ರಾಮನವಮಿ ಘರ್ಷಣೆ: ಧ್ವಜ ಅಪವಿತ್ರಗೊಳಿಸಿದ ಘಟನೆ- ಜಮ್ಶೆಡ್‌ಪುರದಲ್ಲಿ ಮತ್ತೆ ಗಲಭೆ- ನಿಷೇಧಾಜ್ಞೆ ಜಾರಿ
ಜಮ್‌ಶೆಡ್‌ಪುರ ಏಪ್ರಿಲ್ 10: ರಾಮನವಮಿಯಂದು ಧ್ವಜವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ಮತ್ತೆ ಘರ್ಷಣೆ ನಡೆದಿದ್ದು ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಲಭೆ ನಿಯಂತ್ರಣಕ್ಕೆ ತರಲು ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಜೊತೆಗೆ ಶಾಸ್ತ್ರಿನಗರದಲ್ಲಿ ಎರಡು ಅಂಗಡಿಗಳು ಮತ್ತು ಆಟೋ ರಿಕ್ಷಾಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಲಾಗಿದೆ. ಈ ವೇಳೆ ಉದ್ವಿಗ್ನಗೊಂಡ ವಾತಾವರಣದಿಂದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು.

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಪ್ರಭಾತ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದವರನ್ನು ಮನೆಗೆ ಕಳುಹಿಸಲಾಗಿದೆ. ಇಡೀ ಪ್ರದೇಶದಲ್ಲಿ ಫೋರ್ಸ್ ಅನ್ನು ನಿಯೋಜಿಸಲಾಗಿದೆ. ಆರ್ಎಎಫ್ (ಕ್ಷಿಪ್ರ ಕಾರ್ಯಾಚರಣೆ ಪಡೆ) ತಂಡವನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ" ಎಂದು ಪ್ರಭಾತ್ ಕುಮಾರ್ ಅವರು ಹೇಳಿದರು.
#WATCH | Security forces conduct flag march in Jamshedpur's Kadma police station area following an incident of stone pelting and arson, in Jharkhand
— ANI (@ANI) April 10, 2023
Section 144 CrPc is enforced in the area and mobile internet is temporarily banned. pic.twitter.com/NhPnWtkQhR
ಗಲಭೆ ನಿಗ್ರಹ ಪೊಲೀಸರು ಇಂದು ಬೆಳಗ್ಗೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಕೆಲವರನ್ನು ಬಂಧಿಸಲಾಗಿದೆ ಎಂದು ಪೂರ್ವ ಸಿಂಗ್‌ಭೂಮ್‌ನ ಉಪ ಆಯುಕ್ತ ವಿಜಯ ಜಾಧವ್ ತಿಳಿಸಿದ್ದಾರೆ. "ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ. ಶಾಂತಿ ಸಮಿತಿ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಂವಹನವನ್ನು ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದೇವೆ" ಎಂದು ಅವರು ಹೇಳಿದರು.
ಜಮ್ಶೆಡ್‌ಪುರದಲ್ಲಿ ಮತ್ತೆ ಗಲಭೆ
ಕೆಲವು ಸಮಾಜ ವಿರೋಧಿ ಶಕ್ತಿಗಳು ಶಾಂತಿ ಕದಡಲು ಯತ್ನಿಸುತ್ತಿದ್ದು, ಅದಕ್ಕೆ ಕಿವಿಗೊಡದಂತೆ ಶಾಂತತೆಯಿಂದ ವರ್ತಿಸಿ ಎಂದು ಪೊಲೀಸರು ನಾಗರಿಕರಿಂದ ಸಹಕಾರ ಕೋರಿದರು. "ನಾವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸ್ ಪಡೆ, ಕ್ವಿಕ್ ರೆಸ್ಪಾನ್ಸ್ ಟೀಮ್, ಮ್ಯಾಜಿಸ್ಟ್ರೇಟ್, ರ್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿ ಮತ್ತು ಇತರ ಗಲಭೆ ವಿರೋಧಿ ಶಶಸ್ತ್ರಗಳನ್ನು ನಿಯೋಜಿಸಿದ್ದೇವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವದಂತಿಗಳನ್ನು ನಂಬಬೇಡಿ ಎಂದು ಜಾಧವ್ ಜನರಿಗೆ ಮನವಿ ಮಾಡಿದ್ದಾರೆ. "ಜನರು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ವಿನಂತಿಸಲಾಗಿದೆ. ಅವರು ಯಾವುದೇ ಪ್ರಚೋದನಕಾರಿ ಅಥವಾ ಅಹಿತಕರ ಸಂದೇಶಗಳನ್ನು ಸ್ವೀಕರಿಸಿದರೆ, ದಯವಿಟ್ಟು ಪೊಲೀಸರಿಗೆ ವರದಿ ಮಾಡಿ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.
ನಿಷೇಧಾಜ್ಞೆ ಜಾರಿ
ಸ್ಥಳೀಯ ಸಂಘಟನೆಯ ಸದಸ್ಯರು ರಾಮನವಮಿ ಧ್ವಜವನ್ನು ಅಪವಿತ್ರಗೊಳಿಸಿರುವುದನ್ನು ಕಂಡು ಶನಿವಾರದಿಂದ ಈ ಪ್ರದೇಶವು ಉದ್ವಿಗ್ನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ನಿನ್ನೆ ರಾತ್ರಿ ಗುಂಪುಗಳ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ (ಧಲ್ಭುಮ್) ಪಿಯೂಷ್ ಸಿನ್ಹಾ ಹೇಳಿದ್ದಾರೆ. ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ವಿಜಯ ಜಾಧವ್, ಕೆಲವು ಸಮಾಜ ವಿರೋಧಿ ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಅಂತವರ ಸಂದೇಶಗಳು ಹಾಗೂ ಕರೆಗಳಿಗೆ ಕಿವಿ ಕೊಡದಿರಿ ಎಂದು ವಿನಂತಿಸಿದ್ದಾರೆ. ಸ್ಥಳೀಯ ಸಂಘಟನೆಯ ಸದಸ್ಯರು ಧಾರ್ಮಿಕ ಧ್ವಜದ ಮೇಲೆ ಮಾಂಸದ ತುಂಡನ್ನು ಅಂಟಿಸಿದ ನಂತರ ಶನಿವಾರ ರಾತ್ರಿಯಿಂದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 31ರ ರಾತ್ರಿ ರಾಮನವಮಿಯಂದು ಹಿಂಸಾಚಾರ
ಮೊನ್ನೆ ಮಾರ್ಚ್ 31ರ ರಾತ್ರಿ ರಾಮನವಮಿಯಂದು ಉಗ್ರ ಹಿಂಸಾಚಾರ ನಡೆದಿತ್ತು. ಜಮ್ಶೆಡ್‌ಪುರದ ಹಲ್ದಿಪೋಖರ್‌ನಲ್ಲಿ ರಾಮ ನವಮಿಯಂದು ಸಾಕಷ್ಟು ಕಲ್ಲು ತೂರಾಟ ನಡೆದಿದೆ. ಜನರು ರಾಮನವಮಿ ಮೆರವಣಿಗೆ ನಡೆಸುತ್ತಿದ್ದರು. ಮೆರವಣಿಗೆಯು ಜುಗ್ಸಾಲೈ ತಲುಪಿದಾಗ, ಪ್ರತಿಭಟನಾಕಾರರು ಮೆರವಣಿಗೆಯ ಮೇಲೆ ಕಲ್ಲು ತೂರಿದರು. ಈ ಘಟನೆಯಿಂದ ಆಕ್ರೋಶಗೊಂಡ ಜನರು ಬಾಟಾ ಚೌಕ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದರು.
ಇದಾದ ಬಳಿಕ ಉಭಯ ಸಮುದಾಯಗಳ ಜನರ ನಡುವೆ ಪ್ರಚೋದನಕಾರಿ ಘೋಷಣೆಗಳು ಆರಂಭವಾದವು. ನಂತರ ಜನರು ಧ್ವಂಸ ಮತ್ತು ಬೆಂಕಿ ಹಚ್ಚಲು ಪ್ರಾರಂಭಿಸಿದರು. ಸಿಟ್ಟಿಗೆದ್ದ ಗುಂಪು ಟೈರ್ ಸುಟ್ಟು ಪೊಲೀಸ್ ವಾಹನಕ್ಕೆ ಹಾನಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಹಿಂಸಾಚಾರದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗ ಮತ್ತೆ ಅದೇ ಪರಿಸ್ಥಿತಿ ಇಲ್ಲಿ ನಡೆದಿದೆ.
-
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications