಳಲ್ಲ. ಇವರಿಬ್ಬರು ಜೊತೆಗೆ ಮತ್ತೆ ಸಿನಿಮಾ ಯಾವಾಗ ಮಾಡುತ್ತಾರೋ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರಿಬ್ಬರ ಕೊನೆ ಸಿನಿಮಾ 'ಡಿಯರ್ ಕಾಮ್ರೆಡ್' ಚಿತ್ರಮಂದಿಗಳಲ್ಲಿ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ, ಬದಲಾಗೆ ಯೂಟ್ಯೂಬ್‌ನಲ್ಲಿ ಕಮಾಲ್ ಮಾಡಿತ್ತು.

'ಡಿಯರ್ ಕಾಮ್ರೆಡ್' ಕಾಂಬಿನಷೇನ್‌ಗೆ ಫ್ಯಾನ್ಸ್ ಫಿದಾ
2019 ರಲ್ಲಿ ಬಿಡುಗಡೆಯಾಗಿದ್ದ ಭರತ್ ಕಮ್ಮ ನಿರ್ದೇಶನದ ಕ್ಲಾಸಿಕ್ ಚಲನಚಿತ್ರ 'ಡಿಯರ್ ಕಾಮ್ರೇಡ್' ಗೆ ಐದು ವರ್ಷ ತುಂಬಿದೆ. ಅದೇ ಸಿನಿಮಾದಲ್ಲಿ ಸ್ಟಿಲ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ವಿಜಯ್ ಅವರು ನಟಿ ರಶ್ಮಿಕಾರನ್ನು ಹತ್ತಿವವೇ ನಿಂತು ಕೈ ಹಿಡಿದಿರುವ ಪೋಟೋ ಇದಾಗಿದೆ.
ರಶ್ಮಿಕಾ ನೀಲಿ ಲೆಹೆಂಗಾದಲ್ಲಿ ಸುಂದರವಾಗಿ ಕಾಣಿಸಿಕೊಂಡರೆ, ವಿಜಯ್ ಬಿಳಿ ಶರ್ಟ್‌ನಲ್ಲಿ ಡ್ಯಾಶಿಂಗ್ ಆಗಿ ಕಾಣುತ್ತಾರೆ. ಈ ಸ್ಟಿಲ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಡಿಯರ್ ಕಾಮ್ರೆಡ್ ಸಿನಿಮಾ ಜೊತೆಗೆ ಇಬ್ಬರ ಕಾಂಬಿನೇಷನ್ ಅನ್ನು ನೆನಪಿಸಿದೆ.
ಡಿಸೆಂಬರ್ ನಲ್ಲಿ ರಶ್ಮಿಕಾ ಫ್ಯಾನ್ಸ್‌ಗೆ ಧಮಾಕಾ
ಸದ್ಯ ನಟಿ ರಶ್ಮಿಕಾ ಅವರ ಪುಷ್ಪಾ 2 ಮತ್ತು ಛಾವಾ ಸಿನಿಮಾ ತೆರಗೆ ಬರಲು ಸಜ್ಜಾಗಿವೆ. ಡಿಸೆಂಬರ್ ನಲ್ಲಿ ರಶ್ಮಿಕಾರ ಅಭಿಮಾನಿಗಳಿಗೆ ಡಬಲ್ ಧಮಾಕಾ ಎನ್ನಬಹುದು. ಏಕಂದರೆ ಡಿ.06ರಂದು ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಬಾಲಿವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು ಶುಕ್ರವಾರ ಅವರ 'ಡಿಯರ್ ಕಾಮ್ರೆಡ್' ಸಿನಿಮಾಗೆ ಐದು ತುಂಬಿದ ಹಿನ್ನೆಲೆಯಲ್ಲಿ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಆ ಸಿನಿಮಾದ ಎಡಿಟ್ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿಮಾ ಆನಿವರ್ಸರಿಯ ಅಭಿಮಾನಿಗಳ ಸೆಲೆಬ್ರೆಷನ್‌ನಲ್ಲಿ ಅವರು ಜೊತೆಯಾಗಿದ್ದಾರೆ.












Click it and Unblock the Notifications