• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು': ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್

|
Google Oneindia Kannada News

ನವದೆಹಲಿ, ಜೂ.26: ಪೌರಾಣಿಕ ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ಸಾಧ್ಯತೆಯಿದೆ. ಈ ವಿಚಾರದಲ್ಲಿ ಸುಳಿವು ನೀಡಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ''ರಾಮ ಸೇತುವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು,'' ಎಂದು ಹೇಳಿದ್ದಾರೆ.

ಈ ಬಗ್ಗೆ ಟೈಮ್ಸ್‌ ಆಪ್‌ ಇಂಡಿಯಾ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದ ಪ್ರಹ್ಲಾದ್ ಪಟೇಲ್, ''ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ಬೇಡಿಕೆ ಈಗ ಇದೆ. ವೈಯಕ್ತಿಕ ಮಟ್ಟದಲ್ಲಿ, ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ ಎಂದು ನಾನು ನಂಬುತ್ತೇನೆ. ನಾವು ಇಲ್ಲಿಯವರೆಗೆ ಹೊಂದಿರುವ ಜ್ಞಾನದ ಪ್ರಕಾರ, ವಾಸ್ತವವಾಗಿ ಇದನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು. ಇದರ ಬಗ್ಗೆ ವ್ಯಾಪಕವಾದ ಸಂಶೋಧನೆಯ ಅವಶ್ಯಕತೆಯಿದೆ. ಅದು ಈಗಾಗಲೇ ನಡೆಯುತ್ತಿದೆ,'' ಎಂದು ತಿಳಿಸಿದ್ದಾರೆ.

 ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ

ಆದರೂ ಈ ವಿಷಯದಲ್ಲಿ ಯಾವುದೇ ಅಧಿಕೃತ ಪ್ರಕಟಣೆಗೆ ಕಾಯಬೇಕಿದೆ ಎಂದು ಹೇಳಿದ ಪಟೇಲ್‌, "ಈ ವಿಷಯವು ನ್ಯಾಯಾಂಗಕ್ಕೆ ಒಳಪಟ್ಟ ಕಾರಣ, ನಾನು ಈ ಬಗ್ಗೆ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ," ಎಂದು ಕೂಡಾ ಉಲ್ಲೇಖಿಸಿದ್ದಾರೆ.

 ರಾಮಸೇತುವಿನ ಪೌರಾಣಿಕ ನಂಟೇನು?

ರಾಮಸೇತುವಿನ ಪೌರಾಣಿಕ ನಂಟೇನು?

ರಾಮ ಸೇತು ಅಥವಾ ಆಡಮ್ಸ್ ಬ್ರಿಡ್ಜ್‌, ದಕ್ಷಿಣ ಭಾರತದ ರಾಮೇಶ್ವರಂ ಬಳಿಯ ಪಂಬನ್ ದ್ವೀಪದಿಂದ ಶ್ರೀಲಂಕಾದ ಉತ್ತರ ಕರಾವಳಿಯ ಮನ್ನಾರ್ ದ್ವೀಪದವರೆಗೆ ಇದೆ. ಇದು ಸುಣ್ಣದ ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಸೇತುವೆಯಾಗಿದೆ. ರಾಮಾಯಣ ಮಹಾಕಾವ್ಯ ಸೇರಿದಂತೆ ಪೌರಾಣಿಕ ಭಾರತೀಯ ಗ್ರಂಥಗಳ ಪ್ರಕಾರ ಹಾಗೂ ಲಕ್ಷಾಂತರ ಹಿಂದೂಗಳ ನಂಬಿಕೆಯ ಪ್ರಕಾರ, ಶ್ರೀ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಣ ಮಾಡಿದ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ತೆರಳಿ ಸೀತೆಯನ್ನು ರಕ್ಷಿಸಲು ಶ್ರೀ ರಾಮನು ಕಪಿಸೈನ್ಯದ ಹಾಗೂ ಸ್ಥಳೀಯ ಬುಡಕಟ್ಟು ಜನಾಂಗದ ಸಹಾಯದಿಂದ ರಾಮ ಸೇತುವನ್ನು ನಿರ್ಮಿಸಿದ್ದಾನೆ.

 ರಾಮಸೇತುವೆ ವಿವಾದವೇನು?

ರಾಮಸೇತುವೆ ವಿವಾದವೇನು?

ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರವು ಸೇತುಸಮುದ್ರಂ ಶಿಪ್ಪಿಂಗ್ ಕಾಲುವೆ ಯೋಜನೆಗಾಗಿ ಸೇತುವೆಯಲ್ಲಿ ಹೂಳು ತೆಗೆಯಲು ಹಾಗೂ ಸೇತುವೆಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ ನಂತರ ರಾಮ ಸೇತು ವಿವಾದದ ಕೇಂದ್ರಬಿಂದುವಾಗಿದೆ. ಮನ್ನಾರ್ ಅನ್ನು ಪಾಕ್ ಜಲಸಂಧಿಯೊಂದಿಗೆ ಸಂಪರ್ಕಿಸುವ 83 ಕಿ.ಮೀ ಉದ್ದದ, ಆಳವಾದ ನೀರಿನ ಮಾರ್ಗವನ್ನು ನಿರ್ಮಿಸುವ ಯೋಜನೆ ಇದಾಗಿದೆ.

ಶ್ರೀಲಂಕಾದಲ್ಲಿ ಸೀತಾಮಾತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮಮಂದಿರಕ್ಕೆ ಬಳಕೆಶ್ರೀಲಂಕಾದಲ್ಲಿ ಸೀತಾಮಾತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮಮಂದಿರಕ್ಕೆ ಬಳಕೆ

 ''ರಾಮ ಕಾಲ್ಪನಿಕ ಪಾತ್ರ'' ಎಂದಿದ್ದ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ

''ರಾಮ ಕಾಲ್ಪನಿಕ ಪಾತ್ರ'' ಎಂದಿದ್ದ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ

ಸೆಪ್ಟೆಂಬರ್ 13, 2007 ರಂದು ಸುಪ್ರೀಂ ಕೋರ್ಟ್‌ಗೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ಭಗವಂತ ರಾಮನ ಅಸ್ತಿತ್ವವನ್ನು ನಿರಾಕರಿಸಲಾಗಿತ್ತು. ಹಾಗೆಯೇ ''ಇದು ಕಾಲ್ಪನಿಕ ಪಾತ್ರ'' ಎಂದು ಎಎಸ್ಐ ಹೇಳಿತ್ತು. ಯುಪಿಎ ಸರ್ಕಾರದ ಹಿರಿಯ ಸಚಿವ ಕಪಿಲ್ ಸಿಬಲ್ ಕೂಡ, ''ರಾಮಸೇತು ಮಾನವ ನಿರ್ಮಿತ ಎಂದು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದಾಗ್ಯೂ, ಜನರು ಹೊಂದಿರುವ ನಂಬಿಕೆಯನ್ನು ಗೌರವಿಸಬೇಕು,'' ಎಂದು ವಾದಿಸಿದ್ದರು. ತನ್ನ ಮಧ್ಯಂತರ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಆಡಮ್ಸ್ ಸೇತುವೆಯಲ್ಲಿ ಹೂಳೆತ್ತುವ ಚಟುವಟಿಕೆಗೆ ಅನುಮತಿಸಿತ್ತು.

 ರಾಮಸೇತುವೆ ವಿವಾದ ರಾಜಕೀಯ ಬಣ್ಣ ಪಡೆದಿದ್ದೇಕೆ?

ರಾಮಸೇತುವೆ ವಿವಾದ ರಾಜಕೀಯ ಬಣ್ಣ ಪಡೆದಿದ್ದೇಕೆ?

ರಾಮ ಸೇತುವೆ ವಿಚಾರದಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅಧಿಕೃತ ನಿಲುವನ್ನು ಬಿಜೆಪಿ ವಿರೋಧಿಸುವುದ ಬಳಿಕ ಈ ಸೇತುವೆ ವಿಚಾರವು ರಾಜಕೀಯ ಬಣ್ಣ ಪಡೆಯಿತು. ಅಷ್ಟರವರೆಗೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಪರಿಗಣಿಸಲಾಗಿದ್ದ ಈ ವಿವಾದವು ರಾಜಕೀಯ ರೂಪ ಪಡೆಯಿತು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಕೇಂದ್ರದ ಅಫಿಡವಿಟ್ ಅನ್ನು "ಧರ್ಮನಿಂದೆಯ ಮತ್ತು ಸೊಕ್ಕಿನ" ನಿರ್ಧಾರ ಎಂದು ಬಣ್ಣಿಸಿದ್ದರು. ಹಿಂದೂಗಳ ಧಾರ್ಮಿಕ ಭಾವನೆಯನ್ನು "ನೋಯಿಸಿದ" ಹಿನ್ನೆಲೆ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಎಲ್.ಕೆ.ಅಡ್ವಾಣಿ ಒತ್ತಾಯಿಸಿದ್ದರು. ಮತ್ತೊಂದೆಡೆ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಶಿಪ್ಪಿಂಗ್ ಚಾನೆಲ್ ಯೋಜನೆಯ ವಿರುದ್ಧ ಪಿಐಎಲ್ ಸಲ್ಲಿಸಿದರು.

ವಿಡಿಯೋ: ನಾಣ್ಯಗಳಲ್ಲಿ ನಿರ್ಮಿಸಿದ ಭವ್ಯ ರಾಮಮಂದಿರ ಕಲಾಕೃತಿಗೆ ಜನ ಮೆಚ್ಚುಗೆವಿಡಿಯೋ: ನಾಣ್ಯಗಳಲ್ಲಿ ನಿರ್ಮಿಸಿದ ಭವ್ಯ ರಾಮಮಂದಿರ ಕಲಾಕೃತಿಗೆ ಜನ ಮೆಚ್ಚುಗೆ

 ಸುಪ್ರೀಂ ಕೋರ್ಟ್‌ನಿಂದ ಅಫಿಡವಿಟ್‌ ಹಿಂಪಡೆದ ಯುಪಿಎ ಸರ್ಕಾರ

ಸುಪ್ರೀಂ ಕೋರ್ಟ್‌ನಿಂದ ಅಫಿಡವಿಟ್‌ ಹಿಂಪಡೆದ ಯುಪಿಎ ಸರ್ಕಾರ

ಒತ್ತಡದಲ್ಲಿ ಮತ್ತು ಪಕ್ಷಕ್ಕೆ ಉಂಟಾಗುವ ಹಾನಿಯನ್ನು ಗಮನದಲ್ಲಿರಿಸಿಕೊಂಡು ಬಳಿಕ ಕಾಂಗ್ರೆಸ್‌ ಸರ್ಕಾರ ಸುಪ್ರೀಂ ಕೋರ್ಟ್‌ನಿಂದ ಅಫಿಡವಿಟ್ ಅನ್ನು ಹಿಂತೆಗೆದುಕೊಂಡಿತು. ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ನ್ಯಾಯಪೀಠ ಯುಪಿಎ ಸರ್ಕಾರಕ್ಕೆ ಅಫಿಡವಿಟ್ ಹಿಂಪಡೆಯಲು ಅವಕಾಶ ನೀಡಿತು. ಪರಿಣಾಮವಾಗಿ, ರಾಮ ಸೇತುವಿನಲ್ಲಿ ಹೂಳೆತ್ತುವುದನ್ನು ತಡೆಹಿಡಿಯಲಾಯಿತು. ಏತನ್ಮಧ್ಯೆ, ಡಿಸೆಂಬರ್ 2017 ರಲ್ಲಿ, ಡಿಸ್ಕವರಿಯ ಸೈನ್ಸ್ ಚಾನೆಲ್ ಪ್ರಾಚೀನ ಭೂ ಸೇತುವೆ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಅದು ರಾಮಸೇತು ರಚನೆಯು ನೈಸರ್ಗಿಕವಲ್ಲ ಆದರೆ ಮಾನವ ನಿರ್ಮಿತವಾಗಿದೆ ಎಂದು ಹೇಳಿತು.

(ಒನ್‌ಇಂಡಿಯಾ ಸುದ್ದಿ)

Recommended Video

   ಪಿನಾಕ ರಾಕೆಟ್ ನ್ನ ಯಶಸ್ವಿಯಾಗಿ ಹಾರಿಸಲಾಗಿದೆ! | Oneindia Kannada
   English summary
   The ancient Ram Setu, is likely to be declared a national monument. Union culture and tourism minister Prahlad Singh Patel is of the opinion that the Ram Setu should be included in the list of the coveted World Heritage Site.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X