Get Updates
Get notified of breaking news, exclusive insights, and must-see stories!

ಈತನಿಗಿತ್ತು ನಾಲ್ಕರ ಬದಲು ಐದು ಹೃದಯ ಕವಾಟ

ಜೋಧಪುರ, ಸೆ. 26 : ಹಾರ್ಟ್‌ ಆಪರೇಷನ್‌ ಆಧುನಿಕ ಯುಗದಲ್ಲಿ ಸಾಮಾನ್ಯವೆನಿಸಿದ್ದರೂ ಜೋಧಪುರದ ವೈದ್ಯರು ಮಾಡಿರುವ ಆಪರೇಷನ್‌ ಅಂತಿಂಥದ್ದಲ್ಲ. ನಾಲ್ಕರ ಬದಲು ಐದು ಕವಾಟವಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಸಾಮಾನ್ಯ ವ್ಯಕ್ತಿಯ ಹೃದಯದಲ್ಲಿ ನಾಲ್ಕು ಕವಾಟಗಳಿರುತ್ತವೆ. ಆದರೆ 42 ವರ್ಷದ ಪಾಲಿ ದೇವರಂ ಹೃದಯದಲ್ಲಿ ಐದು ಕವಾಟಗಳಿದ್ದವು. ಇದರಿಂದ ಉಸಿರಾಟ ತೊಂದರೆ, ಕಫ ಸಮಸ್ಯೆ ಮತ್ತು ಹೃದಯದ ನೋವು ಅನುಭವಿಸುತ್ತಿದ್ದರು.(ಭಾರತದಲ್ಲಿ ಹೃದಯ ಚಿಕಿತ್ಸೆ ಅಮೆರಿಕಕ್ಕಿಂತಲೂ ದುಬಾರಿ)

heart

ಕಳೆದ ಎರಡು ತಿಂಗಳಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದ್ದು ಹಲವು ಪರೀಕ್ಷೆ ನಡೆಸಿದರೂ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ಜೋಧಪುರದ ಮೇಡಿಪಲ್ಸ್‌ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿದ ವೇಳೆ ಹೃದಯಯದಲ್ಲಿ ನಾಲ್ಕರ ಬದಲು ಐದು ಕವಾಟಗಳಿರುವುದು ಪತ್ತೆಯಾಗಿದೆ. ನಾಲ್ಕನೇ ಕವಾಟದ ಮೇಲ್ಘಾಗದಲ್ಲಿ ಪೊರೆಯೊಂದು ಬೆಳೆದು ಐದನೇ ಕವಾಟದಂತೆ ರೂಪುಗೊಂಡಿತ್ತು.

ಸಮಸ್ಯೆ ಪತ್ತೆಯಾದ ನಂತರ ಕಾರ್ಯನಿರತರಾದ ವೈದ್ಯರು ಪೊರೆಯನ್ನು ತೆಗೆದು ಹೃದಯವನ್ನು ಸುಸ್ಥಿತಿಗೆ ತಂದಿದ್ದಾರೆ. ಭಾರತಲ್ಲೇ ಈ ರೀತಿಯ ಆಪರೇಷನ್‌ ಇದೇ ಮೊದಲಾಗಿದ್ದು ಈ ಹಿಂದೆ ಜರ್ಮನಿ ಮತ್ತಿ ಚೀನಾದಲ್ಲಿ ಮಾತ್ರ ನಡೆಸಲಾಗಿತ್ತು.(ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!)

ಅನೇಕ ವೈದ್ಯರು ಮತ್ತು ಆಸ್ಪತರೆಗೆ ತೋರಿಸಿದರೂ ರೋಗ ಪತ್ತೆಯಾಗಿರಲಿಲ್ಲ. ಪಾಲಿ ದೇವರಂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಇನ್ನು ಮುಂದೆ ಅವರು ಸಾಮಾನ್ಯರಂತೆ ಜೀವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂ. ವೆಚ್ಚ ತಗುಲಿದೆ ಎಂದು ದೇವಿರಂ ಸಂಬಂಧಿ ದಿನೇಶ್‌ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+