Ranbir Kapoor: 5,000 ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರಿತ್ತು; ನಟ ರಣಬೀರ್ ಕಪೂರ್: ಪುಷ್ಪಕ ವಿಮಾನಕ್ಕೆ ಟೆಸ್ಲಾ ಹೋಲಿಕೆ!
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ, ಉದ್ಯಮಿ ಎಲಾನ್ ಮಸ್ಕ್ ಅವರ ಹೊಸ ಹಾರುವ ಕಾರಿನ ಬಗ್ಗೆ ನಟ ರಣಬೀರ್ ಕಪೂರ್ ಅವರ ಬಗ್ಗೆ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಪೌರಾಣಿಕ ಪುಷ್ಪಕ ವಿಮಾನ (ರಾಮಾಯಣದಲ್ಲಿ ಬರುವ ಹಾರುವ ರಥ)ವನ್ನು ಎಲಾನ್ ಮಸ್ಕ್ ಅವರು ಹೊಸದಾಗಿ ಪರಿಚಯಿಸಿರುವ ಹಾರುವ ಕಾರು ರೋಡ್‌ಸ್ಟರ್‌ಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ ಭಾರತವು 5,000 ವರ್ಷಗಳ ಹಿಂದೆಯೇ ಹಾರುವ ಕಾರ್ ಹೊಂದಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಆ್ಯಂಕರ್ ಸುಮಾ ಅವರ ಚಾಟ್ ಶೋ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಹನಟರಾದ ರವಿ ದುಬೆ, ರಾಕುಲ್ ಪ್ರೀತ್ ಸಿಂಗ್ ಮತ್ತು ಯಶ್ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರು ಸಹ ಇದ್ದರು. ಈ ಶೋನಲ್ಲಿ ಪ್ರಾರಂಭದಲ್ಲಿ ರಾಮಾಯಣ ಸಿನಿಮಾದ ಬಗ್ಗೆ ಚರ್ಚೆ ಮಾಡಲಾಗಿದೆ. ಸಿನಿಮಾದಲ್ಲಿ ಅದ್ಭುತ ಅಂಶಗಳು, ಆಯುಧಗಳ ಬಳಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲಾಗಿದೆ. ಭಗವಾನ್ ಶ್ರೀ ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಅವರು ಅಭಿನಯಿಸಿದ್ದಾರೆ. ಈ ಚರ್ಚೆ ನಡೆಯುವ ಸಂದರ್ಭದಲ್ಲಿ ನಟ ರಣಬೀರ್ ಕಪೂರ್ ಅವರು, ಎಲಾನ್ ಮಸ್ಕ್ ಅವರ ಹಾರುವ ಕಾರಿನ ಬಗ್ಗೆ ಮಾತನಾಡಿದ್ದಾರೆ.

ಎಲಾನ್ ಮಸ್ಕ್ ಅವರು ಈಚೆಗೆ ಹಾರುವ ಕಾರನ್ನು ಪರಿಚಯಿಸಿದ್ದಾರೆ. ಭಾರತವು 5,000 ವರ್ಷಗಳ ಹಿಂದೆಯೇ ಅದನ್ನು ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ರಣಬೀರ್ ಅವರು, ಪುರಾಣದಲ್ಲಿ ಬರುವ ಪುಷ್ಪಕ ವಿಮಾನದ ಬಗ್ಗೆ ಉಲ್ಲೇಖಿಸಿ ಹೇಳಿದ್ದಾರೆ. ಇನ್ನು ಇದೇ ಸಂದರ್ಶನದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಪುಷ್ಪಕ ವಿಮಾನವನ್ನು ನಿರ್ಮಿಸಲು ಸುಮಾರು ಎರಡು ವರ್ಷಗಳು ಬೇಕಾಯಿತು ಎಂದೂ ಹೇಳಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ಪುಷ್ಪಕ ವಿಮಾನದ ಅಂತಿಮ ವಿನ್ಯಾಸ ತಲುಪುವುದಕ್ಕೆ ನಮಗೆ ಸುಮಾರು ಎರಡು ವರ್ಷಗಳು ಬೇಕಾಯಿತು. ಈ ವಿನ್ಯಾಸವನ್ನು ಮಾಡುವ ಹಂತದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅದಕ್ಕಾಗಿಯೇ ನಾವು ರಾವಣ ಮತ್ತು ಜಟಾಯು ಹೋರಾಟವನ್ನು ರಚಿಸಲು ತುಂಬಾ ಸಮಯ ತೆಗೆದುಕೊಂಡೆವು. ಪುಷ್ಪಕ ವಿಮಾನದ ಹಿಂದಿನ ವಿನ್ಯಾಸದ ಮೇಲೆ ನಾವು ಕೆಲಸ ಮಾಡುತ್ತಿದ್ದಾಗ, ಅದು ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣುತ್ತದೆ ಎಂದು ನಾವು ಊಹಿಸಿದ್ದೆವು ಎಂದಿದ್ದಾರೆ.
ಇನ್ನು ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ವಿಶೇಷವಾಗಿ ವಿವರಿಸಲಾಗಿದೆ. ಇದೀಗ ಟೆಸ್ಲಾ ಕಂಪನಿಯ ಮುಂದಿನ ತಲೆಮಾರಿನ ರೋಡ್‌ಸ್ಟರ್ ಕಾರು ಮತ್ತೆ ಸುದ್ದಿಯಲ್ಲಿರುವ ಹಿನ್ನೆಲೆಯಲ್ಲಿ ಈ ಹೋಲಿಕೆ ಮುನ್ನೆಲೆಗೆ ಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಹೊಸ ಆವೃತ್ತಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ಅಕ್ಟೋಬರ್ 15ರಂದು ಟೆಕ್ಸಾಸ್‌ನ ವಾಕೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಳ ದಿನಗಳಿಂದ ವಿಳಂಬವಾಗಿದ್ದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಪ್ರದರ್ಶಿಸಿದರು.
ಸ್ಪೇಸ್‌ಎಕ್ಸ್‌ನ ರಾಕೆಟ್ ಅಭಿವೃದ್ಧಿ ಮತ್ತು ಪರೀಕ್ಷಾ ಕೇಂದ್ರದಲ್ಲಿ ನಡೆದ ಪ್ರದರ್ಶನದ ವೇಳೆ ಈ ಕಾರು ದೊಡ್ಡದಾದ ಬಾಗಿದ ರ‍್ಯಾಂಪ್ ಮೇಲೆ ತಲೆಕೆಳಗಾಗಿ ಚಲಿಸಿ, ಗಾಳಿಯಲ್ಲಿ ಪಲ್ಟಿಯಾಗಿ ಸುರಕ್ಷಿತವಾಗಿ ಕೆಳಗಿಳಿಯಿತು. ಇದನ್ನು ರಣಬೀರ್ ಕಪೂರ್ ಅವರು ಪುಪ್ಪಕ ವಿಮಾನಕ್ಕೆ ಹೋಲಿಕೆ ಮಾಡಿದ್ದಾರೆ.
“Elon Musk recently invented a flying car, but India did it 5,000 years ago.” — Ranbir Kapoor.If we had flying cars 5,000 years ago, why were people still using wooden chariots pulled by animals?There is no magical 5,000-year gap in technological evolution where humanity had advanced technology and then somehow forgot it. Human civilization has seen continuous, cumulative advancement—generation after generation building on knowledge, experimentation and engineering.Technology evolves cumulatively. Claiming we already had everything, without evidence, isn’t pride—it’s false belief.And please don’t disrespect the world’s scientists and engineers. The present human civilization is the most technologically advanced in our entire history because millions of people have spent centuries solving problems and pushing the boundaries of what is possible.
— Rajat Jain (@RajatJain) November 1, 2026


Click it and Unblock the Notifications
